ಮೈಸೂರಿನಲ್ಲಿ ಪ್ರವಾಸಿಗರಿಗೆ ಬಾಡಿಗೆ ಸೈಕಲ್, ಕೇಳಲಿದೆ ಟ್ರಿಣ್-ಟ್ರಿಣ್

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಜನವರಿ 1: ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಹದಗೆಡುತ್ತಿರುವ ಪರಿಸರವನ್ನು ಸಂರಕ್ಷಿಸುವ, ನಾನಾ ಕಡೆಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸೂಕ್ತ ವಾಹನ ಸೌಲಭ್ಯ ಇಲ್ಲದೆ ಪರದಾಡುವ ಜನರಿಗೆ ಅನುಕೂಲ ಕಲ್ಪಿಸುವ ಕಾರಣಕ್ಕೆ ನೂರಾರು ಸೈಕಲ್‌ ಗ‌ಳು ಶೀಘ್ರವೇ ಸಾಂಸ್ಕೃತಿಕ ನಗರಿ ಮೈಸೂರಿನ ರಸ್ತೆಗಳಲ್ಲಿ ಸಂಚರಿಸಲು ಸಜ್ಜಾಗಿವೆ.

ರಾಜ್ಯಸರ್ಕಾರ ಗ್ಲೋಬಲ್‌ ಎನ್ವಿರಾನ್‌ಮೆಂಟ್‌ ಫೆಸಿಲಿಟಿ ಗ್ರ್ಯಾಂಟ್‌ ಹಾಗೂ ಮೈಸೂರು ನಗರಪಾಲಿಕೆ ಸಹಯೋಗದಲ್ಲಿ ಟ್ರಿಣ್‌ ಟ್ರಿಣ್‌ ಪಬ್ಲಿಕ್‌ ಬೈಸಿಕಲ್‌ ಶೇರಿಂಗ್‌ ಸಿಸ್ಟಂ ಜಾರಿಗೊಳಿಸಲು ಮುಂದಾಗಿದೆ. 20 ಕೋಟಿ ರುಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, 450 ಸೈಕಲ್‌ಗ‌ಳು ರಸ್ತೆಗಿಳಿಯಲಿವೆ.[ಚೆನ್ನಕೇಶವನ ಕನಸು ನನಸಾಗಿಸಿದ ನುಗ್ಗೆ ಬೆಳೆ]

ಮೊದಲ ಹಂತದಲ್ಲಿ 200 ಸೈಕಲ್‌ಗ‌ಳು ರಸ್ತೆಗಿಳಿಯಲು ಸಿದ್ಧವಾಗಿದ್ದು, ಇದಕ್ಕಾಗಿ ನಗರದ ಪ್ರಮುಖ ಕಡೆಗಳಲ್ಲಿ ಸೈಕಲ್‌ ಸ್ಟ್ಯಾಂಡ್‌ ನಿರ್ಮಾಣ, ನಿಲ್ದಾಣಕ್ಕೆ ಅಗತ್ಯವಿರುವ ವಿದ್ಯುತ್‌ ಸಂಪರ್ಕ, ಸ್ಮಾರ್ಟ್‌ಕಾರ್ಡ್‌ ಸ್ವೆ„ಪ್‌ ಮಾಡುವ ಯಂತ್ರಗಳ ಅಳವಡಿಕೆ ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹೀಗಾಗಿ ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮುಂದಿನ ದಿನಗಳಲ್ಲಿ ನಗರದೆಲ್ಲೆಡೆ ಸೈಕಲ್‌ಗ‌ಳ ಟ್ರಿಣ್‌ ಟ್ರಿಣ್‌ ಸದ್ದು ಕೇಳಲಿದೆ.

ಸೈಕಲ್‌ ಲಭ್ಯತೆ ಹೇಗೆ?

ಸೈಕಲ್‌ ಲಭ್ಯತೆ ಹೇಗೆ?

ಸೂಕ್ತ ವಾಹನ ಸೌಲಭ್ಯವಿಲ್ಲದೆ ಪರದಾಡುವ ಸಾರ್ವಜನಿಕರು ನಗರದ ವಿವಿಧ ಕಡೆಗಳಿಗೆ ತೆರಳಬೇಕಾದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ 450 ಟ್ರಿಣ್‌ ಟ್ರಿಣ್‌ ಸೈಕಲ್‌ಗ‌ಳು ಸಾರ್ವಜನಿಕರು ಹಾಗೂ ಪ್ರವಾಸಿಗರ ಬಳಕೆಗೆ ಲಭ್ಯವಿದ್ದು, ಸೈಕಲ್‌ನಲ್ಲಿ ಓಡಾಡ ಬಯಸುವವರು ನಗರದಲ್ಲಿರುವ ಯಾವುದಾದರೊಂದು ನೋಂದಣಿ ಕೇಂದ್ರದಲ್ಲಿ ತಮ್ಮ ಗುರುತಿನ ಚೀಟಿ, ವಿಳಾಸದ ಚೀಟಿಯನ್ನು ಪ್ರದರ್ಶಿಸಿದರೆ ಅವರಿಗೆ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತದೆ.

ಎಷ್ಟು ಮೊತ್ತ

ಎಷ್ಟು ಮೊತ್ತ

ಈ ಸ್ಮಾರ್ಟ್‌ ಕಾರ್ಡ್‌ ಅನ್ನು ಸ್ವೆ„ಪಿಂಗ್‌ ಮಿಷನ್‌ನಲ್ಲಿ ಸ್ವೆ„ಪ್‌ ಮಾಡಿದರೆ ಒಂದು ಸೈಕಲ್‌ ಪಡೆಯಬಹುದು. ಸಾರ್ವಜನಿಕರು ಸೈಕಲ್‌ ಪಡೆಯಲು ಮೊದಲ ಒಂದು ಗಂಟೆಗೆ 15 ರು., ನಂತರದ ಪ್ರತಿ ಅರ್ಧ ಗಂಟೆಗೆ 10 ರುಪಾಯಿಯಂತೆ ಹಣ ಪಾವತಿಸಬೇಕಾಗಿದೆ

ಎಲ್ಲೆಲ್ಲಿ ನೋಂದಣಿ?

ಎಲ್ಲೆಲ್ಲಿ ನೋಂದಣಿ?

ಸರ್ಕಾರ ಹಾಗೂ ಪಾಲಿಕೆಯ ಟ್ರಿಣ್‌ ಟ್ರಿಣ್‌ ಪಬ್ಲಿಕ್‌ ಬೈಸಿಕಲ್‌ ಶೇರಿಂಗ್‌ ಸಿಸ್ಟಂಗಾಗಿ ನಗರದ ಪ್ರಮುಖ ಕಡೆಗಳಲ್ಲಿ ನೋಂದಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಅರಮನೆ, ರೈಲು ನಿಲ್ದಾಣ, ಕೇಂದ್ರ ಬಸ್‌ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ನಗರ ಪಾಲಿಕೆ ಕಚೇರಿ, ಜಯನಗರದ ಪಾಲಿಕೆ ವಲಯ ಕಚೇರಿ ಹಾಗೂ ಮೃಗಾಲಯದ ಸಮೀಪ ನೋಂದಣಿ ಕೇಂದ್ರವನ್ನು ತೆರೆಯಲಾಗಿದೆ. ಹೀಗಾಗಿ ಸೈಕಲ್‌ ಪಡೆಯುವವರು ಈ ಯಾವುದಾದರೂ ಒಂದು ಕೇಂದ್ರದಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಸೈಕಲ್‌ ಪಡೆಯಬಹುದಾಗಿದೆ. ಈ ಎಲ್ಲ ಕೇಂದ್ರಗಳಿಗೆ ಸೂಕ್ತ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

22 ಕಡೆ ನಿಲ್ದಾಣ

22 ಕಡೆ ನಿಲ್ದಾಣ

ಸಾರ್ವಜನಿಕರ ಅನುಕೂಲಕ್ಕಾಗಿ ನಗರದ 22 ಸ್ಥಳಗಳಲ್ಲಿ ಸೈಕಲ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಅದರಂತೆ ಅರಮನೆ, ಸಂತ ಫಿಲೋಮಿನಾ ಚರ್ಚ್‌, ಮೃಗಾಲಯ, ಮಾಲ್‌ ಆಫ್ ಮೈಸೂರು, ರೈಲ್ವೆ ನಿಲ್ದಾಣ, ಕಾರಂಜಿಕೆರೆ, ದೇವರಾಜ ಅರಸು ರಸ್ತೆ, ಕಲಾಮಂದಿರ, ನ್ಯಾಯಾಲಯದ ಸಮೀಪ, ಕುಕ್ಕರಹಳ್ಳಿ ಕೆರೆ, ಜಗನ್ಮೋಹನ ಅರಮನೆ, ನಗರ ಬಸ್‌ನಿಲ್ದಾಣ, ಒಂಟಿಕೊಪ್ಪಲ್‌, ಆಕಾಶವಾಣಿ, ಸಂತ ಜೋಸೆಫ್ ಶಾಲೆ, ಚಾಮುಂಡಿಬೆಟ್ಟದ ತಪ್ಪಲು, ಚಾಮುಂಡಿಬೆಟ್ಟ, ಜಯನಗರ, ಹಾರ್ಡಿಂಜ್‌ ವೃತ್ತ, ಸರ್ಕಾರಿ ಆಯುರ್ವೇದ ವೃತ್ತ, ಖಾಸಗಿ ಬಸ್‌ ನಿಲ್ದಾಣ, ಮಿನಿ ವಿಧಾನಸೌಧ, ರಾಮಸ್ವಾಮಿ ವೃತ್ತ, ಊಟಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಬಳಿ ನಿಲ್ದಾಣ ನಿರ್ಮಿಸಲಾಗಿದೆ. ನೋಂದಣಿ ಕೇಂದ್ರಗಳಲ್ಲಿ ಸ್ಮಾರ್ಟ್‌ ಕಾರ್ಡ್‌ ಪಡೆದವರು ಈ ಯಾವುದೇ ನಿಲ್ದಾಣದಲ್ಲಾದರೂ ಸೈಕಲ್‌ ಪಡೆಯಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
To protect the environment from pollution and to reduce traffic in Mysuru city cycle rantal scheme starts soon.
Please Wait while comments are loading...