ಮೈಸೂರಿನಲ್ಲಿ ವೈದ್ಯರ ಎಡವಟ್ಟಿನಿಂದ ಕೋಮಾ ಸ್ಥಿತಿ ತಲುಪಿದ 14 ವರ್ಷದ ಬಾಲಕ
ಮೈಸೂರು, ನವೆಂಬರ್ 23: ಕಳೆದ ವಾರದ ಹಿಂದಷ್ಟೇ ಕಿವಿ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೋರ್ವ ಸದ್ಯ ಸಾವು - ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
ನಂಜನಗೂಡು ತಾಲ್ಲೂಕಿನ ಕಡುಬುರು ಗ್ರಾಮದ ಬಾಲಕ ಅಭಿ (14) ನಾಲ್ಕು ದಿನದ ಹಿಂದೆ ಕಿವಿ ನೋವು ಎಂದು ಕೆ ಆರ್ ಆಸ್ಪತ್ರೆಗೆ ದಾಖಲಾಗಿದ್ದನು. ಈ ನಡುವೆ ಕಳೆದ ರಾತ್ರಿ ವೈದ್ಯರು ಚುಚ್ಚು ಮದ್ದು ನೀಡಿದ್ದರು. ಆದರೆ ಚುಚ್ಚುಮದ್ದು ನೀಡಿದ ನಂತರ ಬಾಲಕ ಅಭಿ ಕೋಮಾ ಸ್ಥಿತಿಗೆ ತಲುಪಿದ್ದಾನೆ.

ಕಳೆದ ರಾತ್ರಿಯಷ್ಟೇ ವೈದ್ಯರು ಯಾವುದೋ ಮೆಡಿಸಿನ್ ಕೊಟ್ಟು ಈ ಸ್ಥಿತಿಗೆ ಬರುವಂತೆ ಮಾಡಿದ್ದಾರೆ ಎಂದು ಅಭಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ.











Click it and Unblock the Notifications