ಹಳೆಯ ದ್ವೇಷಕ್ಕೆ ಯುವಕನ ಕೊಲೆ:ಮೈಸೂರಿನಲ್ಲೂ ಹೆಚ್ಚಾಯ್ತು ರೌಡಿಸಂ

ಮೈಸೂರು, ಫೆಬ್ರವರಿ 13: ರಾಘವೇಂದ್ರ ನಗರದ ನಿವಾಸಿ ಚಿನ್ನಸ್ವಾಮಿ ಅಲಿಯಾಸ್ ಮ್ಯೆಕಾನಿಕ್ ಬಾಬು (26) ಎಂಬುವವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಬಡಾವಣೆಯ ಸ್ಮಶಾನದ ಬಳಿ ಸ್ನೇಹಿತರ ಗುಂಪಿನ ನಡುವೆ ಗಲಾಟೆ ನಡೆದಿದ್ದು, ವಿಪರೀತ ಮದ್ಯ ಸೇವಿಸಿದ್ದ ಗುಂಪೊಂದು ಇವರಿಗೆ ಮೂರು ಬಾರಿ ಚಾಕುವಿನಿಂದ ಇರಿದು, ಬಾಟಲಿಯಿಂದ ತಲೆಗೆ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಚಿನ್ನಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಳೆಯ ದ್ವೇಷವೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಕೆಲ ದಿನಗಳ ಹಿಂದಷ್ಟೇ ಕ್ಷುಲ್ಲಕ ಕಾರಣಕ್ಕೆ ಪವನ್, ಪ್ರೇಮ್ ಸಾಗರ್, ಪ್ರಜ್ವಲ್ ಹಾಗೂ ಇತರರ ನಡುವೆ ಮತ್ತು ಮ್ಯೆಕಾನಿಕ್ ಬಾಬು ಗೆ ಗಲಾಟೆಯಾಗಿತ್ತು.

A young man murdered after quarrel with friends in Mysuru

ಆರೋಪಿಗಳನ್ನು ಹುಡುಕುತ್ತಿದ್ದೇವೆ. ಈ ಸಂಬಂಧ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

15 ದಿನಗಳ ಅಂತರದಲ್ಲಿ ನಡೆದ 2ನೇ ಹತ್ಯೆ ಇದಾಗಿದೆ. ಜ. 28ರಂದು ಮುನೇಶ್ವರ ನಗರ ನಿವಾಸಿ ಆಟೋ ಚಾಲಕ ಮನು ಅಲಿಯಾಸ್ ಜಾನಿ (29) ಎಂಬುವವರನ್ನು ಅಗ್ನಿಶಾಮಕ ಠಾಣೆ ಸಮೀಪದ ರೈಲು ಮೇಲ್ಸೇತುವೆ ಬಳಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ನಂತರ, ನಗರದ ವರ್ತಕರೊಬ್ಬರನ್ನು ಬನ್ನೂರಿನ ಬಳಿ ಕೊಲೆ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+