ಓಖಿ ಅಬ್ಬರವೀಗ ಮುಂಬೈನತ್ತ: ಶಾಲೆ-ಕಾಲೇಜುಗಳಿಗೆ ರಜೆ
Recommended Video

ಓಖಿ ಅಬ್ಬರವೀಗ ಮುಂಬೈನತ್ತ: ಶಾಲೆ-ಕಾಲೇಜುಗಳಿಗೆ ರಜೆ | Oneindia Kannada
ಮುಂಬೈ, ಡಿಸೆಂಬರ್ 05: ಓಖಿ ಚಂಡಮಾರುತದಿಂದಾಗಿ ಮುಂಬೈಯಲ್ಲೂ ಭಾರೀ ಮಳೆ ಆರಂಭವಾಗಿದ್ದು, ಮುನ್ನೆಚ್ಚರಿಕೆಗಾಗಿ ಇಂದು(ಡಿ.05) ಮುಂಬೈಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ತನ್ನ ಅಬ್ಬರ ತೋರಿಸಿದ ನಂತರ, ಓಖಿ ಇದೀಗ ವಾಣಿಜ್ಯನಗರಿ ಮುಂಬೈಯನ್ನು ತಲುಪಿದೆ.

ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಮಹಾರಾಷ್ಟ್ರದ ಕೆಲವು ಜಿಲ್ಲೆಗಳು ಸೇರಿದಂತೆ, ಮುಂಬೈ ನಗರದಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಈ ಕ್ರೂರ ಚಂಡಮಾರುತಕ್ಕೆ ಇದುವರೆಗೂ 25 ಜನ ಮೃತರಾಗಿದ್ದಾರೆ.












Click it and Unblock the Notifications