ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಮುಂಡೆ ವಿಧಿವಶ: ಬುಧವಾರ ಅಂತಿಮ ಸಂಸ್ಕಾರ

By Srinath
|
Google Oneindia Kannada News

ನವದೆಹಲಿ, ಜೂನ್ 3: ಇಂದು ಬೆಳಗ್ಗೆ ರಸ್ತೆ ಅಪಘಾತದಲ್ಲಿ ಅಕಾಲಿಕ ಸಾವನ್ನಪ್ಪಿದ ಕೇಂದ್ರ ಸಚಿವ ಗೋಪಿನಾಥ್ ಮುಂಡೆ (64) ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ದಿಲ್ಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿಡಲಾಗುವುದು ಎಂದು ಕೇಂದ್ರ ಸಚಿವರಾದ ಡಾ. ಹರ್ಷವರ್ಧನ್ ಮತ್ತು ನಿತಿನ್ ಗಡ್ಕರಿ ಅವರುಗಳು ತಿಳಿಸಿದ್ದಾರೆ.

ಗೋಪಿನಾಥ್ ಮುಂಡೆ ಅವರು ಬಿಜೆಪಿಯ ಹಿರಿಯ ನಾಯಕ ದಿವಂಗತ ಪ್ರಮೋದ್ ಮಹಾಜನ್ ಅವರ ಭಾವ ಆಗಿದ್ದರು. ಗೋಪಿನಾಥ್ ಮುಂಡೆ ಅವರು ಮೂವರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ. ಮಹಾರಾಷ್ಟ್ರ ಮರಾಠವಾಡಾದ ಪರಲಿಯಲ್ಲಿ ನಾಳೆ ಬುಧವಾರ ಗೋಪಿನಾಥ್ ಮುಂಡೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು.

ಸಚಿವ ಗೋಪಿನಾಥ್ ಅವರು ಇಂದು ಬೆಳಗ್ಗೆ 6.30ಕ್ಕೆ ದಿಲ್ಲಿಯಿಂದ ಮುಂಬೈಗೆ ವಿಮಾನದಲ್ಲಿ ತೆರಳಿ, ಮುಂಬೈನಲ್ಲಿ ವಿಜಯೋತ್ಸವ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿತ್ತು. (ಅಪಘಾತ: ಸಚಿವ ಮುಂಡೆ ಸಾವು, ವೈದ್ಯರು ಏನನ್ತಾರೆ?)

union-minister-gopinath-munde-diea-in-car-accident-brief-profile

ಬೀಡ್ ಕ್ಷೇತ್ರದಿಂದ 2014ರ ಲೋಕಸಭಾ ಚುನಾವಣೆಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಆಯ್ಕೆಯಾಗಿದ್ದ ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಗೋಪಿನಾಥ್ ಪಾಂಡುರಂಗ ಮುಂಡೆ (Gopinath Pandurang Munde) ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ನಿರ್ಮಲೀಕರಣ ಸಚಿವರಾಗಿ ನೇಮಕಗೊಂಡಿದ್ದರು. (ಮುಂಡೆ ಸಾವು: ಇದೇನಿದು ಶೋಭಾ ಡೆ ಸಂಸ್ಕಾರ!?)

1949ರ ಡಿಸೆಂಬರ್ 12ರಂದು ಜನಿಸಿದ್ದರು. ಮಹಾರಾಷ್ಟ್ರ ವಿಧಾನಸಭೆಗೆ 5 ಬಾರಿ (1980-1985 ಮತ್ತು 1990-2009 ಅವಧಿಯಲ್ಲಿ) ಶಾಸಕರಾಗಿದ್ದರು. 1995-1999 ಅವಧಿಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿಯೂ ಆಗಿದ್ದರು. 2009 ಮತ್ತು 2014ರಲ್ಲಿ ಲೋಕಸಭೆಗೆ ಆರಿಸಿಬಂದಿದ್ದರು.

ರಾಜನಾಥ್ ಸಿಂಗ್ ಟ್ವೀಟ್

English summary
Car accident Union Minister Gopinath Munde dead brief profile. Gopinath Pandurang Munde (12 December 1949-3 June 2014) was an Indian politician from Maharashtra. He was a senior leader of the Bharatiya Janata Party (BJP). He was a Member of Legislative Assembly (MLA) for five terms during 1980-1985 and 1990-2009.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X