ಯೋಗಿ ಉದಾಹರಣೆ ಕೊಟ್ಟು ಮಹಾರಾಷ್ಟ್ರದ ಫಡಣವೀಸ್ ಗೆ ಚುಚ್ಚಿದ ಶಿವಸೇನೆ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 10: ಜನರ ಹಿತ-ಕಲ್ಯಾಣಕ್ಕಾಗಿ ಯೋಗಿ ಆದಿತ್ಯನಾಥ್ ತೆಗೆದುಕೊಂಡ ಶೀಘ್ರ ನಿರ್ಣಯಗಳ ಬಗ್ಗೆ ಶಿವಸೇನೆ ಸೋಮವಾರ ಹೊಗಳಿ, ಮೆಚ್ಚುಗೆ ಸೂಚಿಸಿದೆ. ಜತೆಗೆ ಅವರಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪಾಠ ಕಲಿಯಬೇಕು ಎಂದಿದೆ.

ಶಿವಸೇನೆಯ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಈ ಬಗ್ಗೆ ಬರೆದಿದ್ದು, "ತನ್ನ ಎಲ್ಲ ವಿಮರ್ಶಕರ ಮಾತನ್ನು ಯೋಗಿ ಆದಿತ್ಯನಾಥ್ ತಪ್ಪು ಎಂದು ಸಾಬೀತು ಮಾಡಿದ್ದಾರೆ. ಒಂದಾದ ನಂತರ ಒಂದು ಗಂಭೀರ ತೀರ್ಮಾನಗಳನ್ನು ಜನರ ಹಿತಕ್ಕಾಗಿ ತೆಗೆದುಕೊಂಡಿದ್ದಾರೆ ಎಂದು ಹೊಗಳಲಾಗಿದೆ.[ಹಿಂದೂ ರಾಷ್ಟ್ರದ ಪರಿಕಲ್ಪನೆ ತಪ್ಪಲ್ಲ-ಯೋಗಿ ಆದಿತ್ಯನಾಥ್]

Sena praises Yogi, tells Fadnavis to learn from him

ತುಂಬ ಕೆಟ್ಟ ಸ್ಥಿತಿಯಲ್ಲಿದ್ದ ರಾಜ್ಯವನ್ನು ಮೇಲೆತ್ತುವ ನಿಟ್ಟಿನಲ್ಲಿ ಗಂಭೀರವಾಗಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ರೈತರ ಸಾಲ ಮನ್ನಾ ಮಾಡಿದ ನಿರ್ಧಾರವನ್ನು ಹೊಗಳಿರುವ ಶಿವಸೇನೆ, ರೈತರ ಸಾಲ ಮನ್ನಾ ಮಾಡುವಂತೆ ಮಹಾರಾಷ್ಟ್ರದ ಎಲ್ಲ ಪಕ್ಷಗಳು ಒತ್ತಾಯಿಸುತ್ತಿವೆ. "ಆ ಗಂಭೀರತೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವವರಿಗೆ ಬಂದರೆ ಅವರಿಗೆ ಜನರ ಆಶೀರ್ವಾದ ಸಿಗುತ್ತದೆ

"ತಮ್ಮ ಮೊದಲ ಸಂಪುಟ ಸಭೆಯಲ್ಲೇ ಯೋಗಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಆದರೆ ಇಲ್ಲಿ ಸರಕಾರ ಯೋಗಿಯ ಮಾದರಿಯನ್ನು ಗಮನಿಸುತ್ತಿರುವುದಾಗಿ ಹೇಳುತ್ತಿದೆ. ಒಂದು ವೇಳೆ ಸಾಲಭಾರದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬಹುದಾ ಎಂದು ಕಾಯುತ್ತಿರಬಹುದು" ಎಂದು ಶಿವಸೇನೆ ಹೇಳಿದೆ.[ಮೊದಲ ಸಚಿವ ಸಂಪುಟ ಸಭೆಯಲ್ಲೇ ರೈತರ ಹೊರೆ ಇಳಿಸಿದ ಯೋಗಿ ಆದಿತ್ಯನಾಥ್]

Sena praises Yogi, tells Fadnavis to learn from him

ಗಾಂಭೀರ್ಯದ ಮುಖವಾಡ ತೊಟ್ಟು, ಅದನ್ನು ಅನುಷ್ಠಾನಕ್ಕೆ ತರದಿದ್ದರೆ ಯಾವ ಪ್ರಯೋಜನವೂ ಇಲ್ಲ. ಇಲ್ಲಿ ಅಧಿಕಾರದಲ್ಲಿರುವವರು ಯೋಗಿ ಆದಿತ್ಯನಾಥ್ ರಿಂದ ಗಾಂಬೀರ್ಯವನ್ನು ಸಾಲ ಪಡೆಯಲಿ ಎಂದು ಶಿವಸೇನೆ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Shiv Sena on Monday lavished praises on Yogi Adityanath for taking quick decisions for the people’s welfare and asked Maharashtra Chief Minister Devendra Fadnavis to take lessons from his Uttar Pradesh counterpart.
Please Wait while comments are loading...