• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಸರಾ ಸಂಭ್ರಮ ಕಣ್ತುಂಬಿಕೊಂಡ ನಟ ನೀನಾಸಂ ಸತೀಶ್

By ಮೈಸೂರು ಪ್ರತಿನಿಧಿ
|

ಮೈಸೂರು, ಅಕ್ಟೋಬರ್ 21: ಸತತವಾಗಿ ಮೂರು ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ನಟ ನೀನಾಸಂ ಸತೀಶ್, ಬುಧವಾರ ಮೈಸೂರಿನಲ್ಲಿ ದಸರಾ ಸಂಭ್ರಮವನ್ನು ಕಣ್ತುಂಬಿಕೊಂಡರು.

ನೀನಾಸಂ ಸತೀಶ್ ಅಭಿನಯದ 'ಮ್ಯಾಟ್ನಿ' ಹಾಗೂ 'ದಸರಾ' ಚಿತ್ರಗಳ ಚಿತ್ರೀಣಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದರೆ, 'ಪೆಟ್ರೋಮ್ಯಾಕ್ಸ್' ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ.

ಮೈಸೂರು ಅರಮನೆಯ ವರ್ಣಿಸಲಸದಳ ದೃಶ್ಯಗಳು...

ಹೀಗಾಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನೀನಾಸಂ ಸತೀಶ್, ಬುಧವಾರ ಸಂಜೆ ಮೈಸೂರಿನ ಹಾರ್ಡಿಂಗ್ ವೃತ್ತದಲ್ಲಿ ದಸರಾ ಲೈಟಿಂಗ್ ವೀಕ್ಷಿಸಿ, ಫೋಟೋವೊಂದನ್ನು ತೆಗೆದುಕೊಂಡು ಸಂಭ್ರಮಿಸಿದ್ದಾರೆ.

ತಮ್ಮ ಈ ಸಂಭ್ರಮದ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ನಟ ಸತೀಶ್, "ಇಂದು ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ದಿನ. ನನ್ನ ಮೂರು ಚಿತ್ರಗಳ ಚಿತ್ರೀಕರಣ ಒಂದೇ ದಿನದಲ್ಲಿ ನಡೆಯುತ್ತಿದೆ. "ಮ್ಯಾಟ್ನಿ' ಮತ್ತು "ದಸರಾ" ಬೆಂಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದರೆ, ಮೈಸೂರಿನಲ್ಲಿ "ಪೆಟ್ರೊಮ್ಯಾಕ್ಸ್" ಚಿತ್ರದ ಚಿತ್ರೀಕರಣ ನಡೆಯುತ್ತಿದೆ" ಎಂದಿದ್ದಾರೆ.

"ಮೈಸೂರು ದಸರಾ ನೋಡುವ ಸೌಭಾಗ್ಯ ದೊರಕಲು ಇಷ್ಟು ವರ್ಷದ ನಿಮ್ಮ ಪ್ರೀತಿ ಕಾರಣ. ಲವ್ ಯೂ ಆಲ್" ಎಂದು ನೀನಾಸಂ ಸತೀಶ್ ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ.

English summary
Actor Neenasam Sathish, who was involved in the shooting, witnessed Dasara lighting at a Harding Circle in Mysuru on Wednesday evening, taking a photo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X