ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲೀಗ ಹಕ್ಕಿಜ್ವರ; ಕೋಳಿ, ಪಕ್ಷಿಗಳನ್ನು ಕೊಲ್ಲಲು ನಿರ್ಧಾರ

|
Google Oneindia Kannada News

ಮೈಸೂರು, ಮಾರ್ಚ್ 17: ಮೈಸೂರಿನಲ್ಲಿ ಹಕ್ಕಿಜ್ವರವಿರುವುದು ದೃಢಪಟ್ಟಿದ್ದು, ತಕ್ಷಣವೇ ಸಾಕು ಪಕ್ಷಿಗಳ ಸರ್ವೇ ಕಾರ್ಯ ಮಾಡಿ ಮೂರ್ನಾಲ್ಕು ದಿನದೊಳಗೆ ಸಾಮೂಹಿಕವಾಗಿ ಸೋಂಕಿತ ಪಕ್ಷಿಗಳನ್ನು ಕೊಲ್ಲುವ ನಿರ್ಧಾರಕ್ಕೆ ಬರಲಾಗಿದೆ.

Recommended Video

Thousands of migratory birds gathered in Gujarat’s Surat to spend their winters | Oneindia Kannada

ಮೈಸೂರಿನ ಕುಂಬಾರಕೊಪ್ಪಲು ಮನೆಯೊಂದರಲ್ಲಿ ಸತ್ತಿದ್ದ ಕೋಳಿ, ಸ್ಮಶಾನದಲ್ಲಿ ಸಾವನ್ನಪ್ಪಿದ್ದ ಪಕ್ಷಿಯ ಮೃತದೇಹದ ಮಾದರಿ‌ಗಳನ್ನು ಭೂಪಾಲ್‌ನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಹೈಸೆಕ್ಯೂರಿಟಿ ಅನಿಮಲ್ ಡೀಸಿಸ್ ‌ಗೆ ಕಳುಹಿಸಲಾಗಿತ್ತು. ಮೈಸೂರಿನಿಂದ ಕಳುಹಿಸಿದ್ದ ಏಳು ಮಾದರಿಗಳಲ್ಲಿ ಎರಡು ಮಾದರಿಗಳು ಪಾಸಿಟಿವ್ ಬಂದಿದೆ.

ಕೊರೊನಾ ವೈರಸ್ ಬೆನ್ನಲ್ಲೇ ಮೈಸೂರಲ್ಲಿ ಹಕ್ಕಿ ಜ್ವರದ ಭೀತಿ

 ಕುಂಬಾರಕೊಪ್ಪಲು ಸುತ್ತಮುತ್ತಲು ಸಾಕು ಪಕ್ಷಿಗಳ ಸರ್ವೇ ಕಾರ್ಯ

ಕುಂಬಾರಕೊಪ್ಪಲು ಸುತ್ತಮುತ್ತಲು ಸಾಕು ಪಕ್ಷಿಗಳ ಸರ್ವೇ ಕಾರ್ಯ

ಒಂದು ಕೋಳಿ, ಪಕ್ಷಿ ಹಕ್ಕಿಜ್ವರದಿಂದ ಮೃತಪಟ್ಟಿರುವುದು ವರದಿಯಲ್ಲಿ ದೃಢವಾಗಿದ್ದು, ಸೋಮವಾರ ಮಧ್ಯಾಹ್ನ ಈ ವರದಿ ಕೈ ಸೇರಿದೆ. ಹೀಗಾಗಿ, ನಗರಪಾಲಿಕೆ, ಪಶುಪಾಲನಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಹಲವು ತುರ್ತು ಕ್ರಮಗಳನ್ನು ಕೈಗೊಂಡು ಹಕ್ಕಿಜ್ವರ ಹರಡದಂತೆ ಮುಂಜಾಗ್ರತಾ ಕ್ರಮ ಆರಂಭಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮಾಹಿತಿ ನೀಡಿದ್ದು, ಮಹಾನಗರ, ಪಶುಪಾಲನಾ ಇಲಾಖೆ ತಂಡ ಕುಂಬಾರಕೊಪ್ಪಲು ಸುತ್ತಮುತ್ತಲ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸಾಕು ಪಕ್ಷಿಗಳ ಸರ್ವೇ ಕಾರ್ಯ ಆರಂಭಿಸಲಾಗಿದೆ.

 ಸಾಕು ಪಕ್ಷಿಗಳನ್ನು ಕೊಲ್ಲಲು ರಾಪಿಡ್ ರೆಸ್ಕೋ ಟೀಂ

ಸಾಕು ಪಕ್ಷಿಗಳನ್ನು ಕೊಲ್ಲಲು ರಾಪಿಡ್ ರೆಸ್ಕೋ ಟೀಂ

ಇನ್ನು ಎರಡು-ಮೂರು ದಿನದಲ್ಲಿ ಸರ್ವೇ ಕಾರ್ಯ ಮುಗಿಸಿದ ತಕ್ಷಣವೇ ವಿಶೇಷ ತಂಡದಿಂದ ಅದನ್ನು ಸಾಮೂಹಿಕವಾಗಿ ಕೊಲ್ಲುವ ಕೆಲಸ ಮಾಡಲಾಗುತ್ತದೆ. ಸಾಕು ಪಕ್ಷಿಗಳನ್ನು ಕೊಲ್ಲಲು ರಾಪಿಡ್ ರೆಸ್ಕೋ ಟೀಂ (ಆರ್‌ಆರ್‌ಟಿ) ರಚನೆ ಮಾಡಲಾಗುತ್ತಿದ್ದು, ಇವರಿಗೆ ಸಂಪೂರ್ಣ ಹೊಣೆ ಹೊರಿಸಲಾಗಿದೆ. ಕಾರ್ಯಾಚರಣೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಸಿಬ್ಬಂದಿ ವಾರದ ಕಾಲ ಪ್ರತ್ಯೇಕವಾಗಿ ಇರುತ್ತದೆ. ಇವರಿಗೆ ಬೇಕಾದ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಕುಕ್ಕರಹಳ್ಳಿಯಲ್ಲಿ ಪೆಲಿಕಾನ್ ಸಾವು; ಹಕ್ಕಿಜ್ವರ ಕಾರಣವಲ್ಲಕುಕ್ಕರಹಳ್ಳಿಯಲ್ಲಿ ಪೆಲಿಕಾನ್ ಸಾವು; ಹಕ್ಕಿಜ್ವರ ಕಾರಣವಲ್ಲ

 ಕುಂಬಾರಕೊಪ್ಪಲಿನ 1ಕಿ.ಮೀ ವ್ಯಾಪ್ತಿ ಇನ್ ಫೆಕ್ಟೆಡ್ ಏರಿಯಾ

ಕುಂಬಾರಕೊಪ್ಪಲಿನ 1ಕಿ.ಮೀ ವ್ಯಾಪ್ತಿ ಇನ್ ಫೆಕ್ಟೆಡ್ ಏರಿಯಾ

ಕುಂಬಾರಕೊಪ್ಪಲಿನ ಒಂದು ಕಿ.ಮೀ ಸುತ್ತಲೂ ಇನ್‌ಫೆಕ್ಟೆಡ್ ಏರಿಯಾ ಎಂದು ಗುರುತಿಸಲಾಗುತ್ತದೆ. ಸಾಕು ಪ್ರಾಣಿಗಳನ್ನು ಕೊಲ್ಲುವ ಕೆಲಸ ಮಾಡಿದ ಬಳಿಕ ಈ ಪ್ರದೇಶವನ್ನು ಕೆಮಿಕಲ್ ‌ನಿಂದ ಕ್ಲೀನ್ ಮಾಡಲಾಗುತ್ತದೆ. ಮತ್ತೊಮ್ಮೆ ಬರದಂತೆ ಎಲ್ಲ ರೀತಿಯ ಔಷಧ ಸಿಂಪಡಣೆ ಮಾಡಲಾಗುತ್ತದೆ. ಕುಂಬಾರಕೊಪ್ಪಲಿನಲ್ಲಿ ಕೋಳಿ ಸತ್ತಿರುವ ಮನೆಯವರಿಗೆ ಈಗ ಮಾತ್ರೆ ಕೊಟ್ಟು ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗುವುದು. ಸಾಮೂಹಿಕವಾಗಿ ಕೋಳಿ ಕೊಲ್ಲುವವರೆಗೆ ಕುಂಬಾರಕೊಪ್ಪಲು ಸುತ್ತಮುತ್ತಲ 10 ಕಿ.ಮೀ ಕೋಳಿ ಮಾಂಸ ಮಾರಾಟ ಬಂದ್ ಮಾಡಲು ಆದೇಶ ನೀಡಲಾಗಿದೆ ಎಂದರು.

 ಮಾರಾಟ ಮಾಡದಂತೆ ಚೆಕ್ ಪೋಸ್ಟ್ ನಲ್ಲಿ ತಪಾಸಣೆ

ಮಾರಾಟ ಮಾಡದಂತೆ ಚೆಕ್ ಪೋಸ್ಟ್ ನಲ್ಲಿ ತಪಾಸಣೆ

ಹಕ್ಕಿಜ್ವರದಿಂದ ಮನುಷ್ಯನಿಗೆ ಯಾವುದೇ ತೊಂದರೆ ಇಲ್ಲ. ಇದು ಹರಡುವುದಿಲ್ಲವೆಂದು ವರದಿಯಲ್ಲಿ ಬಂದಿದೆ. ಆದರೆ, ಪಕ್ಷಿಯಿಂದ ಪಕ್ಷಿಗೆ ಹರಡುವುದನ್ನು ತಪ್ಪಿಸಲು ಸಾಕು ಪಕ್ಷಿಗಳನ್ನು ಕೊಲ್ಲುವವರಿಗೆ, ಕೋಳಿ ಮಾಂಸ ಮಾರಾಟ ಬಂದ್ ಮಾಡಲು ಸೂಚಿಸಲಾಗಿದೆ. ಈಗಾಗಲೇ ಪೊಲೀಸ್ ಇಲಾಖೆ, ನಗರಪಾಲಿಕೆ ಅಧಿಕಾರಿಗಳು ಈ ವ್ಯಾಪ್ತಿಯ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಈ ಪ್ರದೇಶದಲ್ಲಿ ಪೌಲ್ಟ್ರಿ ಫಾರಂ ಇಲ್ಲದಿರುವುದು ಕಂಡುಬಂದಿದೆ. ಆದರೆ, ಕೋಳಿ ಸಾಕಾಣಿಕೆ, ಮಾರಾಟ ಮಾಡುವುದರಿಂದ ಇಲ್ಲಿರುವವರು ಕಡಿಮೆ ಬೆಲೆಗೆ ಮಾರಾಟ ಮಾಡಲು ಕೊಂಡೊಯ್ಯುವುದು, ಬೇರೆ ಕಡೆಯಿಂದ ತಂದು ಮಾರಾಟ ಮಾಡುವುದನ್ನು ತಪ್ಪಿಸಲು ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಿ ತಪಾಸಣೆ ಮಾಡಲಾಗುತ್ತದೆ ಎಂದರು. ಕೋಳಿ ಮಾಂಸ ಸೇವನೆ ಮಾಡಿದರೆ ಹಕ್ಕಿಜ್ವರ ಬರುವುದಿಲ್ಲ. ಆದರೆ ಪಕ್ಷಿಯಿಂದ ಪಕ್ಷಿಗೆ ಹರಡುವುದನ್ನು ತಡೆಯಲು ಕ್ರಮಕೈಗೊಳ್ಳಲಾಗಿದೆಯೇ ಹೊರತು ಇದರಿಂದ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

English summary
District administration has confirmed birdflu in mysuru. So it decided to do a survey of birds in home a to kill mass,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X