ಜುಲೈ 30: ಯಾಕೂಬ್ ಮೆಮನ್ ಗೆ ಶಾಪವಾದ '2' ಸಂಖ್ಯೆ
ಮುಂಬೈ, ಜುಲೈ 29: ಹುಟ್ಟುಹಬ್ಬದ ದಿನದಂದೇ ಸಾವನ್ನಪ್ಪಿದವರ ಸಂಖ್ಯೆ ಜಗತ್ತಿನಲ್ಲಿ ವಿರಳ ಎನ್ನಬಹುದು. ಕನ್ನಡ ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿಲಿಯಂ ಷೇಕ್ಸ್ ಪಿಯರ್ ಮುಂತಾದವರು ಸದ್ಯಕ್ಕೆ ನೆನಪಿಗೆ ಬರುತ್ತಾರೆ. ಈ ಬಾರಿ ಸಾಯುವ ಭಾಗ್ಯ ಈಗ 1993ರ ಮುಂಬೈ ಸ್ಫೋಟ ಪ್ರಕರಣದ ಅಪರಾಧಿ, ಉಗ್ರ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ ಗೂ ಒದಗಿ ಬಂದಿದೆ.
ಈ ಬಗ್ಗೆ ಸಂಖ್ಯಾ ಶಾಸ್ತಜ್ಞರು ಕೂಡಾ ಸಾಕಷ್ಟು ಲೆಕ್ಕಾಚಾರ ಹಾಕಿ ಜುಲೈ 30, 2015ರಂದೇ ಯಾಕೂಬ್ ಮೆಮನ್ ಗೆ ಮರಣ ಎಂದು ಷರಾ ಹಾಕಿದ್ದಾರೆ. 1962-ಯಾಕೂಬ್ ಹುಟ್ಟಿದ ವರ್ಷ 18 ಸಂಖ್ಯೆಯನ್ನು ನೀಡುತ್ತದೆ. ಇದು ಜುಲೈ 30, 2015ಕ್ಕೆ ಹೋಲಿಕೆ ನೀಡುತ್ತದೆ. [ಯಾಕೂಬ್ ಮೆಮನ್ ಗೆ ಗಲ್ಲುಶಿಕ್ಷೆ ಕಾಯಂ : ಸುಪ್ರೀಂ]

ಆತನ ಹುಟ್ಟಿದ ದಿನಾಂಕ ಪೂರ್ತಿ ಕೂಡಿಸಿ ಲೆಕ್ಕಾಚಾರ ಹಾಕಿದರೆ 28 ಸಂಖ್ಯೆ ಬರುತ್ತದೆ. YAKUB ಹೆಸರು ಕೂಡಿಸಿದರೆ 13 ಸಂಖ್ಯೆ ಬರುತ್ತದೆ. MEMON ಸೇರಿದರೆ 24 ಬರುತ್ತದೆ. ಎರಡನ್ನು ಸೇರಿಸಿದರೆ 37 ಬರುತ್ತದೆ. ಯಾಕೂಬ್ ಮೆಮನ್ ಗೆ 'ನಾಮಬಲ' ಇತ್ತು. ಇದೆ. ಅದರೆ, ಆತ ಅದನ್ನು ಸರಿಯಾಗಿ ಉಪಯೋಗಿಸಿಲ್ಲ. ಎಂದು ಸಂಖ್ಯಾಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.[ಉಗ್ರರಿಗೆ ಸಂಖ್ಯೆ 13 ಶುಭ, ಅಮಾಯಕರಿಗೆ ರಾಹು ಕಾಟ]
ಒಟ್ಟಾರೆ 62 ಸಂಖ್ಯೆ ಯಾವುದೇ ವರ್ಷ ಬಂದರೂ ಅದು ಯಾಕೂಬ್ ಮೆಮನ್ ಗೆ ಕಟಂಕ ಎಂದಿದ್ದಾರೆ. ಈ ಹಿಂದೆ ದೇವದಾಸ್ ನಲ್ಲಿ ನಟಿಸಿದ್ದ ಬೆಂಗಾಲಿ ನಟಿ ಸುಚಿತ್ರಾ ಸೇನ್ ಅವರಿಗೂ ಕೊನೆ 2 ಸಂಖ್ಯೆಗಳು ಮಾರಕವಾಗಿತ್ತು ಎಂದು ಉದಾಹರಣೆ ನೀಡುತ್ತಾರೆ. ಸಂಖ್ಯಾ ಶಾಸ್ತ್ರಜ್ಞರ ಮಾತು ನಂಬುವುದೋ ಬಿಡುವುದೋ ಜುಲೈ 30 ಯಾಕೂಬ್ ಮೆಮನ್ ಪಾಲಿಗೆ ಮರೆಯಲಾರದ ದಿನವಂತೂ ಹೌದು.












Click it and Unblock the Notifications