Instagram ಫಾಲೋವರ್ಸ್ ಹೆಚ್ಚಾಗಿದ್ದಕ್ಕೆ ಯುವತಿಯಿಂದಲೇ ವಿದ್ಯಾರ್ಥಿನಿ ಮೇಲೆ ಹಲ್ಲೆ

ಮೈಸೂರು, ನವೆಂಬರ್‌ 01: ಇತ್ತೀಚಿಗೆ ಜನರು ಸಾಮಾಜಿಕ ಜಾಲತಾಣ ಬಳಸುವುದು ಅತೀವ ಹೆಚ್ಚಾಗಿದೆ. ಇದು ದಿನ ಕಳೆದಂತೆ ಹುಚ್ಚಾಟಕ್ಕೆ ದಾರಿ ಮಾಡಿಕೊಡುತ್ತಿದೆ. ಕೆಲವರಿಗೆ ಸಾಮಾಜಿಕ ಜಾಲತಾಣ ಬಳಸುವುದು ಚಟದಂತಾಗುತ್ತಿದ್ದು, ಈ ಚಟವೇ ಈಗ ಅಪರಾಧ ಕೃತ್ಯಗಳಿಗೆ ದಾರಿ ಮಾಡಿಕೊಡುತ್ತಿದೆ.

ಇನ್ಸ್ಟಾಗ್ರಾಮ್‌ ಹಾಗೂ ಸ್ನಾಪ್ ಚಾಟ್ ಫಾಲೋವರ್ಸ್ ಹೆಚ್ಚಾದ ಹಿನ್ನಲೆಯಲ್ಲಿ ಅಸೂಯೆಗೊಂಡ ಯುವತಿಯೊಬ್ಬಳು ತನ್ನ ಸ್ನೇಹಿತರ ಜೊತೆ ಸೇರಿ ರಾತ್ರೋರಾತ್ರಿ ಮನೆಗೆ ನುಗ್ಗಿ ವಿದ್ಯಾರ್ಥಿನಿ ಮೇಲೆ ಮನಬಂದತೆ ಹಲ್ಲೆ ನಡೆಸಿದ ಘಟನೆ ಮೈಸೂರು ಜಿಲ್ಲೆಯ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

A Student Was Assaulted By A Young Woman For Having More Instagram Followers

ಶ್ರೀಕಂಠೇಶ್ವರ ಕಾಲೇಜಿನ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಶಾಫಿಯಾ ಹಲ್ಲೆಗೆ ಒಳಗಾದ ವಿಧ್ಯಾರ್ಥಿನಿ. ಜೋಯಾ ಎಂಬಾಕೆ ಫರಾಜ್ ಹಾಗೂ ಮೋಹಿನ್ ಜೊತೆ ಸೇರಿ ಶಾಫಿಯಾ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಎಂದು ಗುರುತಿಸಲಾಗಿದೆ.

ಶಾಫಿಯಾ ಸುಮಾರು 2 ವರ್ಷಗಳಿಂದ ಇನ್ಸ್ಟಾಗ್ರಾಮ್‌ ಹಾಗೂ ಸ್ನಾಪ್ ಚಾಟ್‌ನಲ್ಲಿ ಆಕ್ಟೀವ್ ಆಗಿದ್ದಾಳೆ. ಹೀಗಾಗಿ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಅಸೂಯೆಗೊಂಡ ಜೋಯಾ ಇನ್ಸ್ಟಾಗ್ರಾಮ್‌ ಹಾಗೂ ಸ್ನಾಪ್ ಚಾಟ್ ಅಕೌಂಟ್‌ಗಳನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದಾಳೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಎರಡು ತಿಂಗಳಿಂದ ಗಲಾಟೆ ನಡೆಯುತ್ತಿದೆ ಎನ್ನಲಾಗಿದೆ.

ಈ ಜಗಳವೇ ಮುಂದುವರಿದು ಅಕ್ಟೋಬರ್ 28ರಂದು ಜೋಯಾ ತನ್ನ ಸ್ನೇಹಿತರಾದ ಫರಾಜ್ ಹಾಗೂ ಮೋಹಿನ್ ಜೊತೆ ರಾಜೀವ್ ನಗರದಲ್ಲಿರುವ ಶಾಫಿಯಾ ಮನೆಗೆ ಏಕಾಏಕಿ ನುಗ್ಗಿ ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅಸಭ್ಯವಾಗಿ ವರ್ತಿಸಿ ಶೋಕೇಸ್ ಗಾಜು ಪುಡಿಪುಡಿ ಮಾಡಿದ್ದಾರೆ. ಇವರಿಂದ ರಕ್ಷಣೆ ಪಡೆಯಲು ಶಾಫಿಯಾ ಗಾಜಿನ ಚೂರನ್ನು ತೆಗೆದುಕೊಂಡು ಕಾಲಿಗೆ ಗಾಯ ಮಾಡಿಕೊಂಡು ಒದ್ದಾಡಿದ್ದಾಳೆ ಎನ್ನಲಾಗಿದೆ.

ಈ ವಿಚಾರ ತಿಳಿಯುತ್ತಿದ್ದಂರೆ ಕೂಡಲೇ ಉದಯಗಿರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರನ್ನು ಕಂಡ ಮೂರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಜೋಯಾ, ಫರಾನ್ ಹಾಗೂ ಮೊಹೀನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಾಫಿಯಾ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಮೈಸೂರು ವಿವಿ ಕ್ಲರ್ಕ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಗುಮಾಸ್ತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಶಿವಕುಮಾರ್(35) ಮೃತ ದುರ್ದೈವಿ. ತಮ್ಮ ಕಾರಿನಲ್ಲಿಯೇ ಕೊಳೆತ ಸ್ಥಿತಿಯಲ್ಲಿ ಶಿವಕುಮಾರ್ ಮೃತದೇಹ ದೊರೆತಿದೆ. ಆದಿಚುಂಚನಗಿರಿ ರಸ್ತೆಯ ಮಹದೇಶ್ವರ ದೇವಸ್ಥಾನದ ಬಳಿ ಘಟನೆ ಬೆಳಕಿಗೆ ಬಂದಿದೆ.

ಮೈಸೂರು ವಿವಿಯಲ್ಲಿ ಕ್ಲರ್ಕ್ ಆಗಿರುವ ಶಿವಕುಮಾರ್ ಕೆಲವು ವರ್ಷಗಳ ಹಿಂದೆ ಶಿವಕುಮಾರ್ ಪ್ರೀತಿಸಿ ಮದುವೆ ಆಗಿದ್ದರು. ನಿಂತಿದ್ದ ಶಿವಕುಮಾರ್ ಕಾರಿನಲ್ಲಿ ಕೆಟ್ಟ ವಾಸನೆ ಬಂದ ಕಾರಣ ಸ್ಥಳೀಯರು ಶಂಕೆಗೊಂಡು ಅಶೋಕಾಪುರಂ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿ ಶಿವಕುಮಾರ್ ಮೃತದೇಹ ಪತ್ತೆಯಾಗಿದೆ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಆರೋಪ ಕೇಳಿರುತ್ತಿದೆ. ಸದ್ಯ ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+