ಗ್ಯಾಂಗ್ ಸ್ಟರ್ ಅಬು ಸಲೇಂ ಮದುವೆಗೆ ಯುವತಿಯಿಂದ ಅರ್ಜಿ

ಮುಂಬೈ, ಜೂ.29: ಎಂಥೆಂಥ ಜನ ಇರುತ್ತಾರೆ ನೋಡಿ, ಜೈಲಿನಲ್ಲಿರುವ ಭೂಗತ ಪಾತಕಿ ಅಬು ಸಲೇಂನನ್ನು ನಾನು ಮದುವೆಯಾಗಲು ಅವಕಾಶ ಕೊಡಿ ಎಂದು ಟಾಡಾ ಕೋರ್ಟಿಗೆ ಮುಂಬೈ ಮೂಲದ ಯುವತಿಯೊಬ್ಬಳು ಆರು ಪುಟಗಳ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಅಬು ಜೊತೆ ನನ್ನ 'ನಿಖಾ' ಆಗಿದೆ ಎಂದು ಕೂಡಾ ಅರ್ಜಿಯಲ್ಲಿ ಯುವತಿ ಹೇಳಿಕೊಂಡಿದ್ದಾಳೆ.

ಒಂದು ವೇಳೆ ಅಬು ಸಲೇಂನನ್ನು ಮದುವೆಯಾಗಲು ಅನುಮತಿ ನಿರಾಕರಿಸಿದರೆ ನಾನು ಕೋರ್ಟಿನ ಮುಂದೆ ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು 26 ವರ್ಷ ವಯಸ್ಸಿನ ಸಯ್ಯೀದ್ ಬಹಾರ್‌ ಕೌಸರ್ ಎಂಬ ಯುವತಿ ಬೆದರಿಕೆ ಹಾಕಿದ್ದಾಳೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿರುವ ಮುಂಬೈ ಮೂಲದ ಕೌಸರ್ ಅವರು ಅರ್ಜಿಯಲ್ಲಿ ತನ್ನ ಕಥೆ ಬರೆದುಕೊಂಡಿದ್ದಾಳೆ. ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದಾಗಲೇ ಅಬು ಸಲೇಂ ಜೊತೆ ನನ್ನ 'ನಿಖಾ' ಆಗಿಬಿಟ್ಟಿದೆ. [ಅಬು ಸಲೇಂಗೆ ಜೀವಾವಧಿ ಶಿಕ್ಷೆ ಪ್ರಕಟ]

Abu Salem

ನನ್ನ ಕುಟುಂಬಸ್ಥರು, ಬಂಧು ಮಿತ್ರರು ನನಗೆ ನೆರವಾಗುತ್ತಿಲ್ಲ. ಈಗ ಸಲೇಂನನ್ನು ವಿವಾಹ ನೋಂದಣಿ ಕಚೇರಿಗೆ ಕರೆಸಿಕೊಂಡು ವಿಶೇಷ ಮದುವೆ ಕಾಯ್ದೆ ಅಡಿಯಲ್ಲಿ ಅಧಿಕೃತವಾಗಿ ನಿಖಾ ಮಾಡಿಸಿಕೊಳ್ಳಬೇಕೆಂದಿದ್ದೇನೆ ಇದಕ್ಕೆ ಅನುಮತಿ ನೀಡಬೇಕು ಎಂದು ಟಾಡಾ ಕೋರ್ಟಿಗೆ ಮನವಿ ಸಲ್ಲಿಸಿದ್ದಾಳೆ.

ಅದರೆ, ಈ ಹಿಂದೆ ಇದೇ ಸುದ್ದಿ ಅಬುಸಲೇಂ ಕಿವಿಗೂ ಬಿದ್ದಿತ್ತು. ಯುವತಿಯೊಬ್ಬಳು ರೈಲಿನಲ್ಲಿ ಪ್ರಯಾಣಿಸುವಾಗಲೇ 'ಕಬೂಲ್ ಹೇ ಎಂದು ಹೇಳುವ ಮೂಲಕ ವಿವಾಹ ಬಂಧನಕ್ಕೆ ಒಳಪಟ್ಟಿದ್ದಾಳೆ ಎಂಬ ಸುದ್ದಿಯನ್ನು ಸಲೇಂ ಹಾಗೂ ಆತನ ವಕೀಲರು ಅಲ್ಲಗೆಳೆದಿದ್ದರು.

1991ರಲ್ಲಿ ಸುಮೈರಾ ಜುಮಾನಿ ವರಿಸಿದ್ದ ಸಲೇಂಗೆ ಒಬ್ಬ ಮಗನಿದ್ದಾನೆ. ಎರಡನೇ ಮದುವೆ ಜನಪ್ರಿಯ ನಟಿಯೊಂದಿಗೆ ಆಗಿತ್ತು ಎನ್ನಲಾಗಿದೆ. ಅದರೆ, ಇದನ್ನು ಅಲ್ಲಗೆಳೆದ ನಟಿ ಸದ್ಯಕ್ಕೆ ಸಿನಿಮಾ ರಂಗದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ.ಸದ್ಯ ಅಬುಸಲೇಮ್ ಇಲ್ಲಿನ ತಲೋಜಾ ಕಾರಾಗೃಹದಲ್ಲಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+