ರಾಹುಲ್ ರನ್ನು ಪ್ರಧಾನಿಯಾಗಿ ನೋಡುವಾಸೆ : ಸುಧೀಂದ್ರ ಕುಲಕರ್ಣಿ
Recommended Video

ಮುಂಬೈ, ಜೂನ್ 18: ಭಾರತಕ್ಕೆ ಅಗತ್ಯವಿರುವುದು ಕಾಶ್ಮೀರದಂಥ 'ಮಹಾನ್ ಸಮಸ್ಯೆ'ಗಳನ್ನು ಬಗೆಹರಿಸಬಲ್ಲ ನಾಯಕರು. ಅದಕ್ಕೆಂದೇ ನಾನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಈ ದೇಶದ ಪ್ರಧಾನಿಯನ್ನಾಗಿ ನೋಡಲು ಬಯಸುತ್ತೇನೆ ಎಂದು ಬಿಜೆಪಿ ಮಾಜಿ ನಾಯಕ, ಅಂಕಣಕಾರ ಸುಧೀಂದ್ರ ಕುಲಕರ್ಣಿ ಹೇಳಿದ್ದಾರೆ.
ಬಿಜೆಪಿ ನಾಯಕ ಎಲ್ ಕೆ ಆಡ್ವಾಣಿ ಅವರ ಒಂದು ಕಾಲದ ಆಪ್ತರಾಗಿದ್ದ ಸುಧೀಂದ್ರ ಕುಲಕರ್ಣಿ , ಮುಂಬೈಯಲ್ಲಿ ಪ್ಯಾನಲ್ ಚರ್ಚೆಯೊಂದರಲ್ಲಿ ಮಾತನಾಡುತ್ತಿದ್ದ ಸಮಯದಲ್ಲಿ ಈ ರೀತಿ ಅಭಿಪ್ರಾಯಪಟ್ಟರು. ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನ ಮತ್ತು ಚೀನಾ ವಿಷಯಗಳನ್ನು ಬಗೆಹರಿಸುವಲ್ಲಿ ಸಫಲರಾಗಿಲ್ಲ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಒಬ್ಬ 'ಉತ್ತಮ ವ್ಯಕ್ತಿ. ಭಾರತ ಸುದೀರ್ಘ ಸಮಯದಿಂದ ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ರಾಹುಲ್ ಗಾಂಧಿ ಅವರಿಗೆ ಮಾತ್ರ ಸಾಧ್ಯ' ಎಂದು ಅವರು ಹೇಳಿದರು.

'ರಾಹುಲ್ ಗಾಂಧಿ ಯುವ ಮತ್ತು ಆದರ್ಶ ವ್ಯಕ್ತಿ. ಅವರು ಪ್ರೀತಿ ಮತ್ತು ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟವರು. ಅವರನ್ನು ಈಗಿನ ಯಾವ ರಾಜಕಾರಣಿಗಳೂ ಪ್ರೀತಿ, ಅಕ್ಕರೆ, ಸಹಬಾಳ್ವೆಯ ಮಾತನ್ನಾಡುವುದನ್ನು ನಾನು ನೋಡಿಲ್ಲ' ಎಂದು ರಾಹುಲ್ ಗಾಂಧಿ ಅವರ ಮೇಲೆ ಹೊಗಳಿಕೆಯ ಸುರಿಮಳೆ ಸುರಿಸಿದರು.
'ರಾಜೀವ್ ಗಾಂಧಿ ವಿರೋಧಪಕ್ಷದಲ್ಲಿದ್ದಾಗ ಅಫ್ಘಾನಿಸ್ತಾನಕ್ಕೆ ತೆರಳಿದಂತೆ, ರಾಹುಲ್ ಗಾಮಧಿಯವರು ಸಹ ಈಗ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಗಳಿಗೆ ತೆರಳಿ ಅಲ್ಲಿನ ಮುಖಂಡರೊಂದಿಗೆ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಯೋಚನೆಗಳೇನು ಎಂಬ ಬಗ್ಗೆ ಚರ್ಚೆ ನಡೆಸಬೇಕು. ಮೋದಿಜೀಯವರಿಗೂ ಈ ಸಮಸ್ಯೆಗಳನ್ನು ಪರಿಹರಿಸಲಾಗಿಲ್ಲ. ಆದ್ದರಿಂದ ರಾಹುಲ್ ಗಾಂಧಿಯವರು ಆ ನಿಟ್ಟಿನಲ್ಲಿ ಚಿಂತಿಸಬೇಕು' ಎಂದು ಅವರು ಸಲಹೆ ನೀಡಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ಅವರಾದ ಕನ್ನಡಿಗ ಸುಧೀಂದ್ರ ಕುಲಕರ್ಣಿ ಉತ್ತಮ ಅಂಕಣಕಾರರಾಗಿಯೂ ಪ್ರಸಿದ್ಧರಾಗಿದ್ದಾರೆ.












Click it and Unblock the Notifications