ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೋನಿಗೆ ಬಿತ್ತು ಆಯರಹಳ್ಳಿ ಜನರ ನಿದ್ದೆ ಕೆಡಿಸಿದ್ದ ಚಿರತೆ

|
Google Oneindia Kannada News

ಮೈಸೂರು: ಕಳೆದ ಒಂದು ವಾರದಿಂದ ಮೈಸೂರಿನ ಆಯರಹಳ್ಳಿ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಕೊನೆಗೂ ಬೋನಿಗೆ ಬಿದ್ದಿದೆ.

ಒಂದು ವಾರದಿಂದ ಗ್ರಾಮದಲ್ಲಿ ಆಗಾಗ ಕಾಣಿಸಿಕೊಂಡು ಜಾನುವಾರುಗಳನ್ನು ತಿಂದು ಪರಾರಿಯಾಗುತ್ತಿದ್ದ ಚಿರತೆ ಈ ಭಾಗದ ಜನರ ನಿದ್ದೆ ಕೆಡಿಸಿತ್ತು. ಇದರಿಂದ ಆತಂಕಗೊಂಡಿದ್ದ ಗ್ರಾಮಸ್ಥರು ಚಿರತೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು.[ಭಲೇ ನಿಗೂಢ ಪ್ರಾಣಿ ಚಿರತೆಯ ಕುರಿತು ರೋಚಕ ಮಾಹಿತಿ]

A leopard fell into a trap laid by Forest department in Mysuru

ಗ್ರಾಮದ ಜನರ ಅಹವಾಲನ್ನು ಸ್ವೀಕರಿಸಿದ ಅರಣ್ಯಾಧಿಕಾರಿಗಳು ಗ್ರಾಮದ ಜವನಪ್ಪ ಎಂಬುವವರ ಜಮೀನಿನಲ್ಲಿ ಚಿರತೆ ಹಿಡಿಯುವ ಬೋನು ಇಟ್ಟಿದ್ದರು. ಇಂದು ಬೆಳಗೆ ಆಹಾರ ಅರಸಿ ಬಂದ ಚಿರತೆ ಬೋನಿನಲ್ಲಿ ಸಿಕ್ಕಿಕೊಂಡಿತ್ತು. ಚಿರತೆಯ ಘರ್ಜನೆ ಕೇಳಿದ ಗ್ರಾಮಸ್ಥರು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಚಿರತೆಯನ್ನು ನಾಗರಹೊಳೆ ಅರಣ್ಯಕ್ಕೆ ಬಿಡುವುದಾಗಿ ಹೇಳಿದ್ದಾರೆ.

English summary
A leopard fell into a trap laid by Forest department in Ayarahalli Village, Mysuru. People get releif after a week sleepless nights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X