ಮುಂಬೈ: ಆಂಬುಲೆನ್ಸ್ ಗೆ ಬೆಂಕಿ ತಗುಲಿ ನವಜಾತ ಶಿಶು ಸಾವು

ಮುಂಬೈ, ಡಿ.11: ನವಜಾತ ಶಿಶುವನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ವಾಹನಕ್ಕೆ ಬೆಂಕಿ ತಗುಲಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಈ ದುರ್ಘಟನೆಯಲ್ಲಿ ನವಜಾತ ಶಿಶು ಬೆಂಕಿಗೆ ಆಹುತಿಯಾಗಿದೆ. ವಾಹನದಲ್ಲಿದ್ದ ಡಾಕ್ಟರ್ ಹಾಗೂ ನರ್ಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಂಬುಲೆನ್ಸ್ ವಾಹನದಲ್ಲಿದ್ದ ಸಿಎನ್ ಜಿ ಕಿಟ್ ಸ್ಫೋಟಗೊಂಡಿದ್ದ ಆಂಬುಲೆನ್ಸ್ ಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಥಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ಡಾಕ್ಟರ್ ಹಾಗೂ ನರ್ಸ್ ಗೂ ಬೆಂಕಿಯ ಬಿಸಿ ತಟ್ಟಿದ್ದು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕ ಮುಖ್ಯಸ್ಥ ಸಂತೋಷ್ ಕದಂ ಹೇಳಿದ್ದಾರೆ.

New-born charred to death in ambulance fire

ಗುರುವಾರ ಜನಿಸಿದ್ದ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಭಿವಂಡಿಯಿಂದ ಥಾಣೆ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಆಮ್ಲಜನಕದ ಸಿಲಿಂಡರ್ ನಲ್ಲಿ ಕಿಡಿ ಹೊತ್ತುಕೊಂಡ ತಕ್ಷಣ ವಾಹನದಿಂದ ಕೆಳಗಿಳಿದು ಏನಾಯ್ತು ಎಂದು ನೋಡತೊಡಗಿದ್ದಾರೆ.

ಆದರೆ, ಆಮ್ಲಜನಕದ ಸಿಲಿಂಡರ್ ಹತ್ತಿರವಿದ್ದ ಸಿಎನ್ ಜಿ ಸಿಲಿಂಡರ್ ಗೆ ಬೇಗನೇ ಬೆಂಕಿ ಹತ್ತಿಕೊಂಡಿದೆ. ಮಗುವನ್ನು ವಾಹನದಲ್ಲಿರಿಸಿ ಹೊರಗಡೆ ನಿಂತಿದ್ದ ಪೋಷಕರು ಬೆಂಕಿಯ ಕೆನ್ನಾಲಗೆಯಲ್ಲಿ ಬೇಯುತ್ತಿರುವ ದೃಶ್ಯಕಂಡು ಚೀರಿದ್ದಾರೆ. ಘಟನೆ ನಡೆದ ಕೆಲ ಕ್ಷಣದಲ್ಲೇ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನರಾದರೂ ಪ್ರಯೋಜನವಾಗಲಿಲ್ಲ. ಬೆಂಕಿಗೆ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದೇ ರೀತಿ ಸಮೀಪದಲ್ಲಿದ್ದ ಇನ್ನೊಂದು ಆಂಬುಲೆನ್ಸ್ ವಾಹನ ಕೂಡಾ ಬೆಂಕಿಗೆ ಆಹುತಿಯಾದ ಘಟನೆ ದಾಖಲಾಗಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+