85 ವರ್ಷದ ವೃದ್ದೆಯ 'ದೊಣ್ಣೆ ವರಸೆ' ಕಂಡು ಬೆರಗಾದ ನೆಟ್ಟಿಗರು

ಮುಂಬೈ, ಜುಲೈ 24: 85 ವರ್ಷದ ವೃದ್ದೆಯೊಬ್ಬರು ಪುಣೆ ಬೀದಿಗಳಲ್ಲಿ ದೊಣ್ಣೆ ವರಸೆಯ ಚಮತ್ಕಾರ ತೋರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

Recommended Video

      The Indian Premier League (IPL) 2020 is all set to kick-off | Oneindia Kannada

      85ರ ಹರೆಯದಲ್ಲಿ ವೃದ್ದೆ ಶಾಂತಬಾಯಿ ಪವರ್ ಲಾಠಿ ವರಸೆಯ ಮೋಡಿ ನೋಡುಗರನ್ನು ವಾಹ್ ಎನ್ನುವಂತೆ ಮಾಡಿದೆ. ಶಾಂತಬಾಯಿ ಅವರ ವಿಡಿಯೋಗಳು ವೈರಲ್ ಆದ ಬಳಿಕ ಬಾಲಿವುಡ್ ನಟ ಸೋನು ಸೂದ್, ರಿತೇಶ್ ದೇಶ್‌ಮುಖ್ ಆಕೆಯ ಸಂಪರ್ಕಕ್ಕೆ ತನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.

      Shanta Balu Pawar Shows Lathi Kathi Skills on the Streets of Pune

      ನಟ ಸೋನು ಸೂದ್ ಅವರು ಇನ್ನು ಒಂದು ಹೆಜ್ಜೆ ಮುಂದೆ ಸಾಗಿ 'ಅವರೊಂದಿಗೆ ಒಂದು ಸಣ್ಣ ತರಬೇತಿ ಶಾಲೆಯನ್ನು ತೆರೆಯಲು ಚಿಂತಿಸುತ್ತಿದ್ದೇನೆ. ನಮ್ಮ ದೇಶದ ಮಹಿಳೆಯರಿಗೆ ಕೆಲವು ಸ್ವರಕ್ಷಣೆ ತಂತ್ರಗಳನ್ನು ಅವರು ತರಬೇತಿ ನೀಡಬಹುದು' ಎಂದು ಹೇಳಿದ್ದಾರೆ.

      ತನ್ನ ವಿಡಿಯೋಗಳ ವೈರಲ್ ಆದ ಬಳಿಕ ಎಎನ್ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಶಾಂತಬಾಯಿ ''ನಾನು 8ನೇ ವಯಸ್ಸಿನಲ್ಲಿ ಈ ಕಲೆ ಕಲಿತಿದ್ದೇನೆ. ನಮ್ಮ ತಂದೆ ಅವರು ಹೇಳಿಕೊಟ್ಟರು. ಬಹಳ ಕಷ್ಟಪಟ್ಟು ಕಲಿತಿದ್ದೇನೆ' ಎಂದು ತಿಳಿಸಿದ್ದಾರೆ.

      'ದೇವರ ಅನುಗ್ರಹದಿಂದ, ನಾನು ಈ ವಯಸ್ಸಿನಲ್ಲಿ ಪ್ರದರ್ಶನ ನೀಡಲು ಮತ್ತು ನನ್ನ ಜೀವನೋಪಾಯವನ್ನು ಉಳಿಸಿಕೊಳ್ಳಲು ಸಮರ್ಥನಾಗಿದ್ದೇನೆ. ನನ್ನ ಮೊಮ್ಮಕ್ಕಳು ತಮ್ಮ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ ಮತ್ತು ನಾವು ಸಂತೋಷವಾಗಿದ್ದೇವೆ" ಎಂದು ಶಾಂತಬಾಯಿ ಪವಾರ್ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+