ಟ್ವೀಟ್ಸ್ : 'ಗುದ್ದೋಡು, ಫೈಲ್ ಸುಡು, ಸಾಕ್ಷಿ ಸಾಯಿಸು, ಖುಲಾಸೆಗೊಳ್ಳು'
ಮುಂಬೈ, ಡಿ. 10: ಹಿಂದಿ ಚಿತ್ರರಂಗದ ವಿವಾದಿತ ನಟ ಸಲ್ಮಾನ್ ಖಾನ್ ಅವರನ್ನು 2002ರ ಹಿಟ್ ಅಂಡ್ ರನ್ ಕೇಸಿನಿಂದ ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.
ಘಟನೆ ನಡೆದ ದಿನ ಸಲ್ಮಾನ್ ಖಾನ್ ಅವರು ಕುಡಿದು ವಾಹನ ಚಲಾಯಿಸಿದ್ದಕ್ಕೆ ಸಾಕ್ಷಿಗಳಿಲ್ಲ. ಪ್ರಕರಣ ದಾಖಲಿಸಿಕೊಳ್ಳುವಾಗ, ಎಫ್ ಐಅರ್ ಹಾಕುವಾಗ ಹಾಗೂ ತನಿಖೆಯನ್ನು ಸೂಕ್ತವಾಗಿ ನಡೆಸುವಲ್ಲಿ ಮುಂಬೈ ಪೊಲೀಸರು ವಿಫಲರಾಗಿದ್ದಾರೆ. ಯಾವುದೇ ಸೆಕ್ಷನ್ ಅಡಿಯಲ್ಲಿ ಸಲ್ಮಾನ್ ಅವರನ್ನು ಅಪರಾಧಿ ಎಂದು ಪರಿಗಣಿಸಲಾಗುವುದು ಈ ಪ್ರಕರಣದಲ್ಲಿ ನಿರ್ದೋಷಿ ಎಂದು ಖುಲಾಸೆಗೊಳಿಸಲಾಗಿದೆ ಎಂದು ನ್ಯಾ. ಎಆರ್ ಜೋಶಿ ತಮ್ಮ ತೀರ್ಪು ನೀಡಿದ್ದಾರೆ.[ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]
ಈ ತೀರ್ಪಿನಿಂದ ಸಲ್ಮಾನ್ ಖಾನ್ ಮೇಲೆ ಸುಮಾರು 200 ಕೋಟಿ ರು ಹೂಡಿಕೆ ಮಾಡಿರುವ ನಿರ್ಮಾಪಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ರವೀಂದ್ರ ಪಾಟೀಲ್, ನೂರುಲ್ಲಾ ಅವರ ಆತ್ಮ ಏನು ಹೇಳುತ್ತಿದೆಯೋ ಗೊತ್ತಿಲ್ಲ. [ಸಲ್ಮಾನ್‌ರನ್ನು ಜೈಲಿಗಟ್ಟಿದ್ದ ಆತ್ಮ ಅದೆಷ್ಟು ಮರುಗುತ್ತಿದೆಯೋ?]
I accept the decision of the judiciary with humility. I thank my family, friends & fans for their support & prayers .
— Salman Khan (@BeingSalmanKhan) December 10, 2015 ಸಲ್ಮಾನ್ ಖಾನ್ ಅಭಿಮಾನಿಗಳಂತೂ ರಸ್ತೆಗಿಳಿದು ಕುಣಿದು ಕುಪ್ಪಳಿಸಿದ್ದಾರೆ. ಹ್ಯೂಮಾನಿಟಿ ಡೇ ದಿನವೇ ಸಲ್ಮಾನ್ ಗೆ ಖುಲಾಸೆಯಾಗಿರುವುದು ವಿಪರ್ಯಾಸ ಎಂದು ಕೋರ್ಟ್ ವೈಖರಿಯನ್ನು ಅನೇಕರು ಪ್ರಶ್ನಿಸಿದ್ದಾರೆ. ಮತ್ತೊಮ್ಮೆ #Salmanverdict ಸಾಮಾಜಿಕ ಜಾಲ ತಾಣಗಳಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ.

ಎಫ್ ಐಆರ್ ನಲ್ಲಿ ಆದ ಲೋಪ
ಸೆಪ್ಟೆಂಬರ್ 28, 2002ರಂದು ಘಟನೆ ನಡೆದ ಕೆಲ ಹೊತ್ತಿನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ. ಆದರೆ, ಎಫ್ ಐಆರ್ ನಲ್ಲಿ ಎಲ್ಲೂ ಕೂಡಾ ಸಲ್ಮಾನ್ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಉಲ್ಲೇಖಿಸಿಲ್ಲ. ಪೊಲೀಸರಿಂದ ಆದ ಈ ಲೋಪ ದೋಷ ಈಗ ಸಲ್ಮಾನ್ ಪಾಲಿಗೆ ವರವಾಗಿ ಪರಿಣಮಿಸಿದೆ.
|
ಸಲ್ಮಾನ್ ಖಾನ್ ನಿವಾಸದ ಮುಂದೆ ಅಭಿಮಾನಿಗಳು
ತೀರ್ಪು ಹೊರ ಬಂದ ಮೇಲೆ ಸಲ್ಮಾನ್ ಖಾನ್ ನಿವಾಸದ ಮುಂದೆ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
|
ಇದು ನ್ಯಾಯವೇ? ಭ್ರಷ್ಟಾಚರವೇ? ತಮಾಷೆಯೇ?
ಇದು ನ್ಯಾಯವೇ? ಭ್ರಷ್ಟಾಚರವೇ? ತಮಾಷೆಯೇ?, ಸೆಷನ್ಸ್ ಕೋರ್ಟ್ 5 ವರ್ಷ ಶಿಕ್ಷೆ ಸುಮ್ಮನೆ ಕೊಟ್ಟಿತ್ತೆ?
|
ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವಾಗುವ ಸಲ್ಮಾನ್
ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವಾಗುವ ಸಲ್ಮಾನ್ ಅವರಿಗೆ ಯಾವುದಾದ್ರೂ ಒಬ್ಬ ರೋಗಿಯ ತಾಯಿಯ ಆಶೀರ್ವಾದದ ಬಲ ಸಿಕ್ಕಿದೆ.
|
ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸುತ್ತೇವೆ
ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸುತ್ತೇವೆ ಎಂದ ಮಹಾರಾಷ್ಟ್ರ ಪರ ವಕೀಲೆ ಅಬಾ ಸಿಂಗ್
|
Human Rights Day! ದಿನವೇ ಖುಲಾಸೆ
Human Rights Day! ದಿನವೇ ಸಲ್ಮಾನ್ ಗೆ ಖುಲಾಸೆ ಎಂಥ ವಿಪರ್ಯಾಸ.
|
ಭೋಪಾಲ್ ನಲ್ಲಿ ಸಲ್ಮಾನ್ ಫ್ಯಾನ್ಸ್ ಸಂಭ್ರಮ
ಭೋಪಾಲ್ ನಲ್ಲಿ ಸಲ್ಮಾನ್ ಫ್ಯಾನ್ಸ್ ಸಂಭ್ರಮಾಚರಣೆ ಹೀಗಿದೆ












Click it and Unblock the Notifications