ಅಂಬರೀಶ್ ಸ್ಮರಣಾರ್ಥ ಅಂಗಾಂಗ ದಾನ ಮಾಡಲು ಮುಂದಾದ ಅಭಿಮಾನಿ
ಮೈಸೂರು, ಡಿಸೆಂಬರ್ 14: ಹಿರಿಯ ನಟ ಅಂಬರೀಶ್ ಅವರ ಸ್ಮರಣಾರ್ಥ ಅಭಿಮಾನಿಯೋರ್ವ ತನ್ನ ದೇಹದ ಅಂಗಾಂಗವನ್ನು ದಾನ ಮಾಡುವ ಮೂಲಕ ಅಂಬರೀಶ್ ನೆನಪನ್ನು ಚಿರಕಾಲ ಉಳಿಯುವಂತೆ ಪುಣ್ಯಸ್ಮರಣೆ ಮಾಡಿದ್ದಾರೆ.
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬೀಡನಹಳ್ಳಿ ಗ್ರಾಮದ ನಿವಾಸಿ ನಂದೀಶ್ ತಮ್ಮ ಅಂಗಾಂಗಗಳ ದಾನಕ್ಕೆ ಮುಂದಾಗಿದ್ದಾರೆ. ಅಂಬರೀಶ್ ಕಟ್ಟಾ ಅಭಿಮಾನಿಯಾಗಿರುವ ನಂದೀಶ್, ಅಂಬಿ ಸಿನಿಮಾ ಬಿಡುಗಡೆಯಾದಾಗ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತಿದ್ದರು. ಅಂಬರೀಶ್ ಹೆಸರಿನಲ್ಲಿ ಸಮಾಜಕ್ಕೆ ಏನನ್ನಾದರೂ ನೀಡಬೇಕೆಂದು ಈ ನಿರ್ಣಯ ಕೈ ಗೊಂಡಿದ್ದಾರಂತೆ ನಂದೀಶ್.

ನಟ ಅಂಬರೀಶ್ ಕಲಿಯುಗದ ಕರ್ಣ. ಅವರು ದಾನ ಮಾಡುವುದರಲ್ಲಿ ಮುಂದಾಗಿದ್ದರು. ಇಂದು ನಮ್ಮ ಗ್ರಾಮದಲ್ಲಿ ಅಂಬರೀಶ್ ಪುಣ್ಯಸ್ಮರಣೆ ಇಟ್ಟುಕೊಂಡಿದ್ದೆವು. ಅವರ ಅಭಿಮಾನಿಗಳು ಅವರಿಗಾಗಿ ಕೇಶ ಮುಂಡನ ಮಾಡಿಕೊಂಡಿದ್ದಾರೆ. ಗ್ರಾಮದ ಜನರಿಗೆ ಊಟ ಮಾಡಿ, ಬಡಿಸಿದ್ದೇವೆ. ಅವರ ಸ್ಮರಣಾರ್ಥ ನನ್ನ ದೇಹದ ಅಂಗಾಂಗಳನ್ನು ದಾನ ಮಾಡುತ್ತೇನೆ ಎಂದು ನಂದೀಶ್ ಹೃದಯಪೂರ್ವಕವಾಗಿ ತಿಳಿಸಿದ್ದಾರೆ.












Click it and Unblock the Notifications