'ಶರದ್ ಪಕ್ಷ, ಬಿಜೆಪಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬೇಕು' ಎಂದ ರಾಮದಾಸ್ ಅಠವಳೆ
ನವದೆಹಲಿ, ಜು.18: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಶನಿವಾರ ಸಭೆ ನಡೆಸಿದ ನಂತರ ಕೇಂದ್ರ ಸಚಿವ ರಾಮದಾಸ್ ಅಠವಳೆ ಎನ್‌ಸಿಪಿ ಎನ್‌ಡಿಎಗೆ ಸೇರಬೇಕು ಎಂದು ಭಾನುವಾರ ಹೇಳಿದರು.
ಎಎನ್‌ಐ ಜೊತೆ ಮಾತನಾಡಿದ ಅಠವಳೆ, ''ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ಸರ್ಕಾರ ರಚನೆಯಾಗಬೇಕು ಎಂದು ನಾನು ಭಾವಿಸುತ್ತೇನೆ. ಎನ್‌ಸಿಪಿ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಿಂದ ತಮ್ಮ ಬೆಂಬಲವನ್ನು ಹಿಂತೆಗೆದುಕೊಳ್ಳಬೇಕು. ಬದಲಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಯೊಂದಿಗೆ ಕೈಜೋಡಿಸಬೇಕು,'' ಎಂದು ಶರದ್ ಪವಾರ್‌ಗೆ ರಾಮದಾಸ್ ಅಠವಳೆ ಒತ್ತಾಯಿಸಿದ್ದಾರೆ.
ಬ್ಯಾಂಕಿಂಗ್ ತಿದ್ದುಪಡಿ ಕಾಯ್ದೆಯ ತಿದ್ದುಪಡಿಗಳ ಬಗ್ಗೆ ಹಿರಿಯ ಮರಾಠರ ಮೀಸಲಾತಿ ಕುರಿತು ಶರದ್ ಪವಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಶನಿವಾರ ಒಂದು ಗಂಟೆ ಸಭೆ ನಡೆದಿದೆ. ಈ ಬೆನ್ನಲ್ಲೇ ಬಿಜೆಪಿ ಹಾಗೂ ಎನ್‌ಸಿಪಿ ಜೊತೆಯಾಗುತ್ತದೆಯೇ ಎಂಬ ಊಹಾಪೋಹಗಳು ಹುಟ್ಟಿಕೊಂಡವು. ಆದರೆ ತಾವು ಎಂದಿಗೂ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಎನ್‌ಸಿಪಿ ಹೇಳಿಕೊಂಡಿದೆ.

''ಬಿಜೆಪಿ, ಎನ್‌ಸಿಪಿ ಏಕೆ ಮೈತ್ರಿಯಾಗಲಾಗದು?''
ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ಎರಡು ಪಕ್ಷಗಳು ಒಗ್ಗೂಡುವುದಿಲ್ಲ ಎಂದು ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಠವಳೆ, "ಶಿವಸೇನೆ, ಕಾಂಗ್ರೆಸ್ ಮತ್ತು ಬಿಜೆಪಿ ಕೂಡ ನದಿಯ ವಿವಿಧ ತೀರಗಳಲ್ಲಿದ್ದವು, ಆದರೆ ಅವು ಒಟ್ಟಿಗೆ ಆದವು. ಬಿಜೆಪಿ ಮತ್ತು ಎನ್‌ಸಿಪಿ ಏಕೆ ಒಟ್ಟಿಗೆ ಬರಲು ಸಾಧ್ಯವಿಲ್ಲ?," ಎಂದು ಪ್ರಶ್ನಿಸಿದ್ದಾರೆ,

''ಕಾಂಗ್ರೆಸ್ ವಿವಾದಾದ್ಮಕ ಹೇಳಿಕೆ ನೀಡುತ್ತಿದೆ, ನಮ್ಮೊಂದಿಗೆ ಸೇರಿ''
ಬಾಬಾಸಾಹೇಬ್ (ಅಂಬೇಡ್ಕರ್) ರೂಪಿಸಿದ ಸಂವಿಧಾನವು ವಿಭಿನ್ನ ಬದಿಗಳನ್ನು ಒಂದುಗೂಡಿಸಲು ಪ್ರಯತ್ನಿಸುತ್ತದೆ ಎಂದು ಕೂಡಾ ಹೇಳಿದರು. "ಶರದ್ ಪವಾರ್ ಜಿ ತಮ್ಮ ನಿರ್ಧಾರವನ್ನು ಬದಲಾಯಿಸಬೇಕೆಂದು ನಾನು ವಿನಂತಿಸುತ್ತೇನೆ. ಶಿವಸೇನೆಗೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಳ್ಳಬೇಕು. ಕಾಂಗ್ರೆಸ್ ಪಕ್ಷವು ನಿಮಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದೆ. ಕಾಂಗ್ರೆಸ್ ನಾನಾ ಪಟೋಲೆ ಹಾಗೂ ಪವಾರ್ ಜಿ ವಿರುದ್ಧ ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದೆ. ಅವಮಾನ ಮಾಡುತ್ತಿದೆ. ಅದಕ್ಕಾಗಿಯೇ ನಾನು ಭಾವಿಸುತ್ತೇನೆ ಶರದ್ ಪವಾರ್ ಜಿ ಎನ್‌ಡಿಎ ಜೊತೆ ಬರಬೇಕು," ಎಂದು ಮನವಿ ಮಾಡಿದ್ದಾರೆ.

''ರೈತರ ಆಂದೋಲನ ಕೊನೆಯಾಗಬೇಕು''
"ಎನ್‌ಸಿಪಿ ಮತ್ತು ಶರದ್ ಪವಾರ್ ಅವರ ಕಾರಣದಿಂದಾಗಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಆದರೆ, ಸರ್ಕಾರವು ನಡೆಸಬೇಕಾದ ರೀತಿಯಲ್ಲಿ ನಡೆಯುತ್ತಿಲ್ಲ," ಎಂದು ಆರೋಪಿಸಿದರು. ಪವಾರ್ ರೈತರ ವಿಷಯದಲ್ಲಿ ಪಿಎಂ ಮೋದಿಯವರನ್ನು ಭೇಟಿಯಾದರು ಎಂಬ ಶಿವಸೇನೆ ಸಂಸದ ಅರವಿಂದ ಸಾವಂತ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮದಾಸ್ ಅಠವಳೆ, "ಪವಾರ್ ರೈತರ ಸಮಸ್ಯೆಯ ಬಗ್ಗೆ ಮಾತನಾಡಿದ್ದರೂ ಸಹ ಅದು ಒಳ್ಳೆಯದು. ಆಂದೋಲನ ಕೊನೆಗೊಳ್ಳಬೇಕು. ರೈತರಿಗೆ ನ್ಯಾಯ ಸಿಗಬೇಕು. ಶರದ್ ಕಾನೂನನ್ನು ರದ್ದುಪಡಿಸುವ ಅಗತ್ಯವಿಲ್ಲ. ಆದರೆ ರೈತರ ಸಮಸ್ಯೆಗಳನ್ನು ಬಗೆಹರಿಸಲು ತಿದ್ದುಪಡಿ ಮಾಡಬೇಕು ಎಂದು ಈ ಹಿಂದೆ ಹೇಳಿದ್ದಾರೆ. ಮಾತುಕತೆ ಏನೇ ನಡೆದಿರಲಿ. ಶರದ್ ಪವಾರ್ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸ್ನೇಹ ಉತ್ತಮವಾಗಿರಬೇಕು ಎಂದು ಹೇಳಿದರು.

ಮೋದಿಯೊಂದಿಗೆ ಪವಾರ್ ಸಭೆ
ಜುಲೈ 19 ರಂದು ಸಂಸತ್ತಿನ ಮಾನ್ಸೂನ್ ಅಧಿವೇಶನ ಪ್ರಾರಂಭವಾಗುವ ಎರಡು ದಿನಗಳ ಮೊದಲು ಶನಿವಾರ ಪಿಎಂ ಮೋದಿಯನ್ನು ಶರದ್ ಪವಾರ್ ಭೇಟಿಯಾದರು. ಎಂವಿಎ ಮಿತ್ರಪಕ್ಷದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಊಹಾಪೋಹಗಳು ಹೆಚ್ಚಿರುವ ಸಮಯದಲ್ಲಿ ಈ ಸಭೆ ನಡೆದಿದೆ. ಸಭೆಯು ಒಂದು ಗಂಟೆ ಮುಚ್ಚಿದ ಕೋಣೆಯಲ್ಲಿ ನಡೆದಿದೆ. ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಮೋದಿಯೊಂದಿಗೆ ಕೋವಿಡ್ ವಿಚಾರದಲ್ಲಿ ಸಭೆ ನಡೆಸಿದಾಗ ಇದೇ ರೀತಿಯ ಊಹಾಪೋಹಗಳು ಸೃಷ್ಟಿಯಾಗಿದ್ದವು.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications