ಮುಂಬೈ ಪಾಲಿಕೆ ಚುನಾವಣೆ; ಆಶ್ಚರ್ಯಕಾರಿ ಸುದ್ದಿ ನೀಡಿದ ಅಜಿತ್ ಪವಾರ್
ಬೆಂಗಳೂರು, ಮಾರ್ಚ್ 2: ಈ ವರ್ಷದ ಆರಂಭದಲ್ಲಿ ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಗದ್ದುಗೆ ಹಿಡಿದ ಮಹಾ ವಿಕಾಸ್ ಅಗಾಡಿ (ಶೀವಸೇನಾ, ಕಾಂಗ್ರೆಸ್ ಹಾಗೂ ಎನ್‌ಸಿಪಿ) ಈಗ ಮತ್ತೊಂದು ಸುತ್ತಿನ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದೆ.
ಮುಂಬರಲಿರುವ ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಮಹಾ ವಿಕಾಸ್ ಅಗಾಡಿ ಮೈತ್ರಿಕೂಟ ಒಟ್ಟಾಗಿ ಸ್ಪರ್ಧಿಸಲಿದೆ ಎಂದು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ತಿಳಿಸಿದ್ದಾರೆ.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು 2022 ರಲ್ಲಿ ನಡೆಯುವ ಬಿಎಂಸಿ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇವೆ. ಈ ಕುರಿತು ನಮ್ಮ ಕಾರ್ಯಕರ್ತರಿಗೆ ಯಾವುದೇ ಅನುಮಾನ ಗೊಂದಲಗಳು ಬೇಡ. ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಬಿಎಂಸಿ ಅಧಿಕಾರ ನಾವೇ ಹಿಡಿಯಲಿದ್ದೇವೆ. ಬಿಜೆಪಿಯನ್ನೂ ಅಲ್ಲಿಂದಲೂ ಹೊರ ಕಳಿಸಲಾಗುವುದು ಎಂದಿದ್ದಾರೆ.













Click it and Unblock the Notifications