ನಂಜನಗೂಡಲ್ಲಿ ಅಷ್ಟಮಂಗಲ ಪರಿಹಾರ ಪೂಜೆ

ಮೈಸೂರು, ಜ. 31: ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ದೋಷಗಳ ಕುರಿತು ಪರಿಹಾರ ಕಂಡುಕೊಳ್ಳುವ ಸಲುವಾಗಿ ಧಾರ್ಮಿಕ ಪೂಜಾ ಕಾರ್ಯಕ್ರಮ ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ನಂಜನಗೂಡಲ್ಲಿ ನಡೆಯುತ್ತಿದೆ.

ಪೂಜೆ, ಹೋಮ ಹವನ, ಗಂಟೆ, ಜಾಗಟೆ, ಮಂತ್ರ ಘೋಷಗಳ ಸದ್ದು ಜೋರಾಗಿ ಕೇಳಿಬರತೊಡಗಿದೆ. ಕೇರಳದ ನಾರಾಯಣ ನಂಬೂದಿರಿ ತಂತ್ರಿ ನೇತೃತ್ವದ 5 ಜನ ಪುರೋಹಿತರ ಮಾರ್ಗದರ್ಶನದೊಂದಿಗೆ ಅಷ್ಟಮಂಗಲ ದೋಷ ನಿವಾರಣಾ ಧಾರ್ಮಿಕ ಪೂಜಾ ಕಾರ್ಯವನ್ನು ಅಷ್ಟಮಂಗಲ ಪ್ರಶ್ನೆಗಳಿಗೆ ಪರಿಹಾರದ ಸಲುವಾಗಿ ಸಿದ್ಧತೆಯನ್ನು ಕೈಗೊಂಡು ಕಪಿಲಾ ನದಿ ತೀರದಲ್ಲಿರುವ ಶ್ರೀ ದತ್ತಾತ್ರೇಯ ಸ್ವಾಮಿ ದೇವಾಲಯದಲ್ಲಿ ಶನಿವಾರ ನಡೆಸಲಾಯಿತು.[ಕನ್ನಡ ಅರ್ಚಕರು, ಕೇರಳ ತಂತ್ರಿಗಳ ಕ್ಲ್ಯಾಶ್]

‘Ashtamangala Prasnam’ held at Nanjangud Dattatreya Swamy Temple

ದತ್ತಾತ್ರೇಯ ದೇವಾಲಯದ ಅಂಗಳದಲ್ಲಿ ಗಣಪತಿ ಪೂಜೆ, ಅಘೋರ ಹೋಮ, ಮಹಾಸುದರ್ಶನ ಹೋಮ, ಮೃತ್ಯುಂಜಯ ಹೋಮ, ತ್ರಿಕಾಲ ಭಗವತಿ ಪೂಜೆಯನ್ನು ಇದೇ ಸಂದರ್ಭ ಮಾಡಲಾಯಿತು.

ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಜಯಪ್ರಕಾಶ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ನಡೆದಿದೆ. ಇದರ ಖರ್ಚು ವೆಚ್ಚವನ್ನು ಟಿವಿಎಸ್ ಸಂಸ್ಥೆ ಪ್ರಾಯೋಜಿಸಿದೆ.

ಅಷ್ಟಮಂಗಲ ಪರಿಹಾರದ ಸಲುವಾಗಿ ಫೆಬ್ರವರಿ 7 ಮತ್ತು 8ರಂದು ಮಹಾರುದ್ರ ಹೋಮ ಹಾಗೂ ಚಂಡಿಕಾ ಹೋಮ ನಡೆಯಲಿದ್ದು, ಆ ನಂತರ ಅಷ್ಟಬಂಧನ ಪೂಜೆ ನೆರವೇರಿಸಿ ಅಷ್ಟಮಂಗಲಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಜಯಪ್ರಕಾಶ್ ತಿಳಿಸಿದ್ದಾರೆ.

ಪೂಜಾ ಕೈಂಕರ್ಯದಲ್ಲಿ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಪ್ರದಾನ ಅರ್ಚಕ ನಾಗಚಂದ್ರ ದೀಕ್ಷಿತ್, ನೀಲಕಂಠ ದೀಕ್ಷಿತ್, ಕೃಷ್ಣದೀಕ್ಷಿತ್, ನರಸಿಂಹ ಅಯ್ಯಂಗಾರ್, ಮುರಳಿ ಶ್ರೀವತ್ಸ ಮುಂತಾದವರು ಪಾಲ್ಗೊಂಡಿದ್ದಾರೆ.(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+