ಚಪ್ಪಲಿಯೇಟು ಪ್ರಕರಣ: ಸಂಸದ ರವೀಂದ್ರ ಬೆಂಬಲಕ್ಕೆ ನಿಂತ ಶಿವಸೇನೆ

ಮಾರ್ಚ್ 23ರಂದು, ದೆಹಲಿಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಂಸ್ಥೆಯು ತಮ್ಮ ವಿಚಾರದಲ್ಲಿ ವಿಐಪಿ ಶಿಷ್ಟಾಚಾರ ಪಾಲಿಸಲಿಲ್ಲವೆಂದು ಸಿಟ್ಟಿಗೆದ್ದಿದ್ದ ರವೀಂದ್ರ ಗಾಯಕ್ವಾಡ್ ಅವರು, ಏರ್ ಇಂಡಿಯಾ ಸಿಬ್ಬಂದಿಯನ್ನು ಚಪ್ಪಲಿಯಿಂದ ಬಾರಿಸಿದ್ದರು.

ಮುಂಬೈ, ಮಾರ್ಚ್ 25: ಏರ್ ಇಂಡಿಯಾದ ಸಿಬ್ಬಂದಿ ಮೇಲೆ ಚಪ್ಪಲಿ ಪ್ರಯೋಗ ಮಾಡಿ ಗಂಭೀರವಾದ ವಿವಾದವನ್ನು ಮೈಮೇಲೆಳೆದುಕೊಂಡಿವರ ತನ್ನ ಪಕ್ಷದ, ಉಸ್ಮಾನಾಬಾದ್ ನ ಸಂಸದ ರವೀಂದ್ರ ಗಾಯಕ್ವಾಡ್ ಅವರ ಬೆಂಬಲಕ್ಕೆ ಶಿವಸೇನೆ ನಿಂತಿರುವುದು ಎಲ್ಲರ ಹುಬ್ಬೇರಿಸಿದೆ.

ಮಾರ್ಚ್ 23ರಂದು, ದೆಹಲಿಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಂಸ್ಥೆಯು ತಮ್ಮ ವಿಚಾರದಲ್ಲಿ ವಿಐಪಿ ಶಿಷ್ಟಾಚಾರ ಪಾಲಿಸಲಿಲ್ಲವೆಂದು ಸಿಟ್ಟಿಗೆದ್ದಿದ್ದ ರವೀಂದ್ರ ಗಾಯಕ್ವಾಡ್ ಅವರು, ಏರ್ ಇಂಡಿಯಾ ಸಿಬ್ಬಂದಿಯನ್ನು ಚಪ್ಪಲಿಯಿಂದ ಬಾರಿಸಿದ್ದರು.[ಚಪ್ಪಲಿಯೇಟು ಪ್ರಕರಣ: ಶಿವಸೇನಾ ಸಂಸದ ವಿರುದ್ಧ ಎಫ್ಐಆರ್]

ಈ ಹಿನ್ನೆಲೆಯಲ್ಲಿ, ಅವರನ್ನು ಏರ್ ಇಂಡಿಯಾ ಸೇರಿದಂತೆ ಕೆಲವಾರು ಖಾಸಗಿ ವಿಮಾನ ಸೇವಾ ಸಂಸ್ಥೆಗಳು ಕಪ್ಪು ಪಟ್ಟಿಗೆ ಸೇರಿಸಿವೆ.

ಶಿವಸೇನೆಯ ಅಚ್ಚರಿಯ ನಡೆ

ಶಿವಸೇನೆಯ ಅಚ್ಚರಿಯ ನಡೆ

ಶಿವಸೇನೆಯು ಈ ವಿಚಾರದಲ್ಲಿ ಸಂಸದನ ನಡೆಯನ್ನು ಆಕ್ಷೇಪಿಸುವ ಬದಲಿಗೆ ಆತನ ಬೆಂಬಲಕ್ಕೆ ನಿಂತುಕೊಂಡಿದೆ. ಸಂಸದ ರವೀಂದ್ರ ಅವರನ್ನು ಕಪ್ಪುಪಟ್ಟಿಗೇ ಸೇರ್ಪಡೆಗೊಳಿಸಿರುವ ಏರ್ ಇಂಡಿಯಾ ಕ್ರಮವನ್ನೂ ಅದು ಪ್ರಶ್ನಿಸಿದೆ.[ಚಪ್ಪಲಿ ಹೊಡೆತ ಪ್ರಕರಣ: ಸಂಸದ ರವೀಂದ್ರ ಮೇಲೆ ಏರ್ ಲೈನ್ ಗಳ ನಿಷೇಧ]

ಸಂಜತ್ ರವೂತ್ ಹೇಳಿಕೆ

ಸಂಜತ್ ರವೂತ್ ಹೇಳಿಕೆ

ಏರ್ ಇಂಡಿಯಾ ಸಂಸ್ಥೆಯು ತಮಗೆ ನೀಡಬೇಕಿದ್ದ ಸೌಕರ್ಯವನ್ನು ನೀಡಲಿಲ್ಲ ಎಂದು ಸಿಟ್ಟಿಗೆದ್ದಿದ್ದ ರವೀಂದ್ರ ವಿಮಾನದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದರು. ಆದರೆ, ಅವರನ್ನು ಅಲ್ಲಿಂದ ತೆರವುಗೊಳಿಸಲು ವಿಮಾನ ಸಂಸ್ಥೆಯ ಸಿಬ್ಬಂದಿ ಅವರನ್ನು ತಳ್ಳಾಡಿದ್ದಾರೆ. ಇದಕ್ಕೆ ಏರ್ ಇಂಡಿಯಾ ಸಂಸ್ಥೆ ಕ್ಷಮೆ ಯಾಚಿಸಲಿ ಎಂದು ಶಿವಸೇನೆಯ ನಾಯಕ ಸಂಜತ್ ರವೂತ್ ಹೇಳಿದ್ದಾರೆ.

ಜನರು ತಿರಸ್ಕರಿಸಿದರೆ ಏನು ಮಾಡ್ತೀರಾ ?

ಜನರು ತಿರಸ್ಕರಿಸಿದರೆ ಏನು ಮಾಡ್ತೀರಾ ?

ಅಲ್ಲದೆ, ರವೀಂದ್ರ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿರುವ ವಿಮಾನ ಸಂಸ್ಥೆಗಳಿಗೇ ಸವಾಲು ಹಾಕಿರುವ ಸಂಜತ್, ''ಪ್ರಯಾಣಿಕರನ್ನು ವಿಮಾನ ಸಂಸ್ಥೆಗಳು ನಿಷೇಧಿಸಿದು ಹಾಗಿರಲಿ, ಜನರು ವಿಮಾನ ಸೇವೆಗಳನ್ನು ತಿರಸ್ಕರಿಸಿದರೆ ತಮ್ಮ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಅವು ( ವಿಮಾನ ಸಂಸ್ಥೆಗಳು) ಮೊದಲು ಯೋಚಿಸಬೇಕು'' ಎಂದು ಅವರು ಹೇಳಿದ್ದಾರೆ.

ಏಕಾಂಗಿ ಪ್ರತಿಭಟನೆಯೇ ಮೂಲ ಕಾರಣ

ಏಕಾಂಗಿ ಪ್ರತಿಭಟನೆಯೇ ಮೂಲ ಕಾರಣ

ಗುರುವಾರ (ಮಾರ್ಚ್ 23) ಬೆಳಗ್ಗೆ 10:30ರ ಸುಮಾರಿಗೆ ನಡೆದಿದೆ. ಪುಣೆಯಿಂದ ದೆಹಲಿಗೆ ಬಂದ ವಿಮಾನದಲ್ಲಿದ್ದ ಮಹಾರಾಷ್ಟ್ರದ ಒಸ್ಮಾನಾಬಾದ್ ಕ್ಷೇತ್ರದ ಸಂಸದ ರವೀಂದ್ರ ಅವರು ಏರ್ ಇಂಡಿಯಾ ಸಂಸ್ಥೆಯ ಕೆಲವಾರು ಧೋರಣೆಗೆಗಳಿಗೆ ಬೇಸತ್ತು ಏಕಾಂಗಿ ಪ್ರತಿಭಟನೆಗೆ ಮುಂದಾಗಿದ್ದು ಈ ಘಟನೆಗೆ ಮೂಲ ಕಾರಣ ಎನ್ನಲಾಗಿದೆ.

ಪ್ರತಿಭಟನೆ ವೇಳೆ ತಾಳ್ಮೆ ಕಳೆದುಕೊಂಡ ಸಂಸದ

ಪ್ರತಿಭಟನೆ ವೇಳೆ ತಾಳ್ಮೆ ಕಳೆದುಕೊಂಡ ಸಂಸದ

ರವೀಂದ್ರ ಅವರ ಆಪ್ತ ಮೂಲಗಳ ಪ್ರಕಾರ, ರವೀಂದ್ರ ಅವರು ಹೆಚ್ಚಾಗಿ ಏರ್ ಇಂಡಿಯಾದಲ್ಲೇ ಪ್ರಯಾಣಿಸುತ್ತಿದ್ದಾರೆ. ಪ್ರತಿ ಬಾರಿ ಅವರು ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಪಡೆದಿದ್ದರೂ ಅವರನ್ನು ಏರ್ ಇಂಡಿಯಾವು ಅವರನ್ನು ಬಲವಂತವಾಗಿ ಎಕಾನಮಿ ಕ್ಲಾಸ್ ನಲ್ಲೇ ಪ್ರಯಾಣ ಮಾಡುವಂತೆ ಮಾಡುತ್ತಿದೆ ಎಂದು ತಿಳಿದ ಅವರು ಗುರುವಾರ ಬೆಳಗ್ಗೆ ಪುಣೆಯಿಂದ ನವದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದಾಗ ವಿಮಾನ ಬಿಟ್ಟು ಇಳಿಯದೇ ಆಸನದಲ್ಲೇ ಕುಳಿತು ಹಿರಿಯ ಅಧಿಕಾರಿಗಳು ತಮಗೆ ಸ್ಪಷ್ಟನೆ ನೀಡಬೇಕೆಂದು ಹಠ ಹಿಡಿದಿದ್ದರು.
ಆಗ ಅವರನ್ನು ಸಮಾಧಾನಪಡಿಸಲು ಬಂದಿದ್ದ ಸುಕುಮಾರ್ ಎಂಬ ವ್ಯವಸ್ಥಾಪಕರಿಗೆ ಅವರು ಚಪ್ಪಲಿಯಿಂದ ಹೊಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+