ಮೈಸೂರು ಅಪೋಲೋ ಆಸ್ಪತ್ರೆಗೆ ಬಂತು ಏರ್ ಆಂಬುಲೆನ್ಸ್
ಮೈಸೂರು, ಜೂನ್ 29: ಮೈಸೂರಿನ ಅಪೋಲೋ ಆಸ್ಪತ್ರೆಯು ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕರೆದೊಯ್ಯಲು ಏರ್ ಆಂಬುಲೆನ್ಸ್ ಸೇವೆಯನ್ನು ಆರಂಭಿಸಿದೆ. ಈ ಸೇವೆಯಿಂದ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನ ಆಸ್ಪತ್ರೆಗೆ ಕರೆದೊಯ್ಯಲು ಅನುಕೂಲವಾಗಲಿದೆ.
ಇದರಿಂದ ಕಡಿಮೆ ಅವಧಿಯಲ್ಲಿ ತುರ್ತಾಗಿ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ. ಅಪಘಾತದ ಸಂದರ್ಭದಲ್ಲಿ ಹೊರ ವಲಯದಿಂದ ರೋಗಿಯನ್ನು ಆಸ್ಪತ್ರೆಗೆ ಕರೆತರಲು ಇದರಿಂದ ಅನುಕೂಲವಾಗಲಿದ್ದು, ಅಮೂಲ್ಯ ಜೀವ ಉಳಿಸಲು ಸಾಧ್ಯವಾಗಲಿದೆ.

ಏರ್ ಆಂಬುಲೆನ್ಸ್ ಸೇವೆಯು ಬೆಂಗಳೂರು, ಹೈದರಾಬಾದ್ ಚೆನ್ನೈನಲ್ಲಿದ್ದ ಸೇವೆಯನ್ನು ಈಗ ಮೈಸೂರು, ಮಧುರೈ, ಕಾಕಿನಾಡ, ಕಾರೈಕುಡಿ, ಕರೂರು, ತಿರುಚಿ ಮತ್ತು ವೈಜಾಗ್ ಅಂಥ ನಗರಗಳಿಗೂ ವಿಸ್ತರಿಸಲಾಗಿದೆ. ಅಪೋಲೋ ಆಸ್ಪತ್ರೆಯಲ್ಲಿ ಮೊದಲಿಗೆ 2003ರಲ್ಲಿ ಏರ್ ಆಂಬುಲೆನ್ಸ್ ತುರ್ತು ಸೇವೆಯನ್ನು ಆರಂಭಿಸಿತು. ಬಳಿಕ ಇದನ್ನು ದೆಹಲಿ, ಬೆಂಗಳೂರಿಗೆ ಕ್ರಮವಾಗಿ 2004 ಮತ್ತು 2007ರಲ್ಲಿ ವಿಸ್ತರಿಸಲಾಯಿತು.
ಪ್ರತಿಯೊಂದು ಅಪೋಲೋ ಏರ್ ಆಂಬುಲೆನ್ಸ್ ನಲ್ಲಿ ತುರ್ತು ಸಂದರ್ಭದಲ್ಲಿ ಸೇವೆಗೆ ಅತ್ಯಾಧುನಿಕ ಸೌಲಭ್ಯ, ಇಬ್ಬರು ಪೈಲಟ್ ಗಳು, ಇಬ್ಬರು ಅರೆವೈದ್ಯಕೀಯ ಸಿಬ್ಬಂದಿ, ಅರ್ಹ, ತುರ್ತು ಚಿಕಿತ್ಸಾ ದೈಹಿಕ ಆರೋಗ್ಯ ತಜ್ಞರು, ಅರವೈದ್ಯಕೀಯ ಸಿಬ್ಬಂದಿ ಸೇರಿ ಪೂರ್ಣ ಪ್ರಮಾಣದ ವೈದ್ಯಕೀಯ ಸಿಬ್ಬಂದಿ ಇದೆ.
ಇವರಿಗೆ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆ ಪೂರ್ವ ಸೇವೆ ಕುರಿತು ತರಬೇತಿ ನೀಡಲಾಗಿರುತ್ತದೆ. ಈ ಸೇವೆ ಬೆಂಗಳೂರು ಮೂಲದ ಏರ್ ಏವಿಯೇಟರ್ಸ್ ರಕ್ಷಣಾ ಘಟಕದ ನೆರವಿನಲ್ಲಿ ನಡೆಯುತ್ತಿದೆ.












Click it and Unblock the Notifications