ಹೃದಯ ನಿಂತರೂ ಕರ್ತವ್ಯ ಪ್ರಜ್ಞೆ ಮೆರೆದ ಬಸ್ ಚಾಲಕ
ಮೈಸೂರು, ಜ. 27: ರಾಜ್ಯ ಸಾರಿಗೆ ಸಂಸ್ಥೆ ವಿರುದ್ಧ ಏನೇ ಆರೋಪವಿರಬಹುದು. ಆದರೆ, ಸಂಸ್ಥೆಯಲ್ಲಿ ನೂರಾರು ಸಂಖ್ಯೆಯಲ್ಲಿ ಅತ್ಯಂತ ಕಾಳಜಿಯುಳ್ಳ ಚಾಲಕರು ಇದ್ದಾರೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ.
ಸಾರಿಗೆ ಸಂಸ್ಥೆಯ ಬಸ್ ಚಾಲಕ ಚನ್ನೇಗೌಡ (50) ಎಂಬುವರು ತಮ್ಮ ಸಾವು ಸಮೀಪಿಸಿದೆ ಎಂದು ಅರಿವಾದಾಗಲೂ ಅಧೀರರಾಗದೆ ಬಸ್‌ನಲ್ಲಿದ್ದ ಸುಮಾರು 40 ಜನರ ಪ್ರಾಣ ಉಳಿಸಿ ಇಹಲೋಕ ತ್ಯಜಿಸಿದ್ದಾರೆ. [ಕರ್ನಾಟಕ-ಗೋವಾ ನಡುವೆ ಹೆಚ್ಚುವರಿ ಬಸ್]

ಆಗಿದ್ದೇನು? : ಮಂಡ್ಯದಿಂದ ಮೈಸೂರಿಗೆ ಬರುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸನ್ನು ಚನ್ನೇಗೌಡ ಎಂಬುವರು ಚಲಾಯಿಸುತ್ತಿದ್ದರು. ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಬಂದಾಗ ಚನ್ನೇಗೌಡ ಅವರಿಗೆ ಹೃದಯಾಘಾತವಾಗಿದೆ. [ಆನ್ ಲೈನ್ ಬುಕಿಂಗ್ ಸ್ಲೋ]
ಅವರ ಹೃದಯ ನಿಂತಿದ್ದರೂ ವಿವೇಕ ಇನ್ನೂ ಕೆಲಸ ಮಾಡುತ್ತಲೇ ಇತ್ತು. ತೀವ್ರ ನೋವಿನಲ್ಲೂ ಅಧೀರರಾಗದ ಚನ್ನೇಗೌಡ ಸಿಕ್ಕ ಅರೆಕ್ಷಣದಲ್ಲಿ ಬಸ್ ಅನ್ನು ರಸ್ತೆ ಪಕ್ಕ ನಿಲ್ಲಿಸಿದ್ದಾರೆ. ತಕ್ಷಣ ಅವರ ಪ್ರಾಣಪಕ್ಷಿ ಹಾರಿಹೋಗಿದೆ. [ಮಹಿಳೆಯರ ಸೀಟ್ ನಲ್ಲಿ ಕುಳಿತರೆ ದಂಡ]
ಈ ಬಸ್‌ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ದಿಢೀರ್ ಬೆಳವಣಿಗೆಯಿಂದ ಜನರು ಆಘಾತಗೊಂಡರೂ ಚಾಲಕ ಚನ್ನೇಗೌಡ ಕರ್ತವ್ಯ ಪ್ರಜ್ಞೆಗೆ ಸೆಲ್ಯೂಟ್ ಹೊಡೆದಿದ್ದಾರೆ. ತಮ್ಮ ಜೀವ ಹೋಗುತ್ತಿದ್ದಾಗಲೂ ಜನರ ಜೀವ ರಕ್ಷಿಸಲು ಮುಂಜಾಗ್ರತೆ ಕ್ರಮ ಕೈಗೊಂಡ ಚನ್ನೇಗೌಡ ಅವರಿಗೆ ಪ್ರಯಾಣಿಕರು ಕೃತಜ್ಞತೆಯಿಂದ ಅಶ್ರುತರ್ಪಣ ನೀಡಿದ್ದಾರೆ.












Click it and Unblock the Notifications