ಕೆಆರ್ ಆಸ್ಪತ್ರೆಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ಮೈಸೂರಿನ ಕೆಆರ್ ಆಸ್ಪತ್ರೆಯಿಂದ ಕಟ್ಟಡದಿಂದ ಜಿಗಿದಿದ್ದ, ಉದಯಗಿರಿ ನಿವಾಸಿ-ಹಣ್ಣಿನ ವ್ಯಾಪಾರಿ ಮಂಜುನಾಥ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಈ ಘಟನೆ ಬಗ್ಗೆ ಈ ಹಿಂದೆ ಪ್ರಕಟವಾಗಿದ್ದ ವರದಿ ಇಲ್ಲಿದೆ.

***

ಮೈಸೂರು, ಜೂನ್ 26 : ಮೈಸೂರಿನ ಪ್ರತಿಷ್ಠಿತ ಕೆ.ಆರ್. ಆಸ್ಪತ್ರೆಯ ಮೇಲಿನ ಮಹಡಿಯಿಂದ ವ್ಯಕ್ತಿಯೋರ್ವರು ಕೆಳಗೆ ಜಿಗಿದಿರುವ ಘಟನೆ ಸೋಮವಾರ ನಡೆದಿದೆ.

ಕೆ.ಆರ್ ಆಸ್ಪತ್ರೆಯಲ್ಲಿಯೇ ಈ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದ್ದು, ಕೆಆರ್ ಆಸ್ಪತ್ರೆಯ ಮೇಲಿನ ಕಟ್ಟಡದಿಂದ ತಲೆ ತಿರುಗಿ ಬಿದ್ದಿದ್ದಾನೆ. ಆದರೆ ಇದು ಆತ್ಮಹತ್ಯೆ ಯತ್ನವೋ ಅಥವಾ ಆಕಸ್ಮಿಕವೋ ಎಂಬುದು ಸ್ಪಷ್ಟವಾಗಿಲ್ಲ.

A person jumps from HR hospital in Mysuru

ಆತನ ತಲೆಗೆ ತೀವ್ರ ಗಾಯಗಳಾಗಿರುವುದರಿಂದ ಆತ ಪ್ರಜ್ಞೆ ತಪ್ಪಿದ್ದು, ತಲೆ, ಕೈ, ಕಾಲಿಗೆ ಗಂಭೀರ ಗಾಯಗಳಾಗಿವೆ. ತುರ್ತು ಚಿಕಿತ್ಸಾ ಘಟಕದಲ್ಲಿ ಈತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ದಾರಿಹೋಕರೊಬ್ಬರು ಈ ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದು, ಮೇಲ್ನೋಟಕ್ಕೆ ಆತ ಆತ್ಮಹತ್ಯೆಗೆ ಯತ್ನಿಸಿದಂತೆ ಕಂಡುಬರುತ್ತಿದೆ. ಗೋಡೆಗೆ ಆನಿಕೊಂಡಿದ್ದ ಆ ಯುವಕ ಇದ್ದಕ್ಕಿದ್ದಂತೆ ಜಿಗಿದಿದ್ದಾನೆ.

ಯಾವ ಕಟ್ಟಡದಲ್ಲಿ ಎಷ್ಟನೇ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಆತನ ಸಂಬಂಧಿಕರು ಯಾರೂ ಆತನ ಬಳಿ ಇರಲಿಲ್ಲ ಎನ್ನಲಾಗುತ್ತಿದ್ದು, ಆತ ಯಾಕೆ ಮಹಡಿಯ ಮೇಲಿಂದ ಬಿದ್ದ.

ಸ್ಥಳಕ್ಕೆ ಆಗಮಿಸಿದ ದೇವರಾಜ ಠಾಣಾ ಪೊಲೀಸರು ಸ್ಥಳಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಕೂಡ ಯಾವುದೇ ಹೇಳಿಕೆ ಇನ್ನೂ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+