ಜನಪ್ರಿಯ ಬಿಜೆಪಿ ನಾಯಕ ಯತ್ನಾಳ್: ಉರಿವ ಬೆಂಕಿಗೆ ತುಪ್ಪ ಸುರಿದ ಪ್ರತಾಪ್ ಸಿಂಹ
Pratap Simha: ಇದೀಗ ರಾಜ್ಯದಲ್ಲಿ ಮುಡಾ, ಹಾಗೂ ವಾಲ್ಮೀಕಿ ನಿಗಮ ಹಗರಣ ಪ್ರಕರಣಗಳು ತುಂಬಾ ಸುದ್ದಿಯಲ್ಲಿವೆ. ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತುವಲ್ಲಿ ವುಪಕ್ಷಗಳು ವಿಫಲವಾಗಿವೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಇದೀಗ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಇದೇ ವೇಳೆ ಯತ್ನಾಳ್ ಬಗ್ಗೆ ಆಶ್ಚರ್ಯಕರ ಹೇಳಿ ನೀಡಿ ಗಮನ ಸೆಳೆದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಮೂಡಾಗಿಂತ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಣದ ಅಕ್ರಮ ಗಂಭೀರವಾದ ಹಗರಣವಾಗಿದೆ. ಅದನ್ನು ನಾವು ಕೈಗೆತ್ತಿಕೊಂಡು ಪಾರದರ್ಶಕವಾಗಿ ಪಾದಯಾತ್ರೆ ಮಾಡಬೇಕು ಅಂತಾ ಹೇಳಿ, ವಿಪಕ್ಷದಲ್ಲಿರುವಂತಹ ಕೆಲ ಹಿರಿಯರು ಯೋಚನೆ ಮಾಡಿದ್ದಾರೆ. ಆದ್ದರಿಂದ ಬೆಳಗಾವಿಗೆ ನನ್ನನ್ನು ಸಹ ಬರುವುದಕ್ಕೆ ಹೇಳಿದ್ದರು. ಇವತ್ತು ರಾಜ್ಯದಲ್ಲಿ ಎಲ್ಲಾ ಜಾತಿ-ಜನಾಂಗಗಳಲ್ಲೂ ಹೋಲಿಕೆ ಮಾಡಿದ್ರೆ, ಎಲ್ಲಾ ಜಾತಿಗಳಲ್ಲಿರುವ ಅಭಿಮಾನಿಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ಬಿಜೆಪಿಯಲ್ಲಿ ಅತ್ಯಂತ ಜನಪ್ರಿಯ ನೇತಾರ ಬಸನಗೌಡ ಪಾಟೀಲ್ ಯತ್ನಾಳ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅಲ್ಲದೆ, ಸಿದ್ದೇಶ್ವರ್ ಅವರು ಕೂಡ ಬರುತ್ತಿದ್ದರು. ಕುಮಾರ್ ಬಂಗರಪ್ಪನವರು ಬರುತ್ತಿದ್ದರು. ಇದು ಹಿಂದುಳಿದ ಜಾತಿ-ಜನಾಂಗಗಳಿಗೆ ಆಗಿರುವಂತಹ ಅನ್ಯಾಯ ಆಗಿದೆ. ಇದರ ಬಗ್ಗೆ ನಾವು ಪಾದಯಾತ್ರೆಯನ್ನು ಮಾಡಬೇಕು. ಜನರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಸರ್ಕಾರದ ವಿರುದ್ಧ ನಮ್ಮ ಬಳಿ ಎಲ್ಲಾ ರೀತಿಯ ಸಾಕ್ಷಧಾರಗಳಿವೆ. ಬೆಂಗಳೂರು-ಮೈಸೂರು ನಡುವೆ ನಡೆದ ಮುಡಾಕ್ಕೆ ಸಂಬಂಧಿಸಿದಂತಹ ಮೈಸೂರು ಚಲೋದಲ್ಲಿ ಹಂಚಿಕೊಂಡ ರೀತಿ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ ಎಂದರು.
ನಾವು ಯಾವ ರೀತಿ ರೂಪುರೇಷೆಗಳನ್ನು ತಯಾರಿ ಮಾಡಬಹುದು ನನ್ನನ್ನು ಕೇಳಿದರು, ಹೋಗಿ ನಾನು ಹೇಳಿದ್ದೀನಿ ಅಷ್ಟೇ. ಇದನ್ನು ಹೊರತುಪಡಿಸಿದರೆ, ಇದು ಯಾವ ಭಿನ್ನಮತೀಯ ಸಭೆ, ಅತೃಪ್ತರ ಸಭೆಯಲ್ಲ ಎಂದರು. ಅಲ್ಲದೆ, ಬಿಜೆಪಿಯ ಬಲವರ್ಧನೆಗಾಗಿ ಸಭೆ ಹೊರತು, ಯಾವ ಬಂಡಾಯದ ಸಭೆ ಅಲ್ಲ ಎಂದರು.

ಮುಡಾ ಹಗರಣದ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ ಅವರು, ಇದು ಕೇವಲ ಮೈಸೂರು ಜಿಲ್ಲೆಗೆ ಸಂಬಂಧಿಸಿದ ಪ್ರಕರಣದ ಆಗಿತ್ತು. ಅದರಲ್ಲಿ ಸಿಎಂ ಸಿದ್ದರಾಮಯ್ಯ ಅವರು 14-16 ಸೈಟುಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎನ್ನುವುದು ದೊಡ್ಡ ವಿಷಯವಾಗಿತ್ತು. ಆದರೆ, ಅದಕ್ಕಿಂತ ದೊಡ್ಡ ಹಗರಣದ ಏನೆಂದದರೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡದದಿರುವುವಂತಹದ್ದು ಎಂದರು.
ಸುಮಾರು 187 ಕೋಟಿ ರೂಪಾಯಿಯನ್ನ ಅಕ್ರಮವಾಗಿ ಬೇರೆ-ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ, ನಮ್ಮ ಎಸ್‌ಟಿ ಜನಾಂಗಕ್ಕೆ ಸೇರಬೇಕಾದ ಹಣವನ್ನ ಕಬಳಿಸಿದ್ದಾರೆ. ಅಲ್ಲದೆ, ಗ್ಯಾರಂಟಿ ಯೋಜನೆಗಳಿಗಾಗಿ ಸಮಾಜ ಕಲ್ಯಾಣ ಇಲಾಖೆ ಮುಖಾಂತರ 20,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ದುಂದುವೆಚ್ಚ ಮಾಡಿದ್ದಾರೆ. ಇದು ತುಂಬಾ ದೊಡ್ಡ ಹಗರಣ ಆಗಿದೆ. ಇದು ರಾಜ್ಯದ ಮೂಲೆ ಮೂಲೆಗಳಲ್ಲಿ ಎಸ್‌ಸಿ ಎಸ್ಟಿ ಜನಾಂಗದವರಿಗೆ ಆಗಿರುವ ಅನ್ಯಾಯವಾಗಿದೆ.
ಆದ್ದರಿಂದ ಈ ವಿಚಾರಕ್ಕೆ ಮಹತ್ವ ಕೊಡಬೇಕಾದ ಅನಿವಾರ್ಯತೆ ನಮ್ಮದಾಗಿದೆ. ಅದರಲ್ಲೂ ಹಿಂದುಳಿದ ಜಾತಿ-ಜನಾಂಗಗಳಿಗೆ ಸೇರಬೇಕಾದ ಹಣವನ್ನು ಈ ರೀತಿ ಪೋಲ್ ಮಾಡಿರುವುವಂತಹದ್ದು ಹಾಗೂ ವಿಧಾನಸಭೆಯಲ್ಲೇ ಈ ಬಗ್ಗೆ ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಆದರೆ, 187 ಕೋಟಿ ಅಲ್ಲ, ಬರೀ 87 ಕೋಟಿ ಅಂತಲೂ ಅವರು ಹೇಳಿದ್ದಾರೆ. ಆದರೆ, ಹಣದ ಪ್ರಮಾಣವನ್ನು ಅವರು ಕಡಿಮೆ ಮಾಡಿ ಹೇಳಿರಬಹುದು ಎಂದರು.
ಆದರೆ ಮೂಡಾ ವಿಚಾರದಲ್ಲಿ ಮಾತ್ರ ಕಾನೂನುನುಬಾಹಿರವಾಗಿ ನಡೆದುಕೊಂಡಿದ್ದೇವೆ ಅಂತಾ ಅವರು ಯಾವತೂ ಹೇಳಿಲ್ಲ. ಆದರೆ, ವಾಲ್ಮೀಕಿ ನಿಗಮದ ಹಣದ ಅಕ್ರಮದ ಬಗ್ಗೆ ಅವರೇ ಸವತಃ ಒಪ್ಪಿಕೊಂಡಿದ್ದಾರೆ. ಅವರು ಹಣಕಾಸು ಸಚಿವರೂ ಕೂಡ ಆಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications