ವೈರಲ್ ವಿಡಿಯೋ: ರೈಲ್ವೇ ನಿಲ್ದಾಣದಲ್ಲಿ ನಡೆಯಿತೊಂದು ಪವಾಡ!
Recommended Video

ಒಂದು ಕ್ಷಣ ಎದೆಯನ್ನು ಝಲ್ಲೆನ್ನಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ರೈಲನ್ನು ಹತ್ತುವುದಕ್ಕೆಂದು ಪರದಾಡಿ, ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾಗ ರೈಲ್ವೆ ಸಿಬ್ಬಂದಿ ಆತನನ್ನು ಪವಾಡವೆಂಬಂತೆ ರಕ್ಷಿಸಿದ ವಿಡಿಯೋ ಇದು!
ಈ ಘಟನೆ ನಡೆದಿದ್ದು ಮುಂಬೈಯ ಪಾನ್ವೆಲ್ ರೈಲ್ವೆ ನಿಲ್ದಾಣದಲ್ಲಿ. ಜು.14 ರಂದು ವ್ಯಕ್ತಿಯೊಬ್ಬ ರೈಲ್ವೇ ಸ್ಟೇಶನ್ನಿಗೆ ಬರುವ ಹೊತ್ತಿಗೆ ರೈಲು ಹೊರಟು ನಿಂತಿತ್ತು. ಮುಂದಿನ ರೈಲಿಗೆ ಕಾಯುತ್ತಿದ್ದರೆ ತಡವಾಗುತ್ತದೆಂದು ಆತ ಓಡುತ್ತಿರುವ ರೈಲಿಗೇ ಹತ್ತಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬೀಳುವುದರಲ್ಲಿದ್ದರು. ತಕ್ಷಣವೇ ಪ್ರಯಾಣಿಕರೊಬ್ಬರು ಮತ್ತು ರೈಲ್ವೇ ಸಿಬ್ಬಂದಿ ಬಂದು ಅವರನ್ನು ಎಳೆದು ರಕ್ಷಿಸದಿದ್ದರೆ ಅವರು ಹಳಿಯೊಳಗೆ ಬಿದ್ದು ಮೃತರಾಗುತ್ತಿದ್ದರು!
#WATCH: Railway Police personnel & passengers save a man's life while he was trying to board a train at Mumbai's Panvel railway station. (CCTV footage) (14.07.18) pic.twitter.com/13DNtlJfaK
— ANI (@ANI) July 16, 2018
ಓಡುತ್ತಿರುವ ರೈಲು, ಬಸ್ಸುಗಳಿಗೆ ಹತ್ತುವುದು ಎಷ್ಟು ಅಪಾಯಕಾರಿ ಎಂಬುದು ಗೊತ್ತಿದ್ದರೂ ಜನರು ದಿವ್ಯನಿರ್ಲಕ್ಷ್ಯ ತಳೆದು ಮತ್ತದೇ ಕೆಲಸ ಮಾಡುತ್ತಿದ್ದಾರೆ. ಆದರೆ ಅದರಿಂದ ಪ್ರಾಣವನ್ನೇ ತೆರಬೇಕಾದೀತು ಎಂಬುದು ಎಷ್ಟೋ ಜನರಿಗೆ ಅರಿವಿಲ್ಲ.

ಓಡುತ್ತಿರುವ ರೈಲಿಗೆ ಹತ್ತುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ. ಎಲ್ಲಾ ಸಂದರ್ಭದಲ್ಲೂ ರಕ್ಷಣೆಗೆ ಪ್ರಯಾಣಿಕರೋ, ರೈಲ್ವೇ ಸಿಬ್ಬಂದಿಗಳೋ ಇರುವುದಕ್ಕೆ ಆಗದಿರಬಹುದು! ಒಂದು ಗಂಟೆ ತಡವಾದರೆ ಆದೀತು, ಜೀವಕ್ಕಿಂತ ಸಮಯ ಹೆಚ್ಚಲ್ಲವಲ್ಲ!












Click it and Unblock the Notifications