ತುರ್ತು ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿ ಮೋದಿ ಆಡಳಿತದಲ್ಲಿದೆ: ಶೌರಿ
ಮುಂಬೈ, ನವೆಂಬರ್ 19: ಇಂದಿರಾ ಗಾಂಧಿ ಸಮಯದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಗಿಂತ ಅಪಾಯಕಾರಿ ಸ್ಥಿತಿಯಲ್ಲಿ ಮೋದಿ ಆಡಳಿತದಲ್ಲಿ ಇದೆ ಎಂದು ಬಿಜೆಪಿ ಮಾಜಿ ಸಚಿವ ಅರುಣ್ ಶೌರಿ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಟಾಟಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಹೇರಿದ ಬಗ್ಗೆ ಇಂದಿರಾ ಗಾಂಧಿ ಅವರಿಗೆ ಪಶ್ಚಾತಾಪವಿತ್ತು. ಆದರೆ ಈಗಿನ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು.
ಇಂದಿರಾ ಗಾಂಧಿ ಅವರಿಗೂ ಮೋದಿ ಅವರಿಗೂ ಬಹಳ ಅಂತರ ಇದೆ. ಇಂದಿರಾ ಗಾಂಧಿ 1.75 ಲಕ್ಷ ಜನರನ್ನು ಜೈಲಿಗೆ ಅಟ್ಟಿದ್ದರೂ ಸಹ ಅವರಿಗೆ ತಮ್ಮ ಮಿತಿಯ ಅರಿವಿತ್ತು, ಪಶ್ಚಾತಾಪವೂ ಇತ್ತು. ಆದರೆ ಮೋದಿಗೆ ಅದ್ಯಾವುದೂ ಇಲ್ಲ ಎಂದು ಅವರು ಹೇಳಿದರು.

2014ರಲ್ಲಿ ಮೋದಿ ಅವರ ಪರ ಭಾರಿ ಅಲೆ ಇದ್ದರೂ ಸಹ ಅವರು ಗಳಿಸಿದ್ದು 31% ಮತಗಳಷ್ಟೆ. ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಗಟ್ಟಿಯಾದರೆ ಬಿಜೆಪಿ ಸೋಲು ಖಚಿತ ಎಂದು ಶೌರಿ ಹೇಳಿದರು.
ವಿರೋಧ ಪಕ್ಷಗಳು ಒಂದಾದರೆ 2019 ರ ಚುನಾವಣೆಯಲ್ಲಿ ಮೋದಿ ಅವರನ್ನು ತಡೆಯಬಹುದು. ಪ್ರತಿ ಬಿಜೆಪಿ ಅಭ್ಯರ್ಥಿಯ ಎದುರು ಒಬ್ಬ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತಂತ್ರ ಅನುಸರಿಸಬೇಕು ಎಂದು ಅವರು ಹೇಳಿದರು.












Click it and Unblock the Notifications