ಮೈಸೂರು : ಜೂನ್ 10ರಂದು ಬಿಜೆಪಿ 'ಜನ ಕಲ್ಯಾಣ ಪರ್ವ' ಸಮಾವೇಶ
ಮೈಸೂರು, ಜೂ. 03 : ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಬಿಜೆಪಿ ದೇಶದೆಲ್ಲೆಡೆ 'ಜನ ಕಲ್ಯಾಣ ಪರ್ವ' ಹೆಸರಿನಲ್ಲಿ ಸಮಾವೇಶಗಳನ್ನು ಹಮ್ಮಿಕೊಂಡಿದೆ. ಜೂನ್ 10ರಂದು ಮೈಸೂರಿನಲ್ಲಿ ಸಮಾವೇಶ ನಡೆಯಲಿದೆ.
ಮಾಜಿ ಸಚಿವ ಸಿ.ಟಿ.ರವಿ ಮೈಸೂರಿನ 'ಜನ ಕಲ್ಯಾಣ ಪರ್ವ ಸಮಾವೇಶ'ದ ಕುರಿತು ಮಾಹಿತಿ ನೀಡಿದ್ದಾರೆ. ಜೂನ್ 10ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. [ಎರಡು ಸಮಾವೇಶ ಆಯೋಜಿಸಲಿದೆ ಬಿಜೆಪಿ]

ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಲು ಕರ್ನಾಟಕ ಬಿಜೆಪಿ ನಿರ್ಧರಿಸಿದೆ.ಮೈಸೂರಿನಲ್ಲಿ ಜೂ.10ರಂದು ಸಮಾವೇಶದ ನಿಗದಿಯಾಗಿದ್ದು, ಹುಬ್ಬಳ್ಳಿ ಸಮಾವೇಶದ ದಿನಾಂಕ ಅಂತಿಮಗೊಂಡಿಲ್ಲ. ಎರಡೂ ಸಮಾವೇಶ ಉದ್ದೇಶಿಸಿ ಅಮಿತ್ ಶಾ ಮಾತನಾಡಲಿದ್ದಾರೆ. [ಮಥುರಾದಿಂದ ಮೋದಿ ಸರ್ಕಾರ್ ವರ್ಷಾಚರಣೆ ಶುರು]
ಅಮಿತ್ ಶಾ ಅವರು ಜೂನ್ 10ರ ಬುಧವಾರ ಬೆಳಗ್ಗೆ ಮೈಸೂರಿಗೆ ಆಗಮಿಸಲಿದ್ದಾರೆ. ಮೊದಲು ನಗರದಲ್ಲಿ ನಿರ್ಮಿಸಿಸಿರುವ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಲಿದ್ದು, ನಂತರ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಪಕ್ಷದ ರಾಜ್ಯ ನಾಯಕರು ಜೂನ್ 6ರಿಂದ ಮೈಸೂರಿನಲ್ಲಿ ಜಾಥಾ ನಡೆಸಿ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಘೋಷಣೆಯೋಂದಿಗೆ ಮೋದಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ, ಸಮಾವೇಶಕ್ಕೆ ಬರುವಂತೆ ಜನರನ್ನು ಆಹ್ವಾನಿಸಲಿದ್ದಾರೆ. [ಪಿಟಿಐ ಚಿತ್ರ]












Click it and Unblock the Notifications