ಮುಂಬೈ ಬಳಿ ಹಳಿ ತಪ್ಪಿದ ರೈಲು : 12 ಸಾವು

ಮುಂಬೈ, ಮೇ 4 : ಮುಂಬೈ ಹೊರವಲಯದಲ್ಲಿ ಭಾನುವಾರ ದಿವಾ-ಸಾವಂತ್ ವಾಡಿ ರೈಲು ಹಳಿತಪ್ಪಿದ್ದರಿಂದ 12 ಪ್ರಯಾಣಿಕರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ರೈಲಿನ ಇಂಜಿನ್ ಹಾಗೂ 4 ಬೋಗಿಗಳು ಹಳಿ ತಪ್ಪಿದ್ದರಿಂದ ಈ ದುರಂತ ಸಂಭವಿಸಿದೆ.

ಭಾನುವಾರ ಬೆಳಗ್ಗೆ ಮುಂಬೈ ಹೊರವಲಯದ ರೋಹಾ ಎಂಬ ಪ್ರದೇಶದಲ್ಲಿ ದಿವಾ-ಸಾವಂತ್‌ವಾಡಿ ಎಕ್ಸ್‌ಪ್ರೆಸ್‌ ರೈಲಿನ ಇಂಜಿನ್ ಮತ್ತು 4 ಬೋಗಿಗಳು ಹಳಿತಪ್ಪಿವೆ. ಈ ಅಪಘಾತದಿಂದ 12 ಪ್ರಯಾಣಿಕರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

railway

ಅಪಘಾತ ನಡೆದ ತಕ್ಷಣ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಅಪಘಾತದಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಯಿತು. ತುರ್ತು ರಕ್ಷಣಾ ಕಾರ್ಯ ಕೈಗೊಂಡ ಸಿಬ್ಬಂದಿ ಗಾಯಗೊಂಡವರನ್ನು ಉರುಳಿಬಿದ್ದ ಬೋಗಿಯಿಂದ ರಕ್ಷಿಸಿ, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿದರು. [ಚೆನ್ನೈ ಸ್ಫೋಟದ ಬಗ್ಗೆ ಪ್ರಯಾಣಿಕ ಹೇಳಿದ್ದೇನು?]

railway

ಕೇಂದ್ರ ರೈಲ್ವೈ ಸಚಿವ ಮಲ್ಲಿಕಾರ್ಜುನ ಖರ್ಗೆ, ಅಪಘಾತದಲ್ಲಿ ಮೃತ ಪಟ್ಟ ಕುಟುಂಬದವರಿಗೆ ತಲಾ 2 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 50,000ರೂ, ಸಣ್ಣ ಪುಟ್ಟ ಗಾಯಗೊಂಡವರಿಗೆ 10,00ರೂ ಪರಿಹಾರ ಘೋಷಿಸಿದ್ದು, ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಆದೇಶಿಸಿದ್ದಾರೆ. [ಪಿಟಿಐ ಚಿತ್ರಗಳು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+