• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೇಜಾವರ ಶ್ರೀಗಳ 81ನೇ ಚಾತುರ್ಮಾಸ್ಯ

|

ಮೈಸೂರು, ಜುಲೈ 25: ಪೇಜಾವರ ಮಠದ ವಿಶೇಷ ತೀರ್ಥ ಶ್ರೀಪಾದರು ತಮ್ಮ 81ನೇ ಚಾತುರ್ಮಾಸ ವ್ರತವನ್ನು ಮೈಸೂರಿನಲ್ಲಿ ನಡೆಸಲಿದ್ದಾರೆ. ಜುಲೈ 26ರ ನಾಳೆಯಿಂದ ಸೆಪ್ಟೆಂಬರ್ 14ರವರೆಗೆ ನಗರದ ಸರಸ್ವತಿಪುರಂನ ಕೃಷ್ಣಧಾಮದಲ್ಲಿ ನಡೆಯುವ ಚಾತುರ್ಮಾಸ ಆಚರಣೆಗೆ ವಿಶ್ವೇಶ್ವರ ತೀರ್ಥರು ಹಾಗೂ ವಿಶ್ವಪ್ರಸನ್ನ ತೀರ್ಥರು ಆಗಮಿಸಲಿದ್ದಾರೆ.

ಮಳೆಗಾಗಿ ಪೇಜಾವರ ಶ್ರೀಗಳಿಂದ ತಲಕಾವೇರಿಯಲ್ಲಿ ಪೂಜೆ ಮಳೆಗಾಗಿ ಪೇಜಾವರ ಶ್ರೀಗಳಿಂದ ತಲಕಾವೇರಿಯಲ್ಲಿ ಪೂಜೆ

ಇದು ಪೇಜಾವರ ಶ್ರೀಗಳ 81ನೇ ಮಹಾನ್ ಚಾತುರ್ಮಾಸ್ಯವಾಗಿದ್ದು, ಯತಿಗಳಲ್ಲೇ ಅತಿ ಹೆಚ್ಚು ಚಾತುರ್ಮಾಸ್ಯ ಕೈಗೊಂಡ ಕೀರ್ತಿ ಇವರಿಗೆ ಸಲ್ಲುತ್ತದೆ.

 ಬೆಂಗಳೂರಿನಲ್ಲಿ ರಾಘವೇಶ್ವರ ಶ್ರೀಗಳ ಬೆಂಗಳೂರಿನಲ್ಲಿ ರಾಘವೇಶ್ವರ ಶ್ರೀಗಳ "ರಾಮಾಯಣ ಚಾತುರ್ಮಾಸ್ಯ"

51 ದಿನಗಳ ಕಾಲ ನಗರದ ಕೃಷ್ಣಧಾಮದಲ್ಲಿ ನಿರಂತರವಾಗಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ. 26ರ ನಾಳೆ ಸಂಜೆ ನಗರಕ್ಕೆ ಸರಸ್ವತಿಪುರಂನ ಅಗ್ನಿಶಾಮಕ ದಳದಿಂದ ಉಭಯ ಶ್ರೀಗಳ ಮೆರವಣಿಗೆ ನಡೆಯಲಿದೆ.

ಚಾತುರ್ಮಾಸ್ಯದ ಅಷ್ಟು ದಿನಗಳು ಕೃಷ್ಣಧಾಮದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ. ಸರ್ಕಾರಿ ಶಾಲೆಗಳಲ್ಲಿ ಉಚಿತ ವೈದ್ಯಕೀಯ ತಪಾಸಣೆ, ಉಚಿತ ಚಿಕಿತ್ಸೆ, ಆಯುರ್ವೇದ ಗಿಡಗಳನ್ನು ನೆಡುವುದು ಸೇರಿದಂತೆ ಸಾಮಾಜಿಕ ಕಾರ್ಯಗಳನ್ನು ನಡೆಸಲಾಗುತ್ತದೆ. ಇದು ಪೇಜಾವರ ಶ್ರೀಗಳ 81ನೇ ಚಾತುರ್ಮಾಸ ಆಗಿರುವುದರಿಂದ 810 ಬಾಟಲಿ ರಕ್ತ ಸಂಗ್ರಹಿಸಿ ರಕ್ತನಿಧಿಗಳಿಗೆ ನೀಡಲು ಚಾತುರ್ಮಾಸ್ಯ ಆಡಳಿತ ಮಂಡಳಿ ಅಧ್ಯಕ್ಷ ವಾಸುದೇವ್ ಭಟ್ ತಿಳಿಸಿದ್ದಾರೆ. ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದರಂತೆ ವಿಚಾರ ಸಂಕಿರಣ, ಹೋಮ - ಹವನ ಶ್ರೀಗಳಿಂದ ಪಾಠ ಪ್ರವಚನ, ಯುವಗೋಷ್ಠಿ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

English summary
81st Chaturmasa Vratha of Pejwara Shree held at Mysuru from July 26 to September 14. Vishweshwara Theertha and Vishva Prasanna Theertha will arrive at the Chaturmasa celebration at the Krishnadhamma in Saraswatipuram in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X