ಸಹನಟಿಯನ್ನು ರೇಪ್ ಮಾಡಿ ಪರಾರಿಯಾದ ಟಿವಿ ನಟ
ಮುಂಬೈ, ನ.25: ಸಹನಟಿಯನ್ನು ಅತ್ಯಾಚಾರ ಮಾಡಿ ಕಿರುತೆರೆ ನಟನೊಬ್ಬ ಪರಾರಿಯಾಗಿರುವ ಘಟನೆ ನಡೆದಿದೆ. ಎಂಟಿವಿಯ ಜನಪ್ರಿಯ ರಿಯಾಲಿಟಿ ಶೋ splitsvilla 8ನೇ ಆವೃತ್ತಿಯಲ್ಲಿದ್ದ ನಟ ಯಶ್ ಪಂಡಿತ್ ಅವರು ಲವ್ ಸೆಕ್ಸ್ ದೋಖಾ ಪ್ರಕರಣದಲ್ಲಿ ಸಿಕ್ಕಿದ್ದಾರೆ.
ಸ್ಪ್ಲಿಟ್ಸ್ ವಿಲ್ಲಾ 8ನೇ ಸೀಸನ್ ನ ಸ್ಪರ್ಧಿಯಾಗಿದ್ದ ಯಶ್ ಪಂಡಿತ್ ಅವರು ಸಹನಟಿಯೊಬ್ಬರ ಮೇಲೆ ಮೋಹಗೊಂಡಿದ್ದಾನೆ. ಆಕೆಯೊಡನೆ ಸ್ನೇಹ ಬೆಳೆಸಿಕೊಂಡು ಮಂಚಕ್ಕೆ ಎಳೆದಿದ್ದಾನೆ. ಬಲವಂತವಾಗಿ ಹಲವು ಬಾರಿ ಬಲಾತ್ಕಾರ ಮಾಡಿದ್ದಾನೆ. ಪ್ರೇಮಿಸುವಾಗ ನೀಡಿದ್ದ ಭರವಸೆಯಂತೆ ಮದುವೆಯಾಗು ಎಂದರೆ ಪರಾರಿಯಾಗಿದ್ದಾನೆ. ನಾಪತ್ತೆಯಾದ ನಟನ ಸುಳಿವು ಪತ್ತೆ ಹಚ್ಚಲು ಮುಂಬೈ ಪೊಲೀಸರು ಮುರ್ನಾಲ್ಕು ತಂಡವನ್ನು ರಚಿಸಿದ್ದಾರೆ.

ಸೆಪ್ಟೆಂಬರ್ 2015ರಲ್ಲಿ ಆಕೆಯನ್ನು ಭೇಟಿ ಮಾಡಿ ಗೆಳೆತನ ಬೆಳೆಸಿಕೊಂಡ ಯಶ್ ನಂತರ ತನ್ನ ಜುಹು ಅಪಾರ್ಟ್ಮೆಂಟ್ ಗೆ ಆಕೆಯನ್ನು ಕರೆದಿದ್ದಾನೆ. ಆಕೆ ಬರಲು ಒಪ್ಪದಿದ್ದಾಗ, ನನ್ನ ಪೋಷಕರೊಡನೆ ಮದುವೆ ವಿಷಯ ಮಾತನಾಡುವಿಯಂತೆ ಬಾ ಎಂದಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಹಲವು ಬಾರಿ ಅತ್ಯಾಚಾರ ಎಸಗಿರುವುದು ತಿಳಿದು ಬಂದಿದೆ.
ಈ ಘಟನೆ ಬಳಿಕ ಮದುವೆ ಬಗ್ಗೆ ಮಾತೆತ್ತಿದ್ದರೆ ದೂರ ಓಡುತ್ತಿದ್ದ ಯಶ್ ಈಗ ತಲೆಮರೆಸಿಕೊಂಡಿದ್ದಾನೆ. ಯಶ್ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
'ಕ್ಯೂಂಕಿ ಸಾಸ್ ಭಿ ಕಭಿ ಬಹೂ ಥಿ' ಧಾರಾವಾಹಿಯಲ್ಲಿ ಲಕ್ಷ್ಯ ವಿರಾಣಿ ಪಾತ್ರದಲ್ಲಿ ಯಶ್ ಪಂಡಿತ್ ಮಿಂಚಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ ಇಂಡಿಯಾ ಸುದ್ದಿ)












Click it and Unblock the Notifications