ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ಹಳೆ ಹುಲಿಯನ್ನು ಬೇಟೆಯಾಡಿದ ಸಿಂಹ!

By Prasad
|
Google Oneindia Kannada News

ಮೈಸೂರು, ಮೇ 16 : ಮೈಸೂರಿನಲ್ಲಿ ಅನುಭವಿ ಹಳೆ ಹುಲಿ ಮತ್ತು ಬಿಸಿರಕ್ತದ ಯುವ ಸಿಂಹದ ನಡುವಿನ ಭೀಕರ ಕಾಳಗದಲ್ಲಿ ಅಂತಿಮವಾಗಿ ಅನುಭವ ಇಲ್ಲದಿದ್ದ ಸಿಂಹಕ್ಕೇ ಜಯ ಸಿಕ್ಕಿದೆ.

ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ನ ಹಳೆ ಹುಲಿ, 2009ರಲ್ಲಿ ಗೆದ್ದಿದ್ದ ಅಡಗೂರು ವಿಶ್ವನಾಥ್ ಅವರನ್ನು 9 ಸಾವಿರ ಮತಗಳ ಅಂತರದಿಂದ ಸೋಲಿಸಿ, ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿದ್ದಾರೆ.

ಮೈಸೂರಿನಲ್ಲಿ ಕೂಡ ನರೇಂದ್ರ ಮೋದಿ ಅಲೆ ಪರಿಣಾಮ ಬೀರಿರುವುದು ಈ ಫಲಿತಾಂಶದಿಂದ ತಿಳಿದುಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಪರಾಭವಗೊಂಡಿರುವುದು ಕಾಂಗ್ರೆಸ್ಸಿಗೆ ಮಾತ್ರವಲ್ಲ, ಪ್ರತಾಪ್ ಸಿಂಹ ಒಬ್ಬ ಅಪ್ರಬುದ್ಧ ರಾಜಕಾರಣಿ ಎಂದಿದ್ದ ಸಿದ್ದರಾಮಯ್ಯನವರಿಗೆ ತಲೆಎತ್ತಲಾರದಂತಾಗಿದೆ.

ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲದಿದ್ದದೆ ಕುರ್ಚಿ ಅಲುಗಾಡುವುದು ಖಂಡಿತ ಎಂದು ತಿಳಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಅವರ ತವರೂರಲ್ಲಿ ಗೆಲ್ಲಬೇಕಿತ್ತು. ಅವರು ವಿಶ್ವನಾಥ್ ಪರ ಸಾಕಷ್ಟು ಪ್ರಚಾರವನ್ನೂ ನಡೆಸಿದ್ದರು. ಆದರೆ, ಸ್ಥಳೀಯ ನಾಯಕ ವಿಜಯಶಂಕರ್ ಬದಲಿಗೆ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದ ಪ್ರತಾಪ್ ಮುಂದೆ ವಿಶ್ವನಾಥ್ ಅವರ ಪ್ರತಾಪ ನಡೆಯಲಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಸ್ವತಃ ನರೇಂದ್ರ ಮೋದಿ ಅವರೇ ಮೈಸೂರಿಗೆ ಆಗಮಿಸಿ ಪ್ರತಾಪ್ ಸಿಂಹ ಅವರಿಗೆ ಬೆನ್ನುತಟ್ಟಿ, ಅವರನ್ನು ಗೆಲ್ಲಿಸಿಕೊಡಬೇಕು ಎಂದು ಮೈಸೂರಿನಲ್ಲಿ ನಡೆದ ಬಹಿರಂಗ ಸಭೆ ಮತದಾರರನ್ನು ಕೋರಿದ್ದರು. ಮೋದಿ ಅಲೆಯಲ್ಲಿ ಮತದಾರರು ಕೊಚ್ಚಿಹೋಗಿರುವುದಂತೂ ಖಂಡಿತ. ಅಂದ ಹಾಗೆ, ಇಡೀ ಕರ್ನಾಟಕದಲ್ಲಿ ಶೇ.57ರಷ್ಟು ಜನರು ಮೋದಿಗಾಗಿ ಮತ ಮಾಡಿದ್ದಾರೆ.

Karnataka Lok Sabha Election Result 2014 : Mysore
ಮೈಸೂರು-ಕೊಡಗು ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಪ್ರತಾಪ್ ಸಿಂಹ 1
ಬಿಜೆಪಿ 503,908
ಅಡಗೂರು ವಿಶ್ವನಾಥ್
2
ಕಾಂಗ್ರೆಸ್ 472,300
ಚಂದ್ರಶೇಖರಯ್ಯ 3
ಜೆಡಿಎಸ್ 138,587
ಸಿ ಮೋಹನ್ ಕುಮಾರ್
4
ಬಹುಜನ ಸಮಾಜ ಪಕ್ಷ
13,637
English summary
Lok Sabha Election results 2014, Karnataka : BJP candidate Pratap Simha wins in Mysore-Kodagu against Adagur Vishwanath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X