ಮೈಸೂರಿನಲ್ಲಿ ಆಟೋ ಡಿಕ್ಕಿ ಜಗಳಕ್ಕೆ ನಡೆಯಿತು ಎರಡು ಕೊಲೆ

ಮೈಸೂರು, ಮೇ 25: ಆಟೋಗಳೆರಡು ಪರಸ್ಪರ ಡಿಕ್ಕಿ ಹೊಡೆದಿದ್ದು, ಆ ಕಾರಣಕ್ಕೇ ಆರಂಭವಾದ ಜಗಳ ಇಬ್ಬರ ಸಾವಿನಲ್ಲಿ ಅಂತ್ಯ ಕಂಡ ಘಟನೆ ಇಲ್ಲಿಗೆ ಸಮೀಪದ ಕೋಟೆ ಹುಂಡಿ ಬಳಿ ನಿನ್ನೆ ರಾತ್ರಿ ನಡೆದಿದೆ.

ನಿನ್ನೆ ರಾತ್ರಿ, ಲಗೇಜ್ ಆಟೋ ಹಾಗೂ ಪ್ಯಾಸೆಂಜರ್ ಆಟೋ ಎದುರು ಬದುರಾಗಿ ಬಂದು ಡಿಕ್ಕಿ ಹೊಡೆದಿವೆ. ಈ ಸಮಯ ಇಬ್ಬರು ಆಟೋ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಈ ಗಲಾಟೆ ಹೊಡೆದಾಟದ ಹಂತಕ್ಕೆ ಹೋಗಿ ಸಾವಿನಲ್ಲಿ ಅಂತ್ಯ ಕಂಡಿದೆ.

ಪ್ಯಾಸೆಂಜರ್ ಆಟೋ ಚಾಲಕ ಯೋಗೇಶ್ ಎಂಬಾತ, ಲಗೇಜ್ ಆಟೋ ಚಾಲಕ ಹಾಗೂ ಆ ಆಟೋದಲ್ಲಿದ್ದ ಮತ್ತೊಬ್ಬ ವ್ಯಕ್ತಿಗೆ ಚಾಕುವಿನಿಂದ ಇರಿದಿದ್ದಾನೆ.

Auto Drivers Quarrel Leads To Murder In Mysuru

ಯಡಹಳ್ಳಿ ನಿವಾಸಿಗಳಾದ ಆಟೋ ಚಾಲಕ ಟಿ.ಮಂಜುನಾಥ್ (33) ಹಾಗೂ ಟಿವಿಎಸ್ ಕಾರ್ಖಾನೆ ನೌಕರ ಆರ್.ಮಂಜುನಾಥ್ (32) ಈ ಘಟನೆಯಲ್ಲಿ ಕೊಲೆಯಾಗಿದ್ದಾರೆ. ಆರೋಪಿ ಯೋಗೇಶ್ (23) ಪೊಲೀಸರಿಗೆ ಶರಣಾಗಿದ್ದಾನೆ. ಈ ಕೊಲೆಗಳ ಸಂಬಂಧ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+