ಕುತೂಹಲ ಮೂಡಿಸಿದ ವಿಶ್ವನಾಥ್ – ಎ ಮಂಜು ಭೇಟಿ

ಮೈಸೂರು, ಆಗಸ್ಟ್ 15: ಮೈಸೂರು ಭಾಗದ ರಾಜಕಾರಣದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಅದಕ್ಕೆ ಪುಷ್ಟಿ ಕೊಡುವಂತೆ ಮಾಜಿ ಸಚಿವ, ಬಿಜೆಪಿ ಮುಖಂಡ ಎ.ಮಂಜು ಅವರು ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರನ್ನು ಮೈಸೂರಿನಲ್ಲಿ ಭೇಟಿಯಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಪೋನ್ ಕದ್ದಾಲಿಕೆ: ಕುಮಾರಸ್ವಾಮಿ ವಿರುದ್ಧ ವಿಶ್ವನಾಥ್ ಗರಂ
ನಗರದ ಜಲದರ್ಶಿನಿ ಅಥಿತಿ ಗೃಹದಲ್ಲಿ ಉಭಯ ನಾಯಕರಾದ ಎಚ್.ವಿಶ್ವನಾಥ್ ಮತ್ತು ಎ.ಮಂಜು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

BJP leader A Manju and H Vishwanth meets in Mysuru

ವಿಶ್ವನಾಥ್ ಅವರನ್ನ ಭೇಟಿಯಾದ ಬಳಿಕ ಪ್ರತಿಕ್ರಿಯಿಸಿದ ಮಾಜಿ ಸಚಿವ ಎ.ಮಂಜು, "ಇದು ಕೇವಲ ಉಭಯ ಕುಶಲೋಪರಿ ಭೇಟಿಯಷ್ಟೆ. ನಾನು ಆಕಸ್ಮಿಕವಾಗಿ ಮೈಸೂರಿನ ಜಲದರ್ಶಿನಿಗೆ ಬಂದೆ. ವಿಶ್ವನಾಥ್ ಅವರು ಬಿಜೆಪಿಗೆ ಬಂದಲ್ಲಿ ಖುಷಿ ಪಡುವವರಲ್ಲಿ ನಾನೇ ಮೊದಲಿಗ" ಎಂದರು.

ಹುಣಸೂರಿನಲ್ಲಿ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಎ.ಮಂಜು, "ಹುಣಸೂರಿಗೆ ಸಮರ್ಥ ಅಭ್ಯರ್ಥಿಗಳು ತುಂಬಾ ಜನ ಇದ್ದಾರೆ. ನಮ್ಮ ವಿಶ್ವಣ್ಣ ಅವ್ರೇ ಇಲ್ವಾ, ಪ್ರಬಲವಾದ ಮುಖಂಡರು. ಅವರೇ ಬೇಕಾದರೆ ನಿಲ್ಲಬಹುದು. ಆದರೆ ನಾನು ಮಾತ್ರ ಹುಣಸೂರಿನ ಟಿಕೆಟ್ ಆಕಾಂಕ್ಷಿ ಅಲ್ಲ. ನಾನು ಹುಣಸೂರಿನಲ್ಲಿ ಪಕ್ಷ ಸಂಘಟನೆಯಲ್ಲಿ ಇರುತ್ತೇನೆ ಅಷ್ಟೇ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+