ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾತ್ರಿ 10 ಗಂಟೆ ಮೇಲೆ ಚಾಮುಂಡಿ ಬೆಟ್ಟಕ್ಕೆ ಕಾಲಿಟ್ಟರೆ ಕೇಸ್!

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜೂನ್ 7 : ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿರುವ ಚಾಮುಂಡಿ ಬೆಟ್ಟದಲ್ಲಿ ರಾತ್ರಿ ವೇಳೆ ನಡೆಯುವ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕುವ ಸಲುವಾಗಿ ಜಿಲ್ಲಾಡಳಿತ ಚಾಮುಂಡಿ ಬೆಟ್ಟ ಪ್ರವೇಶಿಸುವ ರಸ್ತೆಗಳಿಗೆ ಗೇಟ್ ಅಳವಡಿಸಿ, ಬೀಗ ಜಡಿಯಲು ನಿರ್ಧರಿಸಿದೆ.

ಅನೈತಿಕ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಗಸ್ತು ನಿಯೋಜಿಸಲಾಗಿತ್ತದರೂ, ಭಕ್ತರ ಸೋಗಿನಲ್ಲಿ ಪೊಲೀಸರ ಕಣ್ತಪ್ಪಿಸಿ ಯುವ ಜೋಡಿಗಳು ಎಲ್ಲೆಂದರಲ್ಲಿ ಕಾನೂನು ಬಾಹಿರ ಕೃತ್ಯ ನಡೆಸುತ್ತಿದ್ದರು. ಇಂತಹ ಘಟನೆಗಳಿಂದ ಚಾಮುಂಡಿ ಬೆಟ್ಟದ ಕೀರ್ತಿಗೆ ಧಕ್ಕೆಯಾಗುತ್ತಿರುವುದನ್ನು ತಡೆಗಟ್ಟುವುದಕ್ಕೆ ರಾತ್ರಿ 10ರ ನಂತರ ಬೆಟ್ಟೆ ರಸ್ತೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಗೇಟ್ ಅಳವಡಿಸುವ ಕಾರ್ಯ ಆರಂಭವಾಗಲಿದೆ.[ಮೈಸೂರು ಬೆಟ್ಟದಲ್ಲಿ ಆಪರೇಷನ್ ಚಾಮುಂಡಿ: ಪ್ರೇಮಿಗಳಿಗೆ ಪೀಕಲಾಟ]

ಇತ್ತೀಚಿನ ದಿನಗಳಲ್ಲಿ ನೈಟ್ ರೈಡ್ ಹೆಸರಿನಲ್ಲಿ ರಾತ್ರಿ 10 ಗಂಟೆಯ ನಂತರ ಯುವಕ -ಯುವತಿಯರ ಗುಂಪುಗಳು ಚಾಮುಂಡಿಬೆಟ್ಟಕ್ಕೆ ಆಗಮಿಸಿ ರಸ್ತೆ ಬದಿಯಲ್ಲಿಯೇ ಮದ್ಯಪಾನ ಮಾಡಿ, ಕುಣಿದು -ಕುಪ್ಪಳಿಸಿ ಮೋಜು -ಮಸ್ತಿ ಮಾಡುವುದರ ಜೊತೆಗೆ ಅನೈತಿಕ ಚಟುವಟಿಕೆಗಳು ಮಧ್ಯ ರಾತ್ರಿ 12ರವರೆಗೂ ಎಗ್ಗಿಲ್ಲದೆ ನಡೆಯುತ್ತಿದೆ.[ಚಾಮುಂಡಿ ಬೆಟ್ಟಕ್ಕೆ ಇನ್ನು ಮುಂದೆ ಟೈಟ್ ಸೆಕ್ಯೂರಿಟಿ..!]

ಬೆಟ್ಟದ ಪಾವಿತ್ರ್ಯಕ್ಕೆ ದಕ್ಕೆ

ಬೆಟ್ಟದ ಪಾವಿತ್ರ್ಯಕ್ಕೆ ದಕ್ಕೆ

ಅನೈತಿಕ ಚಟುವಟಿಕೆಯಿಂದ ಬೆಟ್ಟದ ಪ್ರಾವಿತ್ಯ ಹಾಳಾಗುತ್ತಿದೆ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಕಳೆದ 2 ವರುಷದ ಹಿಂದೆಯೇ ರಾತ್ರಿ 11ರ ಬಳಿಕ ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಮತ್ತೆ ರಾತ್ರಿ ಸಂಚಾರ ಹೆಚ್ಚಾಗಿ, ಸ್ಥಳೀಯರು ತಲೆ ತಗ್ಗಿಸುವಂತಹ ಕೃತ್ಯಗಳು ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ವರದಿಯಾಗಿತ್ತು.[ನಾಡದೇವತೆಯ ವರ್ಧಂತಿಗೆ ತಯಾರಾಗುತ್ತಿದೆ ಸಾಂಸ್ಕೃತಿಕ ನಗರಿ]

ಎಲ್ಲೆಲ್ಲಿ ಗೇಟ್ ಅಳವಡಿಕೆ?

ಎಲ್ಲೆಲ್ಲಿ ಗೇಟ್ ಅಳವಡಿಕೆ?

[ಮಳೆಗಾಗಿ ಚಾಮುಂಡಿ ಬೆಟ್ಟದ ಮಹಾನಂದಿಗೆ ಮಹಾಭಿಷೇಕ][ಮಳೆಗಾಗಿ ಚಾಮುಂಡಿ ಬೆಟ್ಟದ ಮಹಾನಂದಿಗೆ ಮಹಾಭಿಷೇಕ]

ಸಿಸಿ ಕ್ಯಾಮರಾ ಕಣ್ಗಾವಲು

ಸಿಸಿ ಕ್ಯಾಮರಾ ಕಣ್ಗಾವಲು

ಒಂದೆಡೆ ರಸ್ತೆಗಳಿಗೆ ಗೇಟ್ ನಿರ್ಮಿಸಿ ಬೀಗ ಹಾಕಿದರೆ, ಮತ್ತೊಂದೆಡೆ ಸಿಸಿ ಕ್ಯಾಮರಾ ಅಳವಡಿಸಿ ರಾತ್ರಿ ವೇಳೆ ನಿಯಮ ಉಲ್ಲಂಘಿಸಿ ಓಡಾಡುವವರ ಮೇಲೆ ಹದ್ದಿನ ಕಣ್ಣಿಡಲಾಗುವುತ್ತದೆ. ಮೂರು ರಸ್ತೆಗಳಲ್ಲದೇ, ಮೆಟ್ಟಿಲುಗಳಲ್ಲದೇ ಎಲ್ಲ ಮಾರ್ಗದಲ್ಲಿಯೂ ಸಿಸಿ ಕ್ಯಾಮರಾ ಅಳವಡಿಸಿ ಭಕ್ತರ ಭದ್ರತೆಗೆ ಕ್ರಮಕೈಗೊಳ್ಳಲು ದೇವಾಲಯದ ಆಡಳಿತ ಮಂಡಳಿ ತೀರ್ಮಾನಿಸಿದೆ.

ಜಿಲ್ಲಾಧಿಕಾರಿಗಳಿಂದಲೂ ಹೊರ ಬಿದ್ದಿದೆ ಸೂಚನೆ

ಜಿಲ್ಲಾಧಿಕಾರಿಗಳಿಂದಲೂ ಹೊರ ಬಿದ್ದಿದೆ ಸೂಚನೆ

ಚಾಮುಂಡಿಬೆಟ್ಟದ ರಸ್ತೆಗಳಿಗೆ ಗೇಟ್ ಅಳವಡಿಸಿ ಬೀಗ ಹಾಕುವ ದೇವಾಲಯ ಆಡಳಿತ ಮಂಡಳಿಯ ಪ್ರಸ್ತಾವನೆಗೆ ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ಸಮ್ಮತಿ ಸೂಚಿಸಿದ್ದು, ಬೆಟ್ಟದ ಪ್ರಾವಿತ್ಯ ಕಾಪಾಡುವುದಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ದೇವಾಲಯ ಆಡಳಿತ ಮಂಡಳಿಗೂ ಸೂಚನೆ

ದೇವಾಲಯ ಆಡಳಿತ ಮಂಡಳಿಗೂ ಸೂಚನೆ

ಬೆಟ್ಟದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರಂದೀಪ್ ಅವರು, ರಾತ್ರಿ ವೇಳೆ ಅನಗತ್ಯವಾಗಿ ಸ್ವೇಚ್ಛಾಚಾರದ ಸಂಚಾರ, ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕ್ರಮಕೈಗೊಳ್ಳಲು, ವರ್ಷಾಂತ್ಯದೊಳಗೆ ಗೇಟ್ ಮತ್ತು ಸಿಸಿ ಕ್ಯಾಮರಾ ಅಳವಡಿಕೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ದೇವಾಲಯದ ಆಡಳಿತ ಮಂಡಳಿಗೆ ತಿಳಿಸಿದ್ದಾರೆ.

English summary
To control illegal activites in Karnataka's famous tourism spot Mysuru's Chamundi hills, the District administration decided to restrict entry to the tourists after 10 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X