ಮೈಸೂರು ನಗರದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ
ಮೈಸೂರು, ಫೆಬ್ರವರಿ 2 : ಮೈಸೂರು ನಗರದಲ್ಲಿ ದಿನಕ್ಕೊಂದು ಚಿರತೆ ಕಂಡುಬರುತ್ತಿರುವ ಘಟನೆ ಕಂಡುಬರುತ್ತಿದ್ದು, ಇದು ಸಾರ್ವಜನಿಕರ ನಿದ್ದೆಗೆಡಿಸಿದೆ.
ಕಳೆದ ವಾರವಷ್ಟೇ ಒಂದು ಚಿರತೆ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಕಂಡುಬಂದಿತು. ಈಗ ಮತ್ತೆ ಬುಧವಾರ ರಾತ್ರಿ ಚಾಮುಂಡಿ ಬೆಟ್ಟದಲ್ಲಿ ರಸ್ತೆಯಲ್ಲೇ ಚಿರತೆಯೊಂದು ಕುಳಿತು ವಾಹನ ಸವಾರರಿಗೆ ಫೋಸ್ ನೀಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಚಾಮುಂಡಿ ಬೆಟ್ಟದ ಬಳಿ ಚಿರತೆ ಮತ್ತು ಮುಳ್ಳು ಹಂದಿ ರಸ್ತೆಯಲ್ಲೇ ನಡೆದು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ನಂತರ ಮಂಡಕಳ್ಳಿ ವಿಮಾನ ನಿಲ್ದಾಣ ಆವರಣ ದಲ್ಲಿಯೂ ಚಿರತೆ ಕಾಣಿಸಿಕೊಂಡಿತ್ತು. ಈಗ ಚಾಮುಂಡಿ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಾಮುಂಡಿಬೆಟ್ಟದಲ್ಲಿ ರಸ್ತೆ ಮಧ್ಯೆಯೇ ಕುಳಿತಿದ್ದ ಚಿರತೆ ವಾಹನ ಸವಾರರಿಗೆ ಗೋಚರಿಸಿದೆ.

ವಾಹನಗಳು ಬಂದರೂ ಬೆದರದೇ ರಸ್ತೆಯಲ್ಲೇ ಚಿರತೆ ಕುಳಿತಿತ್ತು. ಈ ದೃಶ್ಯವನ್ನು ಪ್ರಯಾಣಿಕರು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ. ನಂತರ ರಸ್ತೆಯಿಂದ ಎದ್ದು ಹೊರಟ ಚಿರತೆಗಾಂಭೀರ್ಯದಿಂದ ನಡೆದುಕೊಂಡು ಹೋಗಿದೆ. ಬೆನ್ನ ಹಿಂದೆಯೇ ವಾಹನಗಳು ಸಾಗುತ್ತಾ ಬಂದರೂ ಈ ಚಿರತೆ ಲೆಕ್ಕಿಸಿಲ್ಲ. ಈ ದೃಶ್ಯಗಳೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.












Click it and Unblock the Notifications