ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50:50 ಸೂತ್ರಕ್ಕೆ ಒಪ್ಪಿದರೆ ಮಾತ್ರ ಸರ್ಕಾರ, ಬಿಜೆಪಿಗೆ ತಲೆನೋವಾದ ಶಿವಸೇನೆ

|
Google Oneindia Kannada News

ಮುಂಬೈ, ಅಕ್ಟೋಬರ್ 26: ಮಹಾರಾಷ್ಟ್ರದಲ್ಲಿ ಸುಲಭವಾಗಿ ಸರ್ಕಾರ ರಚಿಸಬಹುದು ಎಂಬ ಬಿಜೆಪಿ ನಿರೀಕ್ಷೆ ಸುಳ್ಳಾಗಿದ್ದು, 50:50 ಸೂತ್ರಕ್ಕೆ ಒಪ್ಪಿಗೆ ಸೂಚಿಸಿದರೆ ಮಾತ್ರ ಸರ್ಕಾರ ರಚನೆ ಮಾಡಲು ಬೆಂಬಲ ನೀಡುವುದಾಗಿ ಶಿವಸೇನೆ ಹೊಸ ದಾಳ ಎಸೆದಿದೆ.

ಈ ಸೂತ್ರದ ಪ್ರಕಾರ 5 ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರ ಇಬ್ಬರು ಮುಖ್ಯಮಂತ್ರಿಗಳನ್ನು ಕಾಣಲಿದೆ. ಎರಡೂವರೆ ವರ್ಷ ಶಿವಸೇನೆಯ ಅಭ್ಯರ್ಥಿಯೊಬ್ಬರು ಸಿಎಂ ಆದರೆ, ಮತ್ತೆರಡೂವರೆ ವರ್ಷ ಬಿಜೆಪಿ ಅಭ್ಯರ್ಥಿ ಮುಖ್ಯಮಂತ್ರಿಯಾಗಲಿದ್ದಾರೆ. ಈ ಒಪ್ಪಂದಕ್ಕೆ ಬೆಂಬಲಿಸುವುದಾದರೆ ಮಾತ್ರವೇ ಶಿವಸೇನೆ ಬಿಜೆಪಿಗೆ ಬೆಂಬಲ ನೀಡಲಿದೆ.

'ಅಧಿಕಾರದ ದುರಹಂಕಾರ ತೋರಿಸಿದರೆ...' ಬಿಜೆಪಿಗೆ ಶಿವಸೇನೆ ಎಚ್ಚರಿಕೆ!'ಅಧಿಕಾರದ ದುರಹಂಕಾರ ತೋರಿಸಿದರೆ...' ಬಿಜೆಪಿಗೆ ಶಿವಸೇನೆ ಎಚ್ಚರಿಕೆ!

Shiv Sena Says It Will Form Government Only If BJP Agrees On 50:50-Formula

ಮೊದಲಿನಿಂದಲೂ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣು ಹಾಕಿದ್ದ ಶಿವಸೇನೆ, ತನ್ನ ವರ್ಲಿ ಶಾಸಕ ಆದಿತ್ಯ ಠಾಕ್ರೆ ಅವರನ್ನು ಆ ಸ್ಥಾನಕ್ಕೆ ಸೂಚಿಸಲು ಮುಂದಾಗಿದೆ. ಇತ್ತ ಬಿಜೆಪಿ ಹಾಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನೇ ಮತ್ತೆ ಆ ಸ್ಥಾನದಲ್ಲಿ ಕೂರಿಸಲಿದೆ.

ಮಹಾರಾಷ್ಟ್ರದ 288 ಕ್ಷೇತ್ರಗಳ್ಲಲಿ ಬಿಜೆಪಿ 105 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಶಿವಸೇನೆ 56, ಎನ್ ಸಿಪಿ 54, ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಗೆದ್ದಿವೆ. ಸರ್ಕಾರ ರಚಿಸಬೇಕಾದರೆ ಬಿಜೆಪಿಗೆ ಶಿವಸೇನೆ ಬೆಂಬಲ ಅತ್ಯಗತ್ಯ.

English summary
Shiv Sena Says It Will Form Government Only If BJP Agree On 50:50 50:50 Formula
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X