ಮೈಸೂರು: ಕೊಟ್ಟ ಮಾತು ದಿಟ್ಟ ಸಾಧನೆ, ಸಾಧನಾ ಸಮಾವೇಶದ ಹೈಲೈಟ್ಸ್
ಮೈಸೂರು, ಜೂನ್ 3: ರಾಜ್ಯ ಸರ್ಕಾರ 4 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ 'ಕೊಟ್ಟ ಮಾತು ದಿಟ್ಟ ಸಾಧನೆ ಮತ್ತು ಸಾಧನಾ ಸಮಾವೇಶ' ಯಶಸ್ವಿಯಾಗಿ ನಡೆದಿದೆ. 2018ರ ವಿಧಾನ ಸಭಾ ಚುನಾವಣೆ ಕಣ್ಣೆದುರಿನಲ್ಲೇ ಇರುವುದರಿಂದ ರಾಜ್ಯ ಕಾಂಗ್ರೆಸ್ಸಿಗೆ ಒಗ್ಗಟ್ಟಿನ ಪ್ರದರ್ಶನವೂ ಅನಿವಾರ್ಯವೆನ್ನಿಸಿಸದೆ. ಇಂಥ ಸಂದರ್ಭದಲ್ಲಿ ಸಾಧನಾ ಸಮಾವೇಶವನ್ನು ಹಮ್ಮಿಕೊಂಡಿದ್ದ ಕಾಂಗ್ರೆಸ್ ಸರ್ಕಾರ ಮುಂಬರುವ ಚುನಾವಣೆಯನ್ನೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ.
ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶದ ಹೈಲೈಟ್ಸ್ ನಿಮಗಾಗಿ ಇಲ್ಲಿದೆ.

* ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ
* ಸಚಿವರು ಡೊಳ್ಳು ಭಾರಿಸಿ ಸರ್ಕಾರ ಐದನೇ ವರ್ಷಕ್ಕೆ ಕಾಲಿರಿಸಿದ್ದನ್ನು ಸಂಭ್ರಮಿಸಿದರು.[ಮೈಸೂರಿನಲ್ಲಿ ಸಾಧನ ಸಮಾವೇಶ: ಬಿಎಸ್ವೈ, ಗೌಡರಿಗೂ ಆಹ್ವಾನ]
* ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಸರ್ಕಾರದ ಯೋಜನೆಗಳ ಕಿರು ಹೊತ್ತಿಗೆಯನ್ನ ಬಿಡುಗಡೆ ಮಾಡಿದರು.
* ಕೆಪಿಸಿಸಿ ಅಧ್ಯಕ್ಷಪರಮೇಶ್ವರ್, ಸಚಿವರಾದ ಎಂ. ಕೃಷ್ಣಪ್ಪ, ಯು.ಟಿ.ಖಾದರ್, ಆಂಜನೇಯ, ಹಿರಿಯ ಮುಖಂಡ ಆಸ್ಕರ್ ಫರ್ನಾಂಡೀಸ್, ಸೇರಿ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.

* ಜನರಿಗೆ ನೀಡಿದ ಮಾತನ್ನು ನಾವು ಉಳಿಸಿಕೊಂಡಿದ್ದೇವೆ, ನಾವೆಂದೂ ರೆಸಾರ್ಟ್ ರಾಜಕಾರಣ ಮಾಡಿಲ್ಲ: ಸಚಿವ ಮಹಾದೇವಪ್ಪ
* ಗಾಂಧಿಜೀಯವರ ಕನಸು ಇಂದು ನನಸಾಗಿದ್ದು, ಚುನಾವಣೆ ವೇಳೆ ಕೊಟ್ಟ ಮಾತನ್ನ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈಡೇರಿಸಿದೆ : ಆಸ್ಕರ್ ಫರ್ನಾಂಡಿಸ್
* ಸಿಎಂ ಸಿದ್ದರಾಮಯ್ಯ ಚಾಣಕ್ಯನಿದ್ದಂತೆ: ಆಸ್ಕರ್ ಫರ್ನಾಂಡಿಸ್
* ಸವಲತ್ತು ನೀಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಧೈರ್ಯ ಮತ್ತು ಹೆಮ್ಮೆಯಿಂದ ಹೇಳಿ ಎಂದು ಜನತೆಯೆನ್ನು ಪಶುಸಂಗೋಪನಾ ಸಚಿವ ಎ.ಮಂಜು
* ಸಮಾವೇಶಕ್ಕೆ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಿಂದ ಕಾರ್ಯಕರ್ತರು ಬರುತ್ತಿದ್ದ ಖಾಸಗಿ ಬಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಹಲವು ಕಾರ್ಯಕರ್ತರಿಗೆ ಸಣ್ಣಪುಟ್ಟ ಗಾಯಗಳಾಗಿವೆ.












Click it and Unblock the Notifications