ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಕತ್ತಿದ್ರೆ NDA ಯಿಂದ ಹೊರಹೋಗಿ... ಶಿವಸೇನೆಗೆ RSS ಖಡಕ್ ಎಚ್ಚರಿಕೆ?!

|
Google Oneindia Kannada News

Recommended Video

ತಾಕತ್ತಿದ್ರೆ NDA ಯಿಂದ ಹೊರಹೋಗಿ... ಶಿವಸೇನೆಗೆ RSS ಖಡಕ್ ಎಚ್ಚರಿಕೆ?! | oneindia Kannada

ಮುಂಬೈ, ಡಿಸೆಂಬರ್ 27: ಎನ್ ಡಿಎ ಸರ್ಕಾರದಲ್ಲೇ ಗುರುತಿಸಿಕೊಂಡು ಬಿಜೆಪಿ ಬಗ್ಗೆ ನಿರಂತರ ಆರೋಪ ಮಾಡುತ್ತಿರುವ ಶಿವಸೇನೆಯನ್ನು ಆರೆಸ್ಸೆಸ್ ಬೆಂಬಲಿತ ಪತ್ರಿಕೆಯೊಂದು ತರಾಟೆಗೆ ತೆಗೆದುಕೊಂಡಿದೆ.

ಆಕ್ಸಿಜನ್ ಖಾಲಿನಾ? ಮೋದಿಗೆ ಶಿವಸೇನೆ ತಪರಾಕಿಆಕ್ಸಿಜನ್ ಖಾಲಿನಾ? ಮೋದಿಗೆ ಶಿವಸೇನೆ ತಪರಾಕಿ

'ತರುಣ ಭಾರತ' ಎಂಬ ಮರಾಠಿ ಪತ್ರಿಕೆಯು 'ಚೌಕಿದಾರ ಕಳ್ಳ' ಎಂದ ಉದ್ಧವ್ ಠಾಕ್ರೆ ಅವರ ಹೇಳಿಕೆಯನ್ನು ಉಲ್ಲೇಖಿಸಿ, 'ನಿಮಗೆ ಬಿಜೆಪಿ ಬಗ್ಗೆ ಗೌರವವಿಲ್ಲವಾದರೆ, ಅದನ್ನು ನಿರಂತರವಾಗಿ ಟೀಕಿಸುತ್ತೀರಾದರೆ ಇನ್ನೂ ಎನ್ ಡಿಎ ಸರ್ಕಾರದಲ್ಲೇ ಯಾಕಿದ್ದೀರಿ. ತಾಕತ್ತಿದ್ರೆ ಹೊರಬನ್ನಿ' ಎಂದು ಅದು ಖಡಕ್ ವಾರ್ನಿಂಗ್ ನೀಡಿದೆ.

ಅಧಿಕಾರದಲ್ಲೇ ಇದ್ದೀರಿ, ಆದರೂ ರಾಮನಿಗೇಕೆ ವನವಾಸ?: ಬಿಜೆಪಿಗೆ ಶಿವಸೇನಾ ಪ್ರಶ್ನೆಅಧಿಕಾರದಲ್ಲೇ ಇದ್ದೀರಿ, ಆದರೂ ರಾಮನಿಗೇಕೆ ವನವಾಸ?: ಬಿಜೆಪಿಗೆ ಶಿವಸೇನಾ ಪ್ರಶ್ನೆ

"ಶಿವಸೇನೆಗೆ ಅಧಿಕಾರವೂ ಬೇಕು, ಬಿಜಿಯನ್ನು ಹಳಿಯುವುದೂ ಬೇಕು ಎಂದರೆ ಆಗುವುದಿಲ್ಲ. ಈ ದೇಶದ ಚೌಕಿದಾರ ಕಳ್ಳ ಎನ್ನಿಸಿದರೆ ತಕ್ಷಣವೇ ಸರ್ಕಾರವನ್ನು ಬಿಟ್ಟು ಬರಲಿ! ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ನಿರಂತರ ಆರೋಪ ಮಾಡುತ್ತಲೇ ಕೇಂದ್ರ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಸರಿಯೇ?" ಎಂದು ಅದು ಪ್ರಶ್ನಿಸಿದೆ.

'ಮಸೀದಿ ಕೆಡವಲು 17 ನಿಮಿಷ, ಮಂದಿರ ನಿರ್ಮಾಣಕ್ಕೆ ಏಕೆ ವಿಳಂಬ''ಮಸೀದಿ ಕೆಡವಲು 17 ನಿಮಿಷ, ಮಂದಿರ ನಿರ್ಮಾಣಕ್ಕೆ ಏಕೆ ವಿಳಂಬ'

ಎನ್ ಡಿಎ ಜೊತೆ ಯಾಕಿದ್ದೀರಿ?

ಎನ್ ಡಿಎ ಜೊತೆ ಯಾಕಿದ್ದೀರಿ?

"ಮೋದಿಯವರನ್ನು ಕಳ್ಳ ಎನ್ನುವುದಾರೆ ಅವರದೇ ನೇತೃತ್ವದ ಸರ್ಕಾರದಲ್ಲಿ ನೀವ್ಯಾಕಿದ್ದೀರಿ? ನೀವೂ ಕಳ್ಳರೇ?" ಎಂದು ಪತ್ರಿಕೆಯಲ್ಲಿ ಪ್ರಶ್ನಿಸಲಾಗಿದೆ.

'ಬಾಳಾಸಾಹೇಬ್ ಠಾಕ್ರೆ ಅವರಿದ್ದಾಗಿನ ಶಿವಸೇನೆಗೂ ಈಗಿನದಕ್ಕೂ ಅಜಗಜಾಂತರವಿದೆ. ಈಗಿರುವ ಶಿವಸೇನೆಗೆ ಅಧಿಕಾರವೂ ಬೇಕು, ಆದರೆ ಎನ್ ಡಿಎ ಯಿಂದ ಹೊರಬರುವ ತಾಕತ್ತಿಲ್ಲ' ಎಂದು ಅದು ಟೀಕಿಸಿದೆ.

ರಾಮ ಮಂದಿರ ಈಗೇಕೆ ನೆನಪಾಯ್ತು?

ರಾಮ ಮಂದಿರ ಈಗೇಕೆ ನೆನಪಾಯ್ತು?

ಇಷ್ಟು ದಿನವಿಲ್ಲದ ರಾಮಮಂದಿರದ ನೆನಪು ಶಿವಸೇನೆಗೆ ಈಗೇಕಾಯ್ತು? ರಾಮಮಂದಿರದ ಕುರಿತು ಬಿಜೆಪಿಯನ್ನು ಹಳಿಯುವ ಶಿವಸೇನೆ, ತಾನೂ ಬಿಜೆಪಿಯೊಂದಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿತ್ತಲ್ಲ? ಆಗೇಕೆ ರಾಮಮಂದಿರದ ಬಗ್ಗೆ ಚಕಾರವೆತ್ತಲಿಲ್ಲ? ತಾನು ರಾಮಮಂದಿರ ವಿಷಯವನ್ನು ಕೆದಕಿ ಅಧಿಕಾರಕ್ಕೆ ಬಂದುಬಿಡುತ್ತೇನೆ ಎಂಬ ಭ್ರಮೆಯಲ್ಲಿ ಶಿವಸೇನೆ ಇದೆ. ಆದರೆ ಬಿಜೆಪಿ ಇಲ್ಲದೆ ತಾನು ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವಿಲ್ಲ ಎಂಬುದು ಅದಕ್ಕೆ ಗೊತ್ತಿಲ್ಲ" ಎಂದು ಈ ಲೇಖನದಲ್ಲಿ ಬರೆಯಲಾಗಿದೆ.

ರಾಹುಲ್ ಮಾತಿನ ಪುನರುಚ್ಚರಣೆ

ರಾಹುಲ್ ಮಾತಿನ ಪುನರುಚ್ಚರಣೆ

ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕಾಂಗ್ರೆಸ್ ಜಯಗಳಿಸಿದ ನಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಶಿವಸೇನೆ ಮನಸಾರೆ ಹೊಗಳಿತ್ತು. ಅದು ಸಾಲದೆಂಬಂತೆ, ಪ್ರಧಾನಿ ಮೋದಿ ಅವರನ್ನು, 'ಚೌಕಿದಾರ ಚೋರ' ಎಂದಿದ್ದ ರಾಹುಲ್ ಗಾಂಧಿ ಅವರ ಮಾತನ್ನೇ ಉಚ್ಚರಿಸಿ, ಬಿಜೆಪಿಗೆ ಮತ್ತಷ್ಟು ಇರಿಸುಮುರಿಸುಂಟು ಮಾಡಿತ್ತು.

ಮೋದಿಯವರಿಗೆ ಅಧಿಕಾರವೆಂದರೆ ಆಕ್ಸಿಜನ್!

ಮೋದಿಯವರಿಗೆ ಅಧಿಕಾರವೆಂದರೆ ಆಕ್ಸಿಜನ್!

'ಕಾಂಗ್ರೆಸ್ಸಿಗೆ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಅಧಿಕಾರವೆಂದರೆ ಆಕ್ಸಿಜನ್ ಇದ್ದ ಹಾಗೆ ಎನ್ನಿಸಿತ್ತು. ಅದಕ್ಕೆಂದೇ ಅವರು ಅದನ್ನು ಬಿಟ್ಟು ಎಂದಿಗೂ ಇರುತ್ತಿರಲಿಲ್ಲ' ಎಂದಿದ್ದ ಮೋದಿ ಮಾತನ್ನೇ ಶಿವಸೇನೆ ಮೋದಿಯವರತ್ತ ತಿರುಗಿಸಿತ್ತು. ಮೋದಿಯವರಿಗೂ ಅಧಿಕಾರವೆಂದರೆ ಆಕ್ಸಿಜನ್ ಇದ್ದ ಹಾಗೆ ಎಂದಿತ್ತು.

English summary
RSS-backed Marathi daily 'Tarun Bharat' launched a scathing attack on the Shiv Sena on Wednesday for targetting Prime Minister Narendra Modi, using the slogan 'Chowkidar Chor Hai'. It asked why the Uddhav Thackeray-led party did not quit the coalition government if that was the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X