Bhavani Revanna: ಸಾಮಾನ್ಯ ವ್ಯಕ್ತಿಗೆ ತೀರಾ ಕೀಳುಮಟ್ಟದ ಪದಗಳಿಂದ ನಿಂದಿಸಿದ ಭವಾನಿ ರೇವಣ್ಣ, ವಿಡಿಯೋ ವೈರಲ್‌

ಮೈಸೂರು, ಡಿಸೆಂಬರ್‌, 04: ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಕಾರಿಗೆ ಬೈಕ್ ಡಿಕ್ಕಿಯಾಗಿದ್ದು, ಈ ವೇಳೆ ಭವಾನಿ ರೇವಣ್ಣ ಬೈಕ್ ಸವಾರನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮದ ಬಳಿ ನಡೆದಿದೆ.

ಬೈಕ್ ಸವಾರ ಶಿವಣ್ಣ ಎಂಬಾತ ಭವಾನಿ ರೇವಣ್ಣ ಅವರ KA-03-NK-5 ನಂಬರ್‌ನ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ರೋಷವೇಷಗೊಂಡ ಭವಾನಿ ರೇವಣ್ಣ ಅವರು, ಬೋರ್ಡು ಗೀರ್ಡು ಏನು ಎಲ್ಲಾ ಡ್ಯಾಮೇಜ್ ಆಗಿದೆ. ಎಲ್ಲಿಗೆ ನುಗ್ಗುಸ್ತಿಯಾ ಮಧ್ಯದಲ್ಲಿ, ತೆಗೆದು ಸುಟ್ಟು ಹಾಕ್ರೋ ಈ ಬೇವರ್ಸಿ ಸೂಳೆಮಗನ ಗಾಡಿನಾ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ನಡೆದಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

Bhavani Revanna insulted to common man in Saligrama

ಭವಾನಿ ರೇವಣ್ಣ ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ಪ್ರಯಾಣಿಸುತ್ತಿದ್ದಾಗ ರಾಂಪುರ ಗ್ರಾಮದ ಗೇಟ್‌ನಲ್ಲಿ ಈ ಘಟನೆ ನಡೆಸಿದೆ. ಅಂತಹ ಅರ್ಜೆಂಟ್‌ ಏನಿತ್ತು? ಗಾಡಿಗೆ ಎಷ್ಟು ಡ್ಯಾಮೇಜ್‌ ಆಗಿದೆ, ರೆಡಿ ಮಾಡಿಸುವುದು ಹೇಗೆ? ಎಂದು ಕೇಳುವ ಮೂಲಕ ಅವಾಜ್‌ ಹಾಕಿದ್ದಾರೆ.

ಇದೇ ವೇಳೆ ಮಧ್ಯಪ್ರವೇಶಿಸಿದ ಸ್ಥಳೀಯರನ್ನು 1.50 ಕೋಟಿ ಕಾರ್‌ ಇದು, 50 ಲಕ್ಷ ರೂಪಾಯಿ ರಿಪೇರಿ ಮಾಡಿಸೋದಕ್ಕೇ ಕೊಡ್ತೀರಾ? ಹಣ ಕೊಡಂಗಿದ್ರೆ ನ್ಯಾಯದ ಬಗ್ಗೆ ಮಾತನಾಡುವುದಕ್ಕೆ ಬನ್ನಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಬೈಕ್‌ ಸವಾರನ ಮೊಬೈಲ್‌ ಫೋನ್‌ ಕಸಿದುಕೊಂಡು, ಗಾಡಿ ಸೀಜ್‌ ಮಾಡು. ಸಾಲಿಗ್ರಾಮ ಎಸ್‌ಐ ಬರೋಕೆ ಹೇಳಿ ಎಂದು ಸಹಾಯಕರಿಗೆ ತಿಳಿಸಿರುವ ವಿಡಿಯಯೋ ಭಾರೀ ವೈರಲ್‌ ಆಗಿದೆ.

ಸವಾರ ಹಾಗೂ ಜೊತೆಗಿದ್ದವರನ್ನು ಕಾರ್‌ ಹಾಗೂ ದ್ವಿಚಕ್ರವಾಹನದ ಬಳಿ ನಿಲ್ಲಿಸಿ ತಮ್ಮ ಮೊಬೈಲ್‌ ಫೋನ್‌ನಲ್ಲಿ ಫೋಟೋ ತೆಗೆದುಕೊಂಡಿದ್ದಾರೆ. ಇನ್ನು ಸಿಪಿಐ ಜಿ.ಕೃಷ್ಣರಾಜು ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಬೈಕ್‌ ಸವಾರ ತಂದ್ರೆಕೊಪ್ಪಲು ಗ್ರಾಮದ ಶಿವಣ್ಣ ಅವರ ವಿರುದ್ಧ ಸಾಲಿಗ್ರಾಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+