ಮುಂಬೈಯ ದಂಪತಿಗಳನ್ನು ಬಲಿಪಡೆದ ನಿರುದ್ಯೋಗದ ಖಿನ್ನತೆ!
ಮುಂಬೈ, ಸೆಪ್ಟೆಂಬರ್ 23: ಉದ್ಯೋಗ ಕಳೆದುಕೊಂಡ ಖಿನ್ನತೆಯಿಂದಾಗಿ ದಂಪತಿ ನೇಣಿಗೆ ಶರಣಾದ ಘಟನೆ ನಿನ್ನೆ(ಸೆ. 22) ಮುಂಬೈಯ ಮಲಾಡ್ ಪ್ರದೇಶದಲ್ಲಿ ನಡೆದಿದೆ. ದಂಪತಿಗಳನ್ನು ಧನರಾಜ್ (24) ಮತ್ತು ಕಾಜಲ್(19) ಎಂದು ಗುರುತಿಸಲಾಗಿದ್ದು, ದಂಪತಿಗಳು ಕೆಲವೇ ತಿಂಗಳ ಹಿಂದೆಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಎಂಬುದು ತಿಳಿದುಬಂದಿದೆ.
ಕೆಲವು ತಿಂಗಳ ಹಿಂದೆ ಮದುವೆಯಾಗಿದ್ದ ಧನರಾಜ್ ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂದಿದ್ದ. ಅಂದಿನಿಂದ ಖಿನ್ನತೆಯಿಂದ ಬಳಲುತ್ತಿದ್ದ ಆತ ನಿರುದ್ಯೋಗದಿಂದ ಹೊರಬರಲು ಹರಸಾಹಸ ಪಟ್ಟಿದ್ದ. ಆದರೆ ಸಾಧ್ಯವಾಗದಿದ್ದಾಗ ದಂಪತಿ ನೇಣಿಗೆ ಶರಣಾಗಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಮೃತದೇಹದ ಬಳಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲದ ಕಾರಣ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications