• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಗ್ರರಿಗೆ ಸಂಖ್ಯೆ 13 ಶುಭ, ಅಮಾಯಕರಿಗೆ ರಾಹು ಕಾಟ

By Mahesh
|
ಸಂಖ್ಯೆ 13ಕ್ಕೂ ಭಯೋತ್ಪಾದನಾ ಕೃತ್ಯಗಳಿಗೂ ಏನಾದರೂ ಲಿಂಕ್ ಇದೆಯೇ? ಅನೇಕ ಅಪಘಾತಗಳು, ಬಾಂಬ್ ಸ್ಫೋಟಗಳು, ಅಹಿತಕರ ಘಟನೆಗಳಿಗೆ 13ನೇ ದಿನಾಂಕ ಸಾಕ್ಷಿಯಾಗಿ ನಿಂತಿರುವುದು ಕೇವಲ ಕಾಕತಾಳೀಯವೇ? ವಿದೇಶಿಯರಿಗೆ ಅಶುಭವಾದ ಸಂಖ್ಯೆ 13, ಹಿಂದೂ ಜ್ಯೋತಿಷಿಗಳು ಹೇಳುವ ಹಾಗೆ ರಾಹು ಕಾಟದ ಪ್ರಭಾವೇ. ಒಂದು ಸ್ಪಷ್ಟತೆ ಇಲ್ಲ. ಅಂಕಿಗಳ ಬೇಲಿ ದಾಟಿ ಪ್ರಾಣಗಳ ಬಲಿ ತೆಗೆದುಕೊಳ್ಳುವ ಈ ಅಮಾನವೀಯ ಕೃತ್ಯಗಳ ದಿನಾಂಕದೊಡನೆ ಹೋಲಿಸಿ ನೋಡಬಹುದು

ಸಂಖ್ಯೆ 13, 7 ದುರದುಷ್ಟಕರ ಎಂದು ನಂಬಲಾಗಿದೆ. ಕೈಸ್ತರಲ್ಲಿ 666 ಕೂಡಾ ಅಶುಭ, ಇದು ಪೈಶಾಚಿಕ ಕೃತ್ಯಕ್ಕೆ ಹೇಳಿ ಮಾಡಿಸಿದ ಸಂಖ್ಯೆಯಂತೆ. ಮುಸ್ಲಿಮರಿಗೆ 786 ದೈವತ್ವದ ಸಂಖ್ಯೆ. ಹೀಗೆ ಸಂಖ್ಯಾಶಾಸ್ತ್ರದ ಪ್ರಕಾರ ಸೂರ್ಯ =1; ಚಂದ್ರ=2;ಗುರು=3;ರಾಹು=4;ಬುಧ=5;ಶುಕ್ರ=6;ಕೇತು=7;ಶನಿ=8;ಮಂಗಳ=9

ಉಗ್ರರಿಗೆ 13 ಹಾಗೂ 26 ಅಚ್ಚುಮೆಚ್ಚಿನ ದಿನಾಂಕ. ರಾಹು ಹಾಗೂ ಶನಿ ಕೃಪೆ ಪಡೆದ ಉಗ್ರರು ಭಾರತದಲ್ಲಿ ಅಟ್ಟಹಾಸ ಮೆರೆದಿದ್ದು ಈ ಎರಡು ದಿನಾಂಕಗಳಲ್ಲಿ ಎಂಬುದು ಗಮನಾರ್ಹ.

1+3=4 ಸಂಖ್ಯೆಯ ಅಧಿಪತಿ ರಾಹು, ಕ್ರೂರತೆಯ ಸಂಕೇತ. 2+6=ಸಂಖ್ಯೆಯ ಅಧಿಪತಿ ಶನಿ, ಅಂಧಕಾರ ಲೋಕಕ್ಕೆ ರಾಜ. ಮಂಗಳವಾರ ಹಾಗೂ ಶನಿವಾರ ಪಾತಕಿಗಳ ಅಚ್ಚುಮೆಚ್ಚಿನ ದಿನ. ಆದರೆ, 26/11 ಮುಂಬೈ ದಾಳಿಗೆ ವಿಶೇಷವಾಗಿ ಮಂಗಳವಾರ ಹಾಗೂ ಶನಿವಾರ ಬದಲು ಬುಧವಾರ ಆರಿಸಿದ್ದೇವೆ ಎಂದು ಉಗ್ರರು ಹೇಳಿಕೆ ನೀಡಿದ್ದರು. ನಿನ್ನೆ ಸಂಭವಿಸಿದ ಸರಣಿ ಸ್ಫೋಟ ನೋಡಿದ ಮೇಲೆ ಬಹುಶಃ ಬುಧವಾರ ಕೂಡಾ ಉಗ್ರರ ನೆಚ್ಚಿನ ದಿನ ಆಗುವ ಸಾಧ್ಯತೆಗಳು ಗೋಚರಿಸುತ್ತಿದೆ.

* 13 ಡಿಸೆಂಬರ್ 2001: ಮಂಗಳವಾರ; ಭಾರತೀಯ ಸಂಸತ್ತಿನ ಮೇಲೆ ದಾಳಿ(12 ಜನ ಸಾವು)

* 13 ಮೇ 2008: ಮಂಗಳವಾರ; ಜೈಪುರ ಬಾಂಬ್ ಸ್ಫೋಟ(68 ಜನ ಸಾವು)

* 26 ಜುಲೈ 2008: ಶನಿವಾರ; ಅಹಮದಾಬಾದ್ ಸ್ಫೋಟ(57 ಜನ ಸಾವು)

* 13 ಸೆಪ್ಟೆಂಬರ್ 2008: ಶನಿವಾರ; ದೆಹಲಿ ಸ್ಫೋಟ(13 ಜನ ಸಾವು)

* 26 ನವೆಂಬರ್ 2008: ಬುಧವಾರ; ಮುಂಬೈ ಸರಣಿ ಸ್ಫೋಟ(166 ಜನ ಸಾವು)

* 13 ಫೆಬ್ರವರಿ 2008:ಶನಿವಾರ; ಪುಣೆ ಸ್ಫೋಟ(9 ಜನ ಸಾವು)

ಮೂರು ವರ್ಷದಲ್ಲಿ ಮೂರು ಬಾರಿ ಸ್ಫೋಟ ನಡೆದಿದೆ. ಜುಲೈ 13, 2011; ಪುಣೆ ಫೆ.13, 2010,ನವದೆಹಲಿ, ಸೆ.13, 2008,ಜೈಪುರ ಮೇ 13,2008 ಹಾಗೂ 1993ರಲ್ಲಿ ಸರಣಿ ಸ್ಫೋಟ ಸಂಭವಿಸಿದ್ದು 13 ಕಡೆ. 4,8,9 ಸಂಖ್ಯೆ ಒಟ್ಟಿಗೆ ಸೇರಿದರೆ ಅನಾಹುತ ಗ್ಯಾರಂಟಿ.

ಗ್ಯಾಲರಿ : ಮುಂಬೈ ಸರಣಿ ಸ್ಫೋಟ 2011| ವಿಡಿಯೋಗಳು: ಉಗ್ರರ ಕೈವಾಡ| ಸಾವು ನೋವು | ಯಾರು ಹೊಣೆ|

13 ದಿನಾಂಕದಂದು ಭಾರತದಷ್ಟೇ ಅಲ್ಲ ವಿಶ್ವದ ಇತರೆಡೆ ಕೂಡಾ ಅನೇಕ ದುರಂತಗಳು ಸಂಭವಿಸಿದ ಉದಾಹರಣೆಗಳಿವೆ.

* ವಿಲ್ನಿಯಸ್, ಲಿಥ್ಯೂನಿಯಾ 1991: 13 ಜನ ಸಾವು, 140 ಜನ ಗಾಯಾಳು

* ಕೋಲ್ಕತ್ತಾ 1964: ಹಿಂದೂ ಮುಸ್ಲಿಂ ಘರ್ಷಣೆ ಸಾವಿರಕ್ಕೂ ಅಧಿಕ ಜನ ಸಾವು

* ಸಾಲ್ವಡರ್ 2001: 1000 ಜನ ಸಾವು, ಪ್ರಬಲ ಭೂಕಂಪ

* ಬಾಗ್ದಾದ್ 1991: ಅಮೆರಿಕ ಪಡೆ ದಾಳಿ, ನೂರಾರು ಜನ ಬಲಿ

* ಸ್ಕಾಟ್ಲೆಂಡ್ 1996: 16 ಶಾಲಾ ಮಕ್ಕಳ ಬಲಿ ತೆಗೆದುಕೊಂಡ ಗನ್ ಮ್ಯಾನ್

* ಪ್ಯಾಲೆಸ್ಟೇನ್ 1975: ಕ್ರೈಸ್ತ ಉಗ್ರವಾದಿಗಳು ಪ್ಯಾಲೆಸ್ಟೇನ್ ಗೆರಿಲ್ಲಾ ದಾಳಿ 17 ಜನ ಸಾವು

* 1981 ರೋಮ್: ಸಾರ್ವಜನಿಕ ಸ್ಥಳದಲ್ಲೇ ಪೋಪ್ ಹತ್ಯೆ

* 1992 ಇಂಗ್ಲೆಂಡ್: 31 ಸಾವಿರ ಗಣಿ ನೌಕರರು ಕೆಲಸದಿಂದ ವಜಾ

* 1985 ಕೊಲಂಬಿಯಾ: ಅಗ್ನಿಪರ್ವತ ಸ್ಫೋಟ, 20 ಸಾವಿರಕ್ಕೂ ಅಧಿಕ ಜನ ಸಾವು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The number 13 is associated with bad luck in some countries, and even has a specifically recognized phobia. With all these '13th' dated Bomb blasts one finds a shiver in spine and many may call it just a coincidence.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more