• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೆರೆ ಪರಿಹಾರ ಕೇಂದ್ರದ 14 ಜನರು ಅಸ್ವಸ್ಥ : ಆಸ್ಪತ್ರೆಯಲ್ಲಿ ಚಿಕಿತ್ಸೆ

|

ಚಾಮರಾಜನಗರ, ಆಗಸ್ಟ್ 16: ಕೊಳ್ಳೇಗಾಲದ ಸರ್ಕಾರಿ ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆರಂಭಿಸಲಾಗಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ನೆರೆಪೀಡಿತ ಹಳೆ ಅಣಗಳ್ಳಿ ಗ್ರಾಮದ 14 ಮಂದಿ ಸಂತ್ರಸ್ತರು ಗುರುವಾರ ಅಸ್ವಸ್ಥಗೊಂಡಿದ್ದಾರೆ.

ಮೋದಿ ಭೇಟಿಯಾದ ಯಡಿಯೂರಪ್ಪ: ನೆರವಿಗಾಗಿ ಮತ್ತೆ ಮನವಿ

ಕೂಡಲೇ ಅವರನ್ನು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಹಳೆ ಅಣಗಳ್ಳಿ ಗ್ರಾಮದ ಪುಟ್ಟಮಾದಮ್ಮ, ಚಂದ್ರಮ್ಮ, ನಿಂಗಮ್ಮ, ದೊಡ್ಡಮ್ಮ, ಮಹದೇವಮ್ಮ, ಸುಂದ್ರಮ್ಮ, ಸಿದ್ದರಾಜು, ವೆಂಕಟರಂಗಯ್ಯ, ಸಿದ್ದರಾಜು, ಮಾದೇವ, ವೆಂಕಟಯ್ಯ ಸೇರಿದಂತೆ 14 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಮೈಕೈನೋವು, ಅಸ್ತಮಾ, ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಸ್ಥಳೀಯ ಶಾಸಕ ಎನ್.ಮಹೇಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಅವರು, "ನೆರೆ ಹಾವಳಿಗೆ ತುತ್ತಾಗಿ ಪರಿಹಾರ ಕೇಂದ್ರದಲ್ಲಿದ್ದ ಕೆಲವರಿಗೆ ನಿಶ್ಶಕ್ತಿ ಉಂಟಾಗಿದೆ. ಆರೋಗ್ಯದಲ್ಲಿ ಸಣ್ಣ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪವಿಭಾಗ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಕಾಯ್ದಿರಿಸಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದ ಮೇಲೆ ವೈದ್ಯರ ತೀವ್ರ ನಿಗಾ ವಹಿಸಿದ್ದಾರೆ" ಎಂದು ಮಾಹಿತಿ ನೀಡಿದರು.

English summary
14 Flood effected people hospitalized in Kollegala talluk Chamrajnagara district. MLA N Mahesh visited hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X