ಅಮಿತ್ ಶಾ ಗೆ ನನ್ನ ಕಂಡರೆ ಭಯವಿದೆ : ಸಿದ್ದರಾಮಯ್ಯ

Recommended Video

      ಅಮಿತ್ ಶಾಗೆ ನನ್ನ ಕಂಡ್ರೆ ಭಯ ಅಂದ್ರು ಸಿದ್ದರಾಮಯ್ಯ | Oneindia Kannada

      ಮೈಸೂರು, ಮಾರ್ಚ್ 29 : ಅಮಿತ್ ಶಾ ಗೆ ನನ್ನನ್ನು ಕಂಡರೆ ಭಯವಿದೆ. ಹಾಗಾಗಿ ನಾನೂ ಹೋದಲೆಲ್ಲ ಅವರು ಹಿಂಬಾಲಿಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

      ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾ ಯಾವ ಮಠಕ್ಕಾದರೂ ಹೋಗಲಿ, ಎಲ್ಲಿಗೆ ಬೇಕಾದರೂ ಹೋಗಲಿ. ಅದು ಅವರ ವೈಯಕ್ತಿಕ ಸ್ವಾತಂತ್ರ್ಯ. ಆ ಬಗ್ಗೆ ನಾನೂ ಏನನ್ನು ಹೇಳುವುದಿಲ್ಲ. ಅಮಿತ್ ಶಾ ನನ್ನನ್ನು ಅಹಿಂದು ಎಂದು ಹೇ‌ಳಿದ್ದಾರೆ. ಆದರೆ ಮಿತ್ ಶಾ ಜೈನ ಧರ್ಮದವರು. ಅವರು ಹಿಂದೂನಾ ಅಥವಾ ಅಹಿಂದುನಾ ಅಂತ ಸ್ಪಷ್ಟಪಡಿಸಲಿ ಎಂದಿದ್ದಾರೆ.

      Amit Shah is scared of me: Siddaramaiah

      ಬಿಎಸ್ವೈ ವಿರುದ್ಧ ಸಿಎಂ ಕಿಡಿ :
      ಇನ್ನು ಬೈ ಎಲೆಕ್ಷನ್'ನಲ್ಲಿ ಯಡಿಯೂರಪ್ಪ ಸೇರಿ ಎಲ್ಲರೂ ಬಂದಿದ್ದರು. ಉಪ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಅಂದಿದ್ದರು. ಆದರೆ ಗೆದ್ದಿದ್ದು ಯಾರು ಎಂದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಜೈಲಿಗೆ ಹೋಗಿ ಬಂದವರೆಲ್ಲ ನನಗೆ ಪಾಠ ಹೇಳಿ ಕೊಡ್ತಾರಾ.? ಎಂದು ಬಿಎಸ್'ವೈ ವಿರುದ್ಧವೂ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

      ನಾನು ಚಾಮುಂಡೇಶ್ವರಿಯಿಂದಲೇ ಸ್ಫರ್ಧಿಸುತ್ತೇನೆ :
      ನಾನು ಈ ಬಾರಿಯ ವಿಧಾನಸಭಾ ಚುನಾವನೆಯ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸಿ ಮತ್ತೆ ನಾನೇ ಗೆಲ್ಲುತ್ತೇನೆ. ನನ್ನ ಕ್ಷೇತ್ರದ ಬಗ್ಗೆ ನನಗೆ ನಂಬಿಕೆ ಇದೆಇನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಸೋಲು ಖಚಿತ ಎಂಬ ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಕೇಳಿಕೊಂಡು ನಾನು ರಾಜಕಾರಣ ಮಾಡಬೇಕಿಲ್ಲ ಅಂತ ಹೆಚ್.ಡಿಕೆ ಮೇಲೆ ಹರಿಹಾಯ್ದರು.

      ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಎಷ್ಟು ಸಲ ನಿಂತಿದ್ದೀನಿ ಅಂತ ಕುಮಾರಸ್ವಾಮಿಗೆ ಗೊತ್ತಾ. ನಾನು ಚಾಮುಂಡೇಶ್ವರಿಯಲ್ಲಿ 7 ಬಾರಿ ಸ್ಪರ್ಧಿಸಿದ್ದೇನೆ. 5 ಬಾರಿ ಗೆದ್ದಿದ್ದು, 2 ಬಾರಿ ಸೋತಿದ್ದೇನೆ. ಈ ಬಾರಿ ಕೂಡ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆಲುವು ಪಡೆಯಲಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ನನಗೆ ನಂಬಿಕೆ ಇದೆ. ನಾನು ಮತ್ತೆ ಗೆಲ್ಲುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+