• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಫೋಟೋಗೆ ಫೋಸ್ ಕೊಡಲು ಹೋಗಿ ಪ್ರಾಣ ತೆತ್ತ ಯುವಕ

|

ಮೈಸೂರು, ಫೆಬ್ರವರಿ 22: ನಿಂತಿದ್ದ ರೈಲಿನ ಮೇಲೆ ನಿಂತು ಫೋಟೋ ಶೂಟ್ ನಡೆಸುವ ವೇಳೆ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಘಟನೆ ಮೈಸೂರಿನ ನಗುನಳ್ಳಿ ರೈಲು ನಿಲ್ದಾಣದಲ್ಲಿ ನಡೆದಿದೆ.

ಟಿ. ನರಸೀಪುರದಲ್ಲಿ ಮಹಿಳೆ ಅನುಮಾನಾಸ್ಪದ ಸಾವು:ಕೊಲೆ ಶಂಕೆ

ಮೃತನನ್ನು ಮೈಸೂರಿನ ಪ್ರೀತಂ (15) ಎಂದು ಗುರುತಿಸಲಾಗಿದೆ. ನಿಂತಿದ್ದ ರೈಲಿನ ಮೇಲೆ ಫೋಟೋ ಶೂಟ್ ಮಾಡುವ ವೇಳೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ.

ಸಾವಿನ ತಾಣವಾಗಿ ಮಾರ್ಪಾಡಾದ ಪ್ರವಾಸಿ ತಾಣ ಮುತ್ತತ್ತಿ

ಅವಘಡ ಕುರಿತು ಮಾಹಿತಿ ಪಡೆದ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಫೋಟೋ ಫೋಸ್ ಕೊಡಲು ಹೋಗಿ ಬಾಲಕ ಪ್ರಾಣ ತೆತ್ತಿರುವುದು ವಿಪರ್ಯಾಸ.

ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ

ನಗರದ ಪೊಲೀಸರು ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿಯನ್ನು ಮುಂದುವರಿಸಿದ್ದಾರೆ. ಗುರುವಾರ ಮಧ್ಯಾಹ್ನ ವಿಜಯನಗರ ಠಾಣೆಯ ಪೊಲೀಸರು ಸಾಯಿದಾ ಹರ್ಬಲ್ ಬ್ಯೂಟಿಪಾರ್ಲರ್ ಮೇಲೆ ದಾಳಿ ನಡೆಸಿ ಮದ್ದೂರಿನ ನಿವಾಸಿಗಳಾದ ಸಂತೋಷ್ ಮತ್ತು ಅವಿನಾಶ್ ಎಂಬುವವರನ್ನು ಬಂಧಿಸಿ, ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.

English summary
15 years old boy died while doing photosoot in Mysuru. This incident occurred at the Nagunalli railway station in Mysore.Here's more information on this news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X