Get Updates
Get notified of breaking news, exclusive insights, and must-see stories!

ತೆಲಂಗಾಣ ಸಿಎಂ ಜೊತೆ ಮಹಾ ಸಿಎಂ ಉದ್ಧವ್ ಠಾಕ್ರೆ ಭೇಟಿ, ಏನೇನು ಮಾತುಕತೆ?

ಮುಂಬೈ, ಫೆಬ್ರವರಿ 20: ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರುತ್ತಾ ಬಹಿರಂಗವಾಗಿ ಟೀಕಿಸುತ್ತಿರುವ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಇಂದು ಶಿವಸೇನಾ ಮುಖಂಡ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನೆಗೆ ಭೇಟಿ ನೀಡಿದ್ದರು.

''ಕೇಂದ್ರೀಯ ಸಂಸ್ಥೆಗಳನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದ್ದು, ಇದನ್ನು ಖಂಡಿಸುತ್ತೇವೆ. ಕೇಂದ್ರ ಸರ್ಕಾರ ತನ್ನ ನೀತಿಯನ್ನು ಬದಲಾಯಿಸಬೇಕು, ಇಲ್ಲದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ. ದೇಶವು ಇಂತಹ ಹಲವು ವಿಷಯಗಳನ್ನು ನೋಡಿದೆ,'' ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್, ಮುಂಬೈನಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾದ ನಂತರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರುದ್ಧ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನಗಳ ಭಾಗವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭಾನುವಾರದಂದು ಮಾಡಿದರು. ನಮ್ಮ ಸಭೆಯ ಉತ್ತಮ ಫಲಿತಾಂಶವನ್ನು ನೀವು ಶೀಘ್ರದಲ್ಲೇ ನೋಡುತ್ತೀರಿ. ನಾನು ಉದ್ಧವ್ ಜಿ ಅವರನ್ನು ತೆಲಂಗಾಣಕ್ಕೆ ಬರಲು ಆಹ್ವಾನಿಸುತ್ತೇನೆ: ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ಹೇಳಿದರು.

Telangana CM KCR- Uddhav Thackeray Meeting Updates Watch Video

ನಾವು ಅಭಿವೃದ್ಧಿಯ ಸಮಸ್ಯೆಗಳನ್ನು ಸುಧಾರಿಸುವ ಮತ್ತು ಯೋಜನೆಗಳನ್ನು ತ್ವರಿತಗೊಳಿಸುವ ಮತ್ತು ದೇಶದಲ್ಲಿ ರಚನಾತ್ಮಕ ಮತ್ತು ನೀತಿ ಬದಲಾವಣೆಗಳನ್ನು ತರುವ ಬಗ್ಗೆ ವಿಸ್ತೃತ ಚರ್ಚೆಯನ್ನು ಮಾಡಿದ್ದೇವೆ. ನಾವು ಎಲ್ಲಾ ವಿಷಯಗಳ ಬಗ್ಗೆ ಒಪ್ಪಿಕೊಂಡಿದ್ದೇವೆ: ಮುಂಬೈನಲ್ಲಿ ಮಹಾ ಸಿಎಂ ಉದ್ಧವ್ ಠಾಕ್ರೆ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ತೆಲಂಗಾಣ ಸಿಎಂ ಕೆಸಿಆರ್ ಹೇಳಿದರು.

ನಮ್ಮ ಹಿಂದುತ್ವ ತಪ್ಪು ರಾಜಕೀಯವನ್ನು ಕಲಿಸುವುದಿಲ್ಲ; ದೇಶವು ನರಕಕ್ಕೆ ಹೋದರೂ ಕೆಲವರು ತಮ್ಮ ಅಜೆಂಡಾಗಳಿಗಾಗಿ ಮಾತ್ರ ಕೆಲಸ ಮಾಡುತ್ತಾರೆ. ನಾವು ನಮ್ಮ ದೇಶವನ್ನು ಸರಿಯಾದ ದಾರಿಯಲ್ಲಿ ತರಬೇಕಾಗಿದೆ; ಪ್ರಧಾನಿ ಯಾರು ಎಂಬುದನ್ನು ನಂತರ ಚರ್ಚಿಸಬಹುದು. ಇಂದಿನಿಂದ ಹಲವು ರಾಜಕೀಯ ನಾಯಕರನ್ನು ಭೇಟಿ ಮಾಡುತ್ತೇವೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದರು.

ಎನ್‌ಸಿಪಿ ಮುಖ್ಯಸ್ಥರ ಜೊತೆ ಕೆಸಿಆರ್ ಮಾತುಕತೆ:
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಇತರ ನಾಯಕರನ್ನು ಸಿಎಂ ನಿವಾಸದಲ್ಲಿ ಭೇಟಿಯಾದ ನಂತರ, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ಮಹಾರಾಷ್ಟ್ರದ ಮುಂಬೈನಲ್ಲಿರುವ ಸಿಲ್ವರ್ ಓಕ್ಸ್ ನಿವಾಸದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾದರು.

Telangana CM KCR- Uddhav Thackeray Meeting Updates Watch Video

ಠಾಕ್ರೆ ಮನೆಯಲ್ಲಿ ಈ ಇಬ್ಬರು ಸಿಎಂಗಳ ಭೇಟಿ ಸಂದರ್ಭದಲ್ಲಿ ಉದ್ಧವ್ ಅವರ ಪುತ್ರ ತೇಜಸ್ ಠಾಕ್ರೆ, ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ, ನಗರಾಭಿವೃದ್ಧಿ ಮತ್ತು ಲೋಕೋಪಯೋಗಿ ಸಚಿವ ಏಕನಾಥ್ ಶಿಂಧೆ, ಸಂಸದ ಸಂಜಯ್ ರಾವುತ್, ಸಂಸದ ಅರವಿಂದ್ ಸಾವಂತ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಶಿಶ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು. ಕೆಸಿಆರ್ ಜೊತೆ ನಟ ರಾಜಕಾರಣಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದು ವಿಶೇಷ. ಸಿಎಂ ಠಾಕ್ರೆ ಅವರ ಆಹ್ವಾನದ ನಂತರ, ರಾವ್ ಅವರು ಮಹಾರಾಷ್ಟ್ರ ಸಿಎಂ ಅವರ ಅಧಿಕೃತ ನಿವಾಸ 'ವರ್ಷ'ಕ್ಕೆ ಆಗಮಿಸಿದರು.

Recommended Video

      ಕೊಟ್ಟ ಅವಕಾಶದಲ್ಲೆ ಹೆಸರು ಮಾಡಿದ ಸೂರ್ಯ | Oneindia Kannada

      ಶಿವಸೇನೆಯ ಅಧ್ಯಕ್ಷರೂ ಆಗಿರುವ ಠಾಕ್ರೆ ಇತ್ತೀಚೆಗೆ ರಾವ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಮುಂಬೈಗೆ ಆಹ್ವಾನಿಸಿದ್ದರು. ಈ ಸಭೆಯು ಬಿಜೆಪಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ರಾಜಕೀಯ ಏಕತೆಯ ಪ್ರಕ್ರಿಯೆಯನ್ನು ಚುರುಕುಗೊಳಿಸಲಿದೆ ಎಂದು ಶಿವಸೇನೆಯ ಮುಖವಾಣಿ 'ಸಾಮ್ನಾ' ಭಾನುವಾರ ಹೇಳಿದೆ.ಬಿಜೆಪಿಯ ಆಪಾದಿತ ಜನವಿರೋಧಿ ನೀತಿಗಳ ವಿರುದ್ಧ ಮತ್ತು ಒಕ್ಕೂಟದ ಮನೋಭಾವವನ್ನು ಎತ್ತಿಹಿಡಿಯಲು ರಾವ್ ಅವರ ಹೋರಾಟಕ್ಕೆ ಠಾಕ್ರೆ ಈ ಹಿಂದೆ "ಸಂಪೂರ್ಣ ಬೆಂಬಲ" ಘೋಷಿಸಿದ್ದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+