• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಸರಾ ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿಗೆ ಡಿಮ್ಯಾಂಡೋ ಡಿಮ್ಯಾಂಡು

|

ಮೈಸೂರು, ಅಕ್ಟೋಬರ್. 11: ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿಗೆ ಡಿಮ್ಯಾಂಡೋ ಡಿಮ್ಯಾಂಡು. ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿಗೆ ಭೋಜನ ಪ್ರಿಯರು ಸಾಲುಗಟ್ಟಿ ನಿಂತಿದ್ದರು.

ಬುಡ್ಡಕಟ್ಟು ಜನರು ಬಿರಿಯಾನಿಯನ್ನು ತಯಾರಿಸಲು ಬೊಂಬಿನೊಳಗೆ ಅಕ್ಕಿ, ಮಸಾಲೆ ಸೇರಿದಂತೆ ವಿವಿಧ ಪದಾರ್ಥಗಳನ್ನು ತುಂಬಿ ಬೆಣೆ ಹಾಕಿ ಮುಚ್ಚುತ್ತಾರೆ. ಅರ್ಧಗಂಟೆ ಸೌದೆಯ ಒಲೆಯಲ್ಲಿ ಬೇಯಿಸಿ ಭೋಜನ ಪ್ರಿಯರಿಗೆ ಸವಿಯಲು ನೀಡುತ್ತಾರೆ.

ಆಹಾರ ಪ್ರಿಯರಿಗೆ ದಸರೆಯಲ್ಲಿ ಬಂಬೂ ಬಿರಿಯಾನಿ ಭಾಗ್ಯ!

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮತ್ತು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಬುಡಕಟ್ಟು ಹಾಡಿಯ ಮನೆ ಎಂಬ ಹೆಸರಿನ ಬಂಬೂ ಬಿರಿಯಾನಿ ಮಳಿಗೆ ತೆರೆಯಲಾಗಿದೆ. ಇದು ಜನರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಆಹಾರ ಮೇಳದಲ್ಲಿ ತನ್ನದೇ ಆದ ಹೆಸರು ಪಡೆದಿರುವ ಬಂಬೂ ಬಿರಿಯಾನಿ ಮಾಡುವ ಬಗೆ ಹೇಗೆ? ಅದರ ತಯಾರಿ ಹಿಂದಿರುವ ಕಾಣದ ಕೈಗಳ ಶ್ರಮವೆಷ್ಟು? ಇದರ ಬಗ್ಗೆ ಆಹಾರ ಮೇಳದಲ್ಲಿ ಬೊಂಬು ಬಿರಿಯಾನಿ ತಯಾರು ಮಾಡುವ ಶ್ರಮಿಕರು ಹೇಳಿದ್ದು ಹೀಗೆ...

 ಕೆಂಡದಲ್ಲಿ 40 ನಿಮಿಷ ಬೇಯಿಸಬೇಕು

ಕೆಂಡದಲ್ಲಿ 40 ನಿಮಿಷ ಬೇಯಿಸಬೇಕು

ಬಂಬೂ ಬಿರಿಯಾನಿ ಮಾಡುವುದು ಸುಲಭದ ಕೆಲಸವಲ್ಲ . ಬಿರಿಯಾನಿಗೆ ಬೇಕಾಗಿರುವ ಪದಾರ್ಥಗಳನ್ನು ಪಾತ್ರೆಗೆ ಹಾಕಿ ಫ್ರೈ ಮಾಡಿ, ಅಕ್ಕಿ ಸೇರಿಸುವುದು ಸಾಮಾನ್ಯ. ಆದರೆ ನಾವು ಮಾಡುವ ಬಿರಿಯಾನಿಗೆ ಮುಖ್ಯವಾಗಿ ಬಿದಿರಿನ ಬೊಂಬುಗಳು ಬೇಕು.

ಪ್ರತಿ ಬೊಂಬಿಗೆ ಇನ್ನೂರು ರೂಪಾಯಿಯಂತೆ ತರಿಸಿಕೊಳ್ಳುತ್ತಿದ್ದೇವೆ. ಬೊಂಬು ಬಿರಿಯಾನಿ ಮಾಡಲು ಒಟ್ಟು 30 ಬೊಂಬುಗಳು ಬೇಕು.

ಹೀಗೆ ಕತ್ತರಿಸಿಕೊಂಡ ಸುಮಾರು 3 ಅಡಿ ಉದ್ದದ ಬಿದಿರ ಬೊಂಬಿಗೆ ಮೊದಲು ಬಿರಿಯಾನಿ, ಮಸಾಲೆ, ಕೋಳಿ ಮಾಂಸ ಹಾಕಿ ನಂತರ ನೀರು ಮತ್ತು ಅಕ್ಕಿಯನ್ನು ಹಾಕಿ ಎರಡೂ ಕಡೆ ಮುಚ್ಚಿ ಅದನ್ನು ಕೆಂಡದಲ್ಲಿ ಸುಮಾರು 40 ನಿಮಿಷ ಬೇಯಿಸಲಾಗುವುದು.

 ಗಾಳಿ ಹೊರಹೋಗಲು ಸಣ್ಣ ರಂಧ್ರ

ಗಾಳಿ ಹೊರಹೋಗಲು ಸಣ್ಣ ರಂಧ್ರ

ಹೀಗೆ ಆಹಾರ ಬೇಯಿಸುವಾಗ ಕುಕ್ಕರ್ ನಂತೆಯೇ ಗಾಳಿ ಹೊರಹೋಗಲು ಸಣ್ಣ ರಂಧ್ರವೊಂದನ್ನು ಮಾಡಬೇಕಾಗುತ್ತದೆ. ಇಲ್ಲವಾದರೆ ಗಾಳಿ ಹೊರ ಹೋಗಲು ಸಾಧ್ಯವಾಗದೆ ಬಂಬೂ ಸಿಡಿಯುತ್ತದೆ. ಒಂದು ವೇಳೆ ಅದು ಸಿಡಿದರೆ ಪಕ್ಕದಲ್ಲಿರುವವರಿಗೆ ಹಾನಿ ಉಂಟಾಗುವ ಸಂಭವ ಹೆಚ್ಚು. ಅಲ್ಲದೆ ಹೀಗೆ ಸಿಡಿದ ಆಹಾರ ತಿನ್ನಲು ಯೋಗ್ಯವಾಗಿರುವುದಿಲ್ಲ.

ಅಕ್ಟೋಬರ್. 11 ರ ವಿವಿಧ ವೇದಿಕೆಗಳ ಮೈಸೂರು ದಸರಾ ಕಾರ್ಯಕ್ರಮಗಳ ವಿವರ

 ಮೂರರಿಂದ ಐದು ಪ್ಲೇಟ್ ಬಿರಿಯಾನಿ

ಮೂರರಿಂದ ಐದು ಪ್ಲೇಟ್ ಬಿರಿಯಾನಿ

ಹೀಗೆ ಬೆಂದ ನಂತರ ಅವುಗಳನ್ನು ಕೆಂಡದಿಂದ ತೆಗೆದು ಹೊರಗಿಡಲಾಗುತ್ತದೆ. ಸ್ವಲ್ಪ ಬಿಸಿ ಆರಿದ ನಂತರ ಕುಡುಗೋಲಿನಿಂದ ಬಿದಿರನ್ನು ಸೀಳಿ ಅದರೊಳಗಿರುವ ಬಿರಿಯಾನಿ ಮಾತ್ರ ತೆಗೆಯುತ್ತೇವೆ. ಹೀಗೆ ತೆಗೆದ ಒಂದು ಗುಂಪಿನಲ್ಲಿ ಮೂರರಿಂದ ಐದು ಪ್ಲೇಟ್ ಬಿರಿಯಾನಿ ಸಿಗುತ್ತದೆ. ಕೆಲವು ಬಾರಿ ಬೊಂಬು ಚಿಕ್ಕದಿದ್ದರೆ ಕಡಿಮೆ ಪ್ಲೇಟ್ ಸಿಗುತ್ತದೆ ಎನ್ನುತ್ತಾರೆ ಬಿರಿಯಾನಿ ತಯಾರಕರು .

ದಸರಾ ಆಹಾರ ಮೇಳ: ಅಕ್ಟೋಬರ್ 11 ರಿಂದ ವಿಶೇಷ ನಳಪಾಕ ಸ್ಪರ್ಧೆ

 ಒಂದು ಪ್ಲೇಟ್ ಗೆ 150 ರೂ.

ಒಂದು ಪ್ಲೇಟ್ ಗೆ 150 ರೂ.

ಇನ್ನು ಈ ಬಂಬೂ ಬಿರಿಯಾನಿ ತಯಾರಕರು ಎಚ್ ಡಿ ಕೋಟೆ , ಮಡಿಕೇರಿ , ಕುಶಾಲನಗರ ಮತ್ತು ಕೇರಳ ಗಡಿ ಭಾಗಗಳಲ್ಲಿ ಸುಮಾರು 20 ಮಂದಿ ಇದ್ದಾರೆ . ಈ ಮೇಳದಲ್ಲಿ ಬೊಂಬು ಬಿರಿಯಾನಿ ಮಾತ್ರವಲ್ಲದೆ ವಿವಿಧ ರೀತಿಯ ತಿಂಡಿತಿನಿಸುಗಳು ಕೂಡ ಸವಿಯಲು ಸಿಗುತ್ತದೆ.

ಒಂದು ಪ್ಲೇಟ್ ಬಂಬೂ ಬಿರಿಯಾನಿಗೆ 150 ರೂ., ಬಿದರಕ್ಕಿ ಪಾಯಸ 50 ರೂ, ಕಾಡು ಗೆಣಸು, ಜೇನು ಪ್ಲೇಟ್ ಗೆ 25 ರೂ. ಮಾಕಳ್ಳಿ ಬೇರಿನ ಟೀ 20 ರೂ, ಬಿದುರುಕಳ್ಳಿ ಒಂದು ಕಪ್ ಗೆ 25 ರೂ.ಗೆ ದೊರೆಯಲಿದೆ. ಮುದ್ದೆ-ಉಪ್ಸಾರುಗೆ 50 ರೂ, ನಳ್ಳಿ ಸಾಂಬಾರು ಮುದ್ದೆ ಊಟಕ್ಕೆ 100 ರೂಗೆ ಭೋಜನ ಪ್ರಿಯರಿಗೆ ಸವಿಯಲು ದೊರೆಯುತ್ತದೆ.

ಮೈಸೂರಲ್ಲಿ ಮಹಿಳೆಯರಿಗೆ ಇಡ್ಲಿ ತಿನ್ನುವ ಸ್ಪರ್ಧೆ: ಗೆದ್ದೋರು ತಿಂದದ್ದೆಷ್ಟು?

English summary
Bamboo biryani has got the demand at the Mysuru Dasara Food Fair. People are lining up to taste it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X