#meatban ಬಗ್ಗೆ ಮಾತಾಡಿ ಬಣ್ಣಗೆಡಿಸಿಕೊಂಡ ಸೋನಾಕ್ಷಿ
ಮುಂಬೈ, ಸೆ. 09: ಜೈನ ಸಮುದಾಯದವರ ಪರ್ಯೂಷನ್ ಋತುವಿನ ಉಪವಾಸ ವ್ರತ ಆರಂಭವಾಗಿರುವುದರಿಂದ ನಾಲ್ಕು ದಿನಗಳ ಮಟ್ಟಿಗೆ ಮಾಂಸ ಮಾರಾಟವನ್ನು ನಿಷೇಧಿಸಿ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಆದೇಶ ಹೊರಡಿಸಿದೆ. ಈ ಬಗ್ಗೆ ಎಲ್ಲರೂ ಟ್ವೀಟ್ ಮಾಡುತ್ತಿದ್ದಾರೆ, ನಟಿ ಸೋನಾಕ್ಷಿ ಕೂಡಾ ಟ್ವೀಟ್ ಮಾಡಿ ನಗೆಪಾಟಲಿಗೀಡಾಗಿದ್ದಾರೆ.
ನಾಲ್ಕು ದಿನಗಳ ಮಟ್ಟಿಗೆ ಮಾಂಸ ಮಾರಾಟ ನಿಷೇಧ ಹೇರುವಂತೆ ಬಿಜೆಪಿ ಶಾಸಕರಲ್ಲಿ ಜೈನ ಸಮುದಾಯ ಮನವಿ ಮಾಡಿಕೊಂಡಿತ್ತು. ಬಿಎಂಸಿಯಲ್ಲಿ ಬಿಜೆಪಿ ಆಡಳಿತವಿರುವುದರಿಂದ ನಿರ್ಬಂಧ ಹೇರಿಕೆ ಸುಲಭವಾಗಿತ್ತು. ಸೆ.11 ರಿಂದ ಸೆ.18ರೊಳಗೆ ನಾಲ್ಕು ದಿನಗಳ ಮಟ್ಟಿಗೆ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.[ಮಾಂಸ ಮಾರಾಟ ನಿಷೇಧ: ಮುಂಬೈ ಈಗ 'ಬ್ಯಾನ್- ಇಸ್ತಾನ್']
ಈ ಹಿಂದೆ ಗೋಹತ್ಯೆ ನಿಷೇಧ ಜಾರಿ ಸುದ್ದಿ ಬಂದಾಗಲೂ ಇದೇ ರೀತಿ ಗೋಮಾಂಸ ಮಾರಾಟಕ್ಕೆ 8 ದಿನಗಳ ನಿಷೇಧ ಹೇರಲಾಗಿತ್ತು. ಕಾಂಗ್ರೆಸ್ ಅಧಿಕಾರ ಅವಧಿಯಲ್ಲೂ ನಿಷೇಧ ಜಾರಿಯಲ್ಲಿತ್ತು.
#meatban ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆ ಶುರುವಾಗಿದೆ. ಸೋನಾಕ್ಷಿ ಸಿನ್ಹಾ ಕೂಡಾ ಉತ್ತೇಜಿತರಾಗಿ ಮುಂಬೈ ಬ್ಯಾನ್ ಇಸ್ತಾನ್ ಆಗಿದೆ ಎಂದು ಟ್ವೀಟ್ ಮಾಡಿದ್ದರು.ಬ್ಯಾನ್ ಇಸ್ತಾನ್ ಇಂಡಿಯಾ ಎಂದು ಕರೆದ ಸೋನಾಕ್ಷಿ ವಿರುದ್ಧ ತಮಾಷೆ ಟ್ವೀಟ್ ಗಳು ಬಂದಿವೆ

ಟ್ರೆಂಡಿಂಗ್ ನಲ್ಲಿ ಸೋನಾಕ್ಷಿ ಸಿನ್ಹಾ
ಮಾಂಸ ಮಾರಾಟ ನಿಷೇಧದ ಬಗ್ಗೆ ಏನೇನೋ ಟ್ವೀಟ್ ಮಾಡಿದ ಸೋನಾಕ್ಷಿ ಸಿನ್ಹಾ ಹಾಗೂ ಟ್ವೀಟ್ ಆಟೋ ಕರೆಕ್ಟ್ ಸರಿಯಿಲ್ಲ ಎಂದು ಹೇಳಿದರು.
|
ಸೋನಾಕ್ಷಿ ಸಿನ್ಹಾ ಟ್ವೀಟ್ ಹೀಗಿತ್ತು
ಸೋನಾಕ್ಷಿ ಸಿನ್ಹಾ ಟ್ವೀಟ್ ಹೀಗಿತ್ತು ಮುಂಬೈ ಮೀಟ್ ಬ್ಯಾನ್ ಇಸ್ತಾನ್ ನಂತರ ಇಂಡಿಯಾ ಎಂದು ಏನೇನೋ ಟ್ವೀಟ್ ಮಾಡಿದ್ದಾರೆ.
|
ಅಸ್ಸಾಂ ಪ್ರವಾಹದ ಬಗ್ಗೆ ಏಕೆ ಮಾತನಾಡುತ್ತಿಲ್ಲ
ಅಸ್ಸಾಂ ಪ್ರವಾಹದ ಬಗ್ಗೆ ಏಕೆ ಮಾತನಾಡುತ್ತಿಲ್ಲ, ಆಹಾರ ಪದ್ಧತಿಯ ಮೇಲೆ ಬ್ಯಾನ್ ಮಾಡುತ್ತೀರಾ ಎಂದು ಪ್ರಶ್ನಿಸಿದ ಸೋನಾಕ್ಷಿ
|
ನಿಮ್ಮ ಅಪ್ಪನ ಥರಾ ವರ್ತಿಸಬೇಡಿ
ನಿಮ್ಮ ಅಪ್ಪನ ಥರಾ ವರ್ತಿಸಬೇಡಿ, ಈ ಮುಂಚೆ ನೀವು ಏನು ಬೇಡಿಕೆ ಇಟ್ಟಿದ್ದೀರಾ ಒಮ್ಮೆ ನೋಡಿ
|
ಎರಡೆರಡು ನಾಲಗೆ ಇರಬೇಕು ಇವರಿಗೆ
ಎರಡೆರಡು ನಾಲಗೆ ಇರಬೇಕು ಇವರಿಗೆ, ಒಮ್ಮೆ ಹಾಗೆ ಮತ್ತೊಮ್ಮೆ ಹೀಗೆ ಮಾತನಾಡುತ್ತಾರೆ
|
ಇಂಡಿಯಾ ಎಂದು ಕರೆದಿದ್ದಕ್ಕೆ ಧನ್ಯವಾದ
ಇಂಡಿಯಾ ಎಂದು ಕರೆದಿದ್ದಕ್ಕೆ ಧನ್ಯವಾದ, ನಿಮ್ಮ ಬಾಲಿವುಡ್ ಬ್ಯಾನ್ ಮಾಡಿದರೆ ಎಲ್ಲಾ ಸರಿಹೋಗುತ್ತೆ!
|
ಸರ್ ರವೀಂದ್ರ ಜಡೇಜ ಟ್ವೀಟ್ ಹೀಗಿದೆ
ಸರ್ ರವೀಂದ್ರ ಜಡೇಜ ಟ್ವೀಟ್ ಹೀಗಿದೆ, ಸೋನಾಕ್ಷಿ ಸಿನ್ಹಾ ಹಳೆ ಟ್ವೀಟ್ ಹೋಲಿಕೆ ಮಾಡಲಾಗಿದೆ.
|
ಮೊದಲು ಡಬ್ಬಾ ಮೂವಿಗಳನ್ನು ಬ್ಯಾನ್ ಮಾಡಿ
ಮೊದಲು ಡಬ್ಬಾ ಮೂವಿಗಳನ್ನು ಬ್ಯಾನ್ ಮಾಡಿ, ತೇವರ್, ಆಕ್ಷನ್ ಜಾಕ್ಸನ್, ಬುಲೆಟ್ ರಾಜ
|
ಸೋನಾಕ್ಷಿ ಹಣೆಯ ಅಗಲ ಐನ್ ಸ್ಟೈನ್ ಗೂ ಗೊತ್ತಿಲ್ಲ
ಸೋನಾಕ್ಷಿ ಹಣೆಯ ಅಗಲ ಐನ್ ಸ್ಟೈನ್ ಗೂ ಗೊತ್ತಿಲ್ಲ ಎಂದು ಯಾವುದೋ ಹ್ಯಾಶ್ ಟ್ಯಾಗ್ ಏನೋ ವಿಷಯ ತೆಗೆದ ಟ್ವೀಟ್ ಲೋಕ












Click it and Unblock the Notifications