ಕನ್ಹಯ್ಯ ಅವರನ್ನು ದೂರಲು ಬಿಜೆಪಿಗೆ ಯಾವ ನೈತಿಕತೆ ಇದೆ? ಶಿವಸೇನೆ

ಮುಂಬೈ, ಜನವರಿ 16: "ಜವಹರಲಾಲ್ ನೆಹರು ವಿವಿಯ ಮಾಜಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಅವರನ್ನು ದೂರಲು ಬಿಜೆಪಿಗೆ ಯಾವ ನೈತಿಕತೆ ಇದೆ" ಎಂದು ಶಿವಸೇನೆ ಪ್ರಶ್ನಿಸಿದೆ.

2016 ರಲ್ಲಿ ಜೆಎನ್ ಯು ಮಾಜಿ ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಅವರ ವಿರುದ್ಧ 'ದೇಶವಿರೋಧಿ' ಎಂದು ದೂರಿ ಆರೋಪ ಪಟ್ಟಿ ಸಿದ್ಧಪಡಿಸಿರುವುದನ್ನು ಪ್ರಶ್ನಿಸಿದ ಶಿವಸೇನೆ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಮೇಲೇಕೆ ಆರೋಪ ದಾಖಲಿಸಿಲ್ಲ ಎಂದು ಅದು ಪ್ರಶ್ನಿಸಿದೆ.

ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ನನ್ನು ಹುತಾತ್ಮ ಎಂದು ಮುಫ್ತಿ ಕರೆದಿದ್ದರು, ಭಯೋತ್ಪಾದಕರನ್ನು ಮಣ್ಣಿನ ಮಕ್ಕಳು ಎಂದಿದ್ದರು. ಆದರೆ ಅವರ ಜೊತೆಗೇ ಬಿಜೆಪಿ ಸರ್ಕಾರ ರಚಿಸಿತು. ಹಾಗಿದ್ದ ಮೇಲೆ ಕನ್ಹಯ್ಯ ಕುಮಾರ್ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದೇಕೆ ಎಂದು ಅದು ಪ್ರಶ್ನಿಸಿದೆ.

Shiv Sena asks, What moral right does BJP have to condemn Kanhaiya Kumar?

ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯಲ್ಲಿ 2016ರ ಫೆಬ್ರವರಿಯಲ್ಲಿ ದೇಶದ್ರೋಹಿ ಕಾರ್ಯಕ್ರಮ ಆಯೋಜಿಸಿದ್ದ ಆರೋಪ ಅವರ ಮೇಲಿತ್ತು. ಮಾಜಿ ವಿದ್ಯಾರ್ಥಿ ಮುಖಂಡರಾದ ಕನ್ಹಯ್ಯಾ ಕುಮಾರ್, ಉಮರ್ ಖಾಲೀದ್, ಅನಿರ್ಬನ್ ಭಟ್ಟಾಚಾರ್ಯ ಮತ್ತು ಇತರ ಏಳು ಮಂದಿ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳ ವಿರುದ್ಧ ತಮ್ಮ ಬಳಿ ಸಾಕ್ಷ್ಯಗಳಿವೆ ಎಂದಿರುವ ಪೊಲೀಸರು ಆರೋಪ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+