ಹೊಟೆಲ್ ನತ್ತ ಶಿವಸೇನೆ ಶಾಸಕರು, 'ಮಹಾ' ರಾಜಕೀಯದಲ್ಲಿ ಭಾರೀ ತಿರುವು

ಮುಂಬೈ, ನವೆಂಬರ್ 07: ಮಹಾರಾಷ್ಟ್ರದಲ್ಲಿ ಬಿಜೆಪಿ ತನ್ನ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ಆತಂಕದಲ್ಲಿ ಶಿವಸೇನೆ ತನ್ನ ಶಾಸಕರನ್ನು ಹೊಟೆಲ್ ವೊಂದಕ್ಕೆ ಕಳಿಸಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನಗಿದ್ದ ಗಡುವು ನಾಳೆಗೆ ಮುಕ್ತಾಯವಾಗಲಿದ್ದು, ಅದಕ್ಕೂ ಮುನ್ನ ಶಿವಸೇನೆಯ ಕೆಲವು ಶಾಸಕರನ್ನು ಸೆಳೆದುಕೊಂಡು, ಅವರ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬಿಜೆಪಿ ಚಿಂತನೆ ನಡೆಸಿತ್ತು ಎಂಬ ವದಂತಿ ಹಬ್ಬಿತ್ತು. ಇದರಿಂದ ಆತಂಕ್ಕೊಳಗಾದ ಶಿವಸೇನೆ ತನ್ನ ಶಾಸಕರು ಯಾವುದೇ ಕಾರಣಕ್ಕೂ ಬಿಜೆಪಿ ಬೆಂಬಲಕ್ಕೆ ನಿಲ್ಲಬಾರದೆಂಬ ಕಾರಣಕ್ಕೆ ಅವರೆಲ್ಲರನ್ನೂ ಹೊಟೆಲ್ ಗೆ ಕಳಿಸಿದೆ.

ಶುಕ್ರವಾರದ ಒಳಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗದೆ ಇದ್ದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಲಿದೆ. ಆದರೆ ಆ ನಂತರವೂ ಯಾವುದೇ ಕ್ಷಣದಲ್ಲಿ ಯಾವುದೇ ಪಕ್ಷ ಬಹುಮತ ಸಾಬೀತುಪಡಿಸುವ ವಿಶ್ವಾಸ ತೋರಿದರೆ ಆರು ತುಂಗಳ ಒಳಗೆ ಸರ್ಕಾರ ರಚಿಸಬಹುದು. ಆರು ತಿಂಗಳ ನಂತರವೂ ಸರ್ಕಾರ ರಚನೆಯಾಗದೆ ಇದ್ದಲ್ಲಿ ಮರುಚುನಾವಣೆ ನಡೆಯಬೇಕಾಗುತ್ತದೆ.

ಹಣದ ಆಮಿಷ

ಹಣದ ಆಮಿಷ

ಬಿಜೆಪಿ ಹಣದ ಆಮಿಷವೊಡ್ಡಿ ಶಿವಸೇನೆಯ ಶಾಸಕರನ್ನು ಖರೀದಿ ಮಾಡಲು ಯತ್ನಿಸುತ್ತಿದೆ ರಾಜ್ಯದಲ್ಲಿ ಮೌಲ್ಯ ಕಳೆದುಕೊಂಡ ರಾಜಕೀಯ ಸ್ಥಿತಿ ಉಂಟಾಗುವುದಕ್ಕೆ ಶಿವಸೇನೆ ಅವಕಾಶ ನೀಡುವುದಿಲ್ಲ ಎಂದು ಶಿವಸೇನೆ ಹೇಳಿದೆ.

ಸಂಧಾನಕ್ಕೆ ನಿತಿನ್ ಗಡ್ಕರಿ

ಸಂಧಾನಕ್ಕೆ ನಿತಿನ್ ಗಡ್ಕರಿ

ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ನಡುವೆ ಸರ್ಕಾರ ರಚನೆ ಕುರಿತಂತೆ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮಾತ್ರ ಸಾಧ್ಯ ಎಂದು ಶಿವಸೇನೆ ಮುಖಂಡರೊಬ್ಬರು ಇತ್ತೀಚೆಗೆ ಹೇಳಿದ್ದರು. ಬಿಜೆಪಿಯೂ ಅದೇ ಕಾರಣಕ್ಕೆ ಗಡ್ಕರಿಯನ್ನು ಮಹಾರಾಷ್ಟ್ರಕ್ಕೆ ಕಳಿಸಿದೆ.

ಎನ್ ಸಿಪಿ ಶರತ್ತೇನು?

ಎನ್ ಸಿಪಿ ಶರತ್ತೇನು?

ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಬೆಂಬಲ ನೀಡಲು ಎನ್ ಸಿಪಿ ಸಿದ್ಧವಿದೆ. ಮುಖ್ಯಂತ್ರಿ ಹುದ್ದೆಯನ್ನೂ ಶಿವಸೇನೆಗೇ ನೀಡಲು ಸಿದ್ಧವಿದೆ. ಆದರೆ ಅದು ಶಿವಸೇನೆ ಒಮದೇ ಒಂದು ಶರತ್ತು ಹಾಕಿದೆ. ಅದೆಂದರೆ ಶಿವಸೇನೆ ಬಿಜೆಪಿಗೆ ಡಿವೋರ್ಸ್ ನೀಡಬೇಕು. ಮೈತರಿ ಮುರಿದಿಕೊಂಡು ಎನ್ ಡಿಎ ಯಿಂದಲೂ ಹೊರಬರಬೇಕು. ಶಿವಸೇನೆಯ ಏಕೈಕ ಕೇಂದ್ರ ಸಚಿವ ಅರವಿಂದ್ ಸಾವಂತ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ತಾಕೀತು ಹಾಕಿದೆ ಎಂದು ಮೂಲಗಳು ತಿಳಿಸಿವೆ.

ನಿತಿನ್ ಗಡ್ಕರಿ ಹೇಳಿದ್ದೇನು?

ನಿತಿನ್ ಗಡ್ಕರಿ ಹೇಳಿದ್ದೇನು?

ಗಡುವಿಗೆ ಇನ್ನೊಂದು ದಿನ ಬಾಕಿ ಇದೆ. ಅಷ್ಟರಲ್ಲಿ ನಾವು ಶಿವಸೇನೆಯ ಬೆಂಬಲ ಪಡೆದು ಸರ್ಕಾರ ರಚಿಸುವುದು ಖಂಡಿತ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+